Advertisement
ಶುಕ್ರವಾರ ಬೆಳಗ್ಗೆ 10.30ಕ್ಕೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅಧ್ಯಕ್ಷತೆಯಲ್ಲಿ ನಡೆವ ಕಾರ್ಯಕ್ರಮದಲ್ಲಿ ವಸ್ತು ಪ್ರದರ್ಶನ, ಕೃಷಿ ಮೇಳ, ಸಾಂಸ್ಕೃತಿಕ ಮೇಳಗಳಿಗೆ ಚಾಲನೆ ದೊರೆಯಲಿದೆ. ಸಂಜೆ 4 ಗಂಟೆಗೆ ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಅಧ್ಯಕ್ಷತೆಯಲ್ಲಿ ದೇಸಿ ಆಟಗಳು, ದೋಣಿ ವಿಹಾರ, ರಂಗೋಲಿ, ಸೋಬಾನೆ ಪದ ಸ್ಪರ್ಧೆಗಳ ಉದ್ಘಾಟನೆ ನಡೆಯಲಿದೆ.
Related Articles
Advertisement
ವಾಟರ್ ಟ್ರೀಟ್ಮೆಂಟ್: ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಸೇರುವುದರಿಂದ ಸ್ವಚ್ಛತೆ ಮತ್ತು ಕುಡಿ ಯುವ ನೀರಿನ ಬಗ್ಗೆ ವಿಶೇಷ ಗಮನ ವಹಿಸ ಲಾಗಿದ್ದು, ನೀರು ಕುಡಿಯಲು ಯೋಗ್ಯ ವಾಗಿದೆಯೇ ಎಂದು ಪ್ರಯೋಗಾಲಯದಿಂದ ವರದಿಪಡೆದು ಅವಶ್ಯಬಿದ್ದರೆ ವಾಟರ್ ಟ್ರೀಟ್ಮೆಂಟ್‌ಗೂ ಕ್ರಮವಹಿಸಲಾಗಿದೆ.
10 ಲಕ್ಷ ಭಕ್ತರಿಗೆ ದಾಸೋಹ ವ್ಯವಸ್ಥೆ: ಆರು ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋ ತ್ಸವಕ್ಕೆ ನಾಡಿನ ಮೂಲೆ ಮೂಲೆಗಳಿಂದ ಸುಮಾರು 10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದ್ದು, 10 ಲಕ್ಷ ಪೇಪರ್ ಪ್ಲೇಟ್‌ಗಳನ್ನು ತರಿಸಲಾಗಿದೆ. ಜಾತ್ರೆಗೆ ಬರುವ ಭಕ್ತರ ದಾಸೋಹಕ್ಕಾಗಿ ಮಹಾ ದಾಸೋಹ ಆವರಣ 30 ಒಲೆಗಳನ್ನು ಸ್ಥಾಪಿಸಲಾಗಿದ್ದು, 500 ಮಂದಿ ಬಾಣಸಿಗರು ಅಡುಗೆ ತಯಾರಿ ಮಾಡಲಿ ದ್ದಾರೆ.
ಮಂಗಳ ಮಂಟಪದಲ್ಲಿ ಸಿಹಿ ತಿಂಡಿಗಳನ್ನು ತಯಾರಿಸಲಾಗುತ್ತಿದೆ. ಮಾನ್ವಿಯಿಂದ 1200 ಕ್ವಿಂಟಲ್ ಅಕ್ಕಿ, ಕಲಬುರಗಿಯಿಂದ 250 ಕ್ವಿಂಟಲ್ ತೊಗರಿ ಬೇಳೆ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ದಾಸೋಹಕ್ಕೆ ಬೇಕಾದ ವಸ್ತುಗಳನ್ನು ತರಿಸಲಾಗಿದೆ. ಭಕ್ತರು ತರಕಾರಿಯನ್ನು ಕಾಣಿಕೆ ಯಾಗಿ ನೀಡು ತ್ತಿದ್ದು, ತರಕಾರಿ ಹಚ್ಚಲು ಮತ್ತು ತೆಂಗಿನಕಾಯಿ ಸುಲಿಯಲು ಕೊಯಮತ್ತೂರಿನಿಂದ ಯಂತ್ರ ಗಳನ್ನು ತರಿಸಲಾಗಿದೆ.
ಪ್ರಸಾದಕ್ಕೆ ನೂಕು ನುಗ್ಗಲು ಉಂಟಾಗದಂತೆ ಸ್ವಾಮೀಜಿಗಳು, ಗಣ್ಯರನ್ನು ಹೊರತುಪಡಿಸಿ ಇತರರಿಗೆ ನಾಲ್ಕು ಕಡೆಗಳಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಸುಳ್ವಾಡಿ ಪ್ರಕರಣದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಮಹಾ ದಾಸೋಹದ ಆವರಣದಲ್ಲಿ 20 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಜೊತೆಗೆ ಇದೇ ಮೊದಲ ಬಾರಿಗೆ ಜಾತ್ರೆಯಲ್ಲಿ ಸೇವೆ ಸಲ್ಲಿಸುವ ಸ್ವಯಂ ಸೇವಕರಿಗಾಗಿ 2500 ಸ್ಟೀಲ್ ಪ್ಲೇಟ್‌ಗಳನ್ನು ವಿತರಿಸಲಾಗಿದೆ. ಈ ಪ್ರಯೋಗ ಯಶಸ್ವಿಯಾದರೆ ಮುಂದಿನ ವರ್ಷದಿಂದ ಎಲ್ಲರಿಗೂ ಸ್ಟೀಲ್ ಪ್ಲೇಟ್ ನೀಡಲು ಚಿಂತನೆ ನಡೆದಿದೆ.