ಶ್ರವಣಬೆಳಗೊಳ: ಐತಿಹಾಸಿಕ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಅಕ್ಷರಾಭಿಷೇಕ ಬಹು ಮುಖ್ಯ ಎಂದು ಶ್ರವಣಬೆಳಗೊಳ ದಿಗಂಬರ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಮಣಿಪಾಲ್ ಮೀಡಿಯಾ ಸಮೂಹದ ತರಂಗ ವಾರಪತ್ರಿಕೆ ಹೊರ ತಂದಿರುವ ವಿಶೇಷ ಸಂಚಿಕೆಯನ್ನು ರವಿವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು. ತರಂಗ ವಾರಪತ್ರಿಕೆ ಬಾಹುಬಲಿ ಚರಿತ್ರೆ, ತಪಸ್ಸನ್ನು ಪರಿಚಯಿಸುವ ವಿಶೇಷ ಸಂಚಿಕೆ ಹೊರತರುವ ಮೂಲಕ ಮಹಾ ಮಸ್ತಕಾಭಿಷೇಕಕ್ಕೂ ಮುನ್ನ ಅಕ್ಷರಾಭಿಷೇಕ ಮಾಡಿರು ವುದು ಶ್ಲಾಘನೀಯ. ತರಂಗವು ಎಲ್ಲರ ಅಂತರಂಗದ ಭಕ್ತಿ ಯಲ್ಲಿ ತರಂಗಗಳನ್ನು ಸೃಷ್ಟಿಸುವ ರೀತಿಯಲ್ಲಿ ಮುಖಪುಟ ಆಕರ್ಷಕವಾಗಿ ಮೂಡಿಬಂದಿದೆ. ವಾರಪತ್ರಿಕೆಯಲ್ಲಿ ಭಗವಾನ್ ಬಾಹುಬಲಿ ವಿರಾಜಮಾನರಾಗಿಸಿ ಎಲ್ಲರ ಅಂತರಂಗವನ್ನು ಪ್ರವೇಶಿಸುವ ಕಾರ್ಯ ಮಾಡಿರುವುದಕ್ಕೆ ವ್ಯವಸ್ಥಾಪಕ ಸಂಪಾದಕರಾದ ಸಂಧ್ಯಾ ಪೈ ಅವರನ್ನು ಅಭಿನಂದಿಸುತ್ತೇನೆ ಎಂದರು. ಬಾಹುಬಲಿ ಸ್ವಾಮಿಗೆ ಇತರ ಅಭಿಷೇಕದಂತೆ ಅಕ್ಷರ ಅಭಿಷೇಕವೂ ಬಹಳ ಮುಖ್ಯ. ಅಕ್ಷರಾಭಿಷೇಕದ ಮೂಲಕ ಎಲ್ಲರ ಮನಸ್ಸಿನಲ್ಲಿರುವ ಅಜ್ಞಾನ, ಮೋಹ, ವೈಷಮ್ಯ, ರಾಗ-ದ್ವೇಷ ದೂರ ಮಾಡುವ ಕಾರ್ಯವನ್ನು ತರಂಗ ಯಶಸ್ವಿಯಾಗಿ ನಿರ್ವಹಿಸಿದೆ ಎಂದು ಹೇಳಿದರು. ಮಂಡೆ ಪೂಜೆ ಆಕರ್ಷಕ ತಲೆಬರಹ ತರಂಗ ವಾರಪತ್ರಿಕೆಯು ಮಹಾಮಸ್ತಕಾಭಿ ಷೇಕ ಪ್ರಯುಕ್ತ ಒಳ್ಳೆಯ ಕಾರ್ಯ ಮಾಡಿದೆ. ಬೆಳಗೊಳದ ಶ್ರವಣಪ್ಪನಿಗೆ 88ನೇ ಮಂಡೆ ಪೂಜೆ ತಲೆಬರಹದ ಸಂಚಿಕೆ ಆಕರ್ಷಕ ವಾಗಿದೆ. ದೇಶೀಯ ಗ್ರಾಮೀಣ ಭಾಷೆಗೆ ಮಹತ್ವ ನೀಡಿದ್ದು, ತರಂಗ ಪತ್ರಿಕೆಯ ಕಳಕಳಿಯನ್ನು ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೃದಯ ತುಂಬಿ ಬಂದಿದೆ: ಸಂಧ್ಯಾ ಪೈ ತರಂಗ ವ್ಯವಸ್ಥಾಪಕ ಸಂಪಾದಕರಾದ ಡಾ| ಸಂಧ್ಯಾ ಪೈ ಅವರು ಮಾತನಾಡಿ, “ಸಜ್ಜನರ ಸಂಘ ಹೆಜ್ಜೆàನು ಸವಿದಂತೆ’ ಎಂಬ ಮಾತಿನಂತೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾತಿನಿಂದ ಹೃದಯ ತುಂಬಿ ಬಂದಿದೆ ಎಂದರು. ಮಹಾಮಸ್ತಕಾಭಿಷೇಕ ಸೇರಿದಂತೆ ಯಾವುದೇ ಒಳ್ಳೆಯ ಕೆಲಸಕ್ಕೆ ತರಂಗಕ್ಕೆ ಸುಕೃತ ಒದಗಿ ಬರುತ್ತದೆ. ಯೋಗಾ ಯೋಗ ಎಂಬಂತೆ ಸ್ವಾಮೀಜಿಯವರು ವಾರಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದ್ದಾರೆ. ಇಂತಹ ಮಹತ್ಕಾರ್ಯಕ್ಕೆ ಸಿದ್ಧತೆಯೂ ಕೂಡಿ ಬರುತ್ತದೆ.
