Advertisement

ಫ್ರೂಟಿ, ಸಮೋಸಾ ಬೇಕಾಗಿದೆ…ಮಂಗಗಳ ಉಪಟಳದ ಬಗ್ಗೆ ಸಂಸತ್ ನಲ್ಲಿ ಹೇಮಾಮಾಲಿನಿ ಚರ್ಚೆ

09:30 AM Nov 22, 2019 | Nagendra Trasi |

ನವದೆಹಲಿ:ಮಥುರಾ ಕ್ಷೇತ್ರದಲ್ಲಿ ಬೀದಿ ಮಂಗಗಳ ಕಾಟ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಮಂಗಗಳಿಗಾಗಿಯೇ ಸಫಾರಿಯನ್ನು ನಿರ್ಮಿಸಬೇಕು ಎಂದು ಗುರುವಾರ ಸಂಸದೆ ಹೇಮಾ ಮಾಲಿನಿ ಲೋಕಸಭೆಯಲ್ಲಿ ಸಮಸ್ಯೆಯನ್ನು ಪ್ರಸ್ತಾಪಿಸಿದ್ದರು.

Advertisement

ಮಥುರಾಕ್ಕೆ ಆಗಮಿಸುವ ಪ್ರವಾಸಿಗರು ಮಂಗಗಳಿಗೆ ಫ್ರೂಟಿಯನ್ನು ನೀಡುತ್ತಿದ್ದಾರೆ. ಅಲ್ಲದೇ ಸಮೋಸಾ, ಕಚೋರಿಯನ್ನು ತಿನ್ನಲು ಕೊಡುತ್ತಿದ್ದಾರೆ. ಇದರಿಂದ ಕೇವಲ ಮಂಗಗಳ ಆರೋಗ್ಯ ಮಾತ್ರ ಪರಿಣಾಮ ಬೀರುತ್ತಿಲ್ಲ. ಸ್ಥಳೀಯ ಜನರಿಗೂ ತೊಂದರೆಯಾಗುತ್ತಿದೆ ಎಂದು ಹೇಮಾಮಾಲಿನಿ ಹೇಳಿದರು.

ಮಂಗಗಳು ನೈಸರ್ಗಿಕ ಅಭ್ಯಾಸಗಳನ್ನು ಮರೆತು ಬಿಟ್ಟಿವೆ. ಆಹಾರ ಹುಡುಕುತ್ತ ಜನವಸತಿ ಪ್ರದೇಶಗಳಿಗೆ ಮಂಗಗಳು ನುಗ್ಗಿದಾಗ ಮಥುರಾದ ಜನರು ಅವುಗಳನ್ನು ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಮಂಗಗಳ ಉಪಟಳಕ್ಕೆ ಕಠಿವಾಣ ಹಾಕಲು ಅಧಿಕಾರಿಗಳು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೆ ಕೆಲವೊಮ್ಮೆ ಅವುಗಳು ವ್ಯಗ್ರವಾಗಿ ದಾಳಿ ನಡೆಸುತ್ತವೆ. ಮಂಗಗಳ ದಾಳಿಯಲ್ಲಿ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮಥುರಾದಲ್ಲಿ ಮಂಗಗಳ ರಕ್ಷಣೆಗಾಗಿಯೇ ಸಫಾರಿ ನಿರ್ಮಿಸಬೇಕೆಂಬ ಬೇಡಿಕೆ ನನ್ನದಾಗಿದೆ. ಅಲ್ಲದೇ ಆ ಕಾಡಿನಲ್ಲಿ ಹಣ್ಣುಗಳ ಮರಗಳನ್ನು ಬೆಳೆಸಬೇಕು. ಮಂಗಗಳು ಜನರಿಂದ ಆಹಾರ ಕಸಿದು ತಿನ್ನುವುದು ಅವುಗಳ ಆರೋಗ್ಯಕ್ಕೆ ಒಳ್ಳೆಯದಲ್ಲ.ಈಗ ಮಂಗಗಳಿಗೆ ಹಣ್ಣು ಬೇಕಾಗಿಲ್ಲ, ಆದರೆ ಸಮೋಸಾ ಮತ್ತು ಫ್ರೂಟಿ ಬೇಕಾಗಿದೆ ಎಂದು ಹೇಮಾಮಾಲಿನಿ ಸಂಸತ್ ಹೊರಗೆ ಮಾತನಾಡುತ್ತ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next