Advertisement

ಜಿಲ್ಲಾಡಳಿತ ಭವನದ ಮುಂಭಾಗ ಸಿಎನ್‌ಸಿ ಸಂಘ‌ಟನೆ ಪ್ರತಿಭಟನೆ

12:30 AM Feb 23, 2019 | Team Udayavani |

ಮಡಿಕೇರಿ: ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ನೂಲ್‌ಗೆ ಸೇರಿಸಬೇಕು ಮತ್ತು ವಿಶ್ವ ಸಂಸ್ಥೆಯ ಅಧಿಕೃತ ಭಾಷೆಗಳಲ್ಲೊಂದಾಗಿ ಪರಿಗಣಿಸಬೇಕು ಎನ್ನುವುದು ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು, ಅಂತರರಾಷ್ಟ್ರೀಯ ಮಾತೃಭಾಷಾ ದಿನವಾದ ಇಂದು ಸಿಎನ್‌ಸಿ ಸಂಘ‌ಟನೆಯಿಂದ ಜಿಲ್ಲಾಡಳಿತ ಭವನದ ಮುಂಭಾಗ ಸತ್ಯಾಗ್ರಹ ನಡೆಯಿತು.    

Advertisement

ಸಿಎನ್‌ಸಿ ಅಧ್ಯಕ್ಷ ಎನ್‌.ಯು. ನಾಚಪ್ಪ ನೇತೃತ್ವದಲ್ಲಿ ಸಂಘ‌ಟನೆಯ ಕಾರ್ಯಕರ್ತರು ಸತ್ಯಾಗ್ರಹ ನಡೆಸಿ, 18 ಪ್ರಮುಖ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಮನವಿಯಲ್ಲಿ ಪ್ರಮುಖವಾಗಿ, ಆಕ್ಸ್‌ಫ‌ರ್ಡ್‌ ಶಬ್ದಕೋಶದಲ್ಲಿ ಜಗತ್ತಿನ ವಿವಿಧ ಭಾಷೆಗಳ 15 ಸಾವಿರ ಪದಗಳನ್ನು ಆಯ್ಕೆ ಮಾಡಿ ಅಳವಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದು ಈ ಆಕ್ಸ್‌ಫ‌ರ್ಡ್‌ ಶಬ್ದಕೋಶದಲ್ಲಿ ಕೊಡವ ಭಾಷೆಯ ಪದಗಳನ್ನು ಸೇರಿಸುವಂತಾಗಬೇಕು, ಜಾಗತಿಕ ನಳಂದ ವಿಶ್ವವಿದ್ಯಾನಿಲಯ, ಇಂದಿರಾಗಾಂಧಿ ಬುಡಕಟ್ಟು ವಿಶ್ವಿ‌ವಿದ್ಯಾನಿಲಯ ಮತ್ತು ಆಂಧ್ರದ ದ್ರಾವಿಡ ವಿಶ್ವವಿದ್ಯಾನಿಲಯದಲ್ಲಿ ಕೊಡವ ಶಾಸ್ತ್ರ ಮತ್ತು ಕೊಡವ ತಕ್‌Rನ ಅಧ್ಯಯನ ಪೀಠಗಳನ್ನು ಸ್ಥಾಪಿಸುವಂತೆಯೂ ಒತ್ತಾಯಿಸಲಾಗಿದೆ.

ಜ್ಞಾಪನಾ ಪತ್ರವನ್ನ  ರಾಷ್ಟ್ರಪತಿ ರಾಮನಾಥ್‌ ಖೋವಿಂದ್‌, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಮಂತ್ರಿ ರಾಜನಾಥ್‌ ಸಿಂಗ್‌ ಸೇರಿದಂತೆ ಹಲ ಗಣ್ಯರಿಗೆ ಕಳುಹಿಸಿಕೊಡಲಾಗಿದೆ.ಸತ್ಯಾಗ್ರಹದಲ್ಲಿ ಕಲಿಯಂಡ ಪ್ರಕಾಶ್‌, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಬೊಟ್ಟಂಗಡ ಸವಿತಾ, ಕಲಿಯಂಡ ಮೀನ, ಅಜ್ಜೆಟ್ಟಿರ ರಾಣಿ, ಪುಲ್ಲೆರ ಸ್ವಾತಿ, ಚಂಬಂಡ ಜನತ್‌, ಬೊಟ್ಟಂಗಡ ಗಿರೀಶ್‌, ಆರೆಯಡ ಗಿರೀಶ್‌, ಮೊಣ್ಣಂಡ ಕರಿಯಪ್ಪ, ಬೇಪಡಿಯಂಡ ಬಿದ್ದಪ್ಪ, ನಂದಿನೆರವಂಡ ವಿಜು, ಅಪ್ಪಾರಂಡ ಪ್ರಕಾಶ್‌, ಆಜ್ಜಿಕುಟ್ಟಿರ ಲೋಕೇಶ್‌, ಕಿರಿಯಮಾಡ ಶೆರಿನ್‌, ಕೂಪದಿರ ಸಾಬು, ಪುಲ್ಲೆರ ಕಾಳಪ್ಪ, ಜಮ್ಮಡ ಮೋಹನ್‌, ಮಾಚಿಮಾಡ ಲವ ಗಣಪತಿ, ಕಾಟುಮಣಿಯಂಡ ಉಮೇಶ್‌  ಮೊದಲಾದವರು ಸತ್ಯಾಗ್ರಹ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next