ಇದೆಲ್ಲ ಸದ್ಗುರುಗಳ ಅನುಗ್ರಹ ಎಂದು ಹೇಳಿದರು. ತರಂಗ ಕಾರ್ಯನಿರ್ವಾಹಕ ಸಂಪಾದಕರಾದ ಡಾ| ಯು.ಬಿ. ರಾಜಲಕ್ಷಿ ¾à, ತರಂಗದಲ್ಲಿ ಹಿಂದಿನ ಎರಡು ಮಹಾ ಮಸ್ತಕಾಭಿಷೇಕ ಸೇರಿದಂತೆ ಮೂರು ವಿಶೇಷ ಸಂಚಿಕೆ ತರಲಾಗಿದೆ. ಕಾರ್ಕಳ, ವೇಣೂರು, ಮಹಾ ಮಸ್ತಕಾಭಿಷೇಕ, ಸಲ್ಲೇಖನ ವ್ರತದ ಬಗ್ಗೆಯೂ ವಿಶೇಷ ಸಂಚಿಕೆ ಹೊರತರಲಾಗಿತ್ತು ಎಂದು ತಿಳಿಸಿದರು. ಈ ವೇಳೆ ಸ್ಥಳೀಯ ಶಾಸಕ ಸಿ.ಎನ್. ಬಾಲಕೃಷ್ಣ, ಮಹಾಮಸ್ತಕಾಭಿಷೇಕದ ಮಾಧ್ಯಮ ಸಂಯೋಜಕ ಮದನ್ ಗೌಡ, ಉದಯವಾಣಿ ಬೆಂಗಳೂರು ಆವೃತ್ತಿ ಸಂಪಾದಕ ಶಿವಸುಬ್ರಹ್ಮಣ್ಯ, ಬ್ಯುಸಿನೆಸ್ ಡೆವಲಪ್‌ಮೆಂಟ್ ವಿಭಾಗದ ಡಿಜಿಎಂ ಸತೀಶ್ ಶೆಣೈ ಹಾಜರಿದ್ದರು. ಪ್ರಧಾನಿ ಮೋದಿ ಭೇಟಿ ಸಾಧ್ಯತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಹೋ ತ್ಸವಕ್ಕೆ ಚಾಲನೆ ನೀಡಿದ್ದಾರೆ. ಪ್ರಧಾನ ಮಂತ್ರಿಯವರೂ ಭೇಟಿ ನೀಡುವ ನಿರೀಕ್ಷೆ ಇದೆ. ಜತೆಗೆ ಮಧ್ಯಪ್ರದೇಶ, ಗುಜರಾತ್‌ನ ಮುಖ್ಯಮಂತ್ರಿ ಗಳು ಭೇಟಿಗೆ ದಿನಾಂಕ ನಿಗದಿಗೆ ಕೋರಿದ್ದಾರೆ.
ಹಾಗೆಯೇ ಹಲವು ರಾಜ್ಯಗಳ ರಾಜ್ಯಪಾಲರು, ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳ ನ್ಯಾಯಮೂರ್ತಿಗಳು, ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಶ್ರವಣಬೆಳಗೊಳ ದಿಗಂಬರ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದ್ದಾರೆ. ದೇಶದ ಮಹತ್ವಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮವಾದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವವನ್ನು ಒಂದು ಕೈಯಿಂದ ನಿರ್ವಹಿಸಲು ಸಾಧ್ಯವಿಲ್ಲ. ಎರಡು ಕೈ ಸೇರಿದರೆ ಯಶಸ್ವಿಯಾಗಿ ನಿರ್ವಹಿಸಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುದಾನ ನೀಡಿ ಪ್ರೋತ್ಸಾಹ ನೀಡಿದ್ದಾರೆ. ಒಟ್ಟಾರೆ ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆದಿದೆ ಎಂದು ತಿಳಿಸಿದ್ದಾರೆ.