Advertisement

ಶಿಖರದಿಂದ, ಮತ್ತೊಂದು ಶಿಖರದ ವರ್ಣನೆ

04:32 AM Jun 09, 2020 | Lakshmi GovindaRaj |

ಗುರುವರ್ಯ ರವೀಂದ್ರನಾಥ ಠಾಕೂರರ ನ್ನು ಕುರಿತಾಗಿ ಕನ್ನಡದಲ್ಲಿ ಇರುವ ಸಾಹಿತ್ಯ ಕಡಿಮೆಯೇ, ಆದರೆ ಇರುವುದು ಬಹಳ ತೂಕದ್ದು. 1930ರ ದಶಕದಲ್ಲಿ ಮೈಸೂರು ವಿವಿಯು ಕೆಲವು ಅಮೂಲ್ಯ ಕೃತಿಗಳನ್ನು ಪ್ರಕಟಿ ಸಲು  ಉದ್ದೇಶಿಸಿ, ಗುರುವರ್ಯ ರವೀಂದ್ರ ನಾಥ ಠಾಕೂರರನ್ನು ಕುರಿತಾಗಿ ಬರೆಯಲು ಮಾಸ್ತಿ ಅವರನ್ನು ವಿನಂತಿ ಸಿತು. ಅದನ್ನೊಪ್ಪಿದ ಮಾಸ್ತಿಯವರು, ಶಾಂತಿನಿಕೇತನಕ್ಕೆಹೋಗಿ ಠಾಕೂರರೊಂದಿಗೆ ಮಾತನಾಡಿ, ತತಲವೆಂಬಂತೆ ಈ ಪುಸ್ತಕ ರಚಿಸಿದ್ದಾರೆ.

Advertisement

ಶಾಂತಿನಿಕೇತನದಲ್ಲಿ ಚಿತ್ರಕಲೆ ಅಧ್ಯಯನ ಮಾಡುತ್ತಿದ್ದ ಮಾರ್ತಾಂಡ  ಜೋಶಿಯವರು, ಠಾಕೂರರ ಚಿತ್ರವೊಂದನ್ನು ಮಾಸ್ತಿಯವರಿಗೆ ಕಳುಹಿಸಿದರು. ಅದರ ಆಧಾರದಿಂದ, ಶಿವರಾಮ ಕಾರಂತರು ತೈಲಚಿತ್ರವನ್ನು ಬರೆಯಿಸಿಕೊಟ್ಟರು. ಅದನ್ನು ಮುಖಪುಟವಾಗಿ ಬಳಸಲಾಗಿದೆ. ಠಾಕೂರರ ಬದುಕು- ಬರಹವನ್ನು ಕುರಿತಾದ ಸಮಗ್ರ ಬರಹ, ಈ ಪುಸ್ತಕ. ಪ್ರಸ್ತಾವನೆ, ಠಾಕೂರರ ಕಾಲ, ದೇಶ, ಭಾಷೆ, ಜೀವನ ಚರಿತ್ರೆ ಇದು ಮೊದಲ ಭಾಗ.

ಇಲ್ಲಿ ಠಾಕೂರರ ಕಾಲ, ದೇಶ  ಭಾಷೆಯನ್ನು ಕುರಿತಾದ ಸತ್ವಪೂರ್ಣ ಮಾಹಿತಿಯಿದೆ. ಆನಂತರ ಠಾಕೂರರ ಕಾವ್ಯ, ನಾಟಕ, ಕತೆ, ಭಾಷಣ- ಲೇಖನಗಳು ಇತ್ಯಾದಿಗಳನ್ನು ಕುರಿತಾದ ವಿಸ್ತೃತವಾದ ಲೇಖನಗಳಿವೆ. ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡ ವಿರೋಧಿಸಿ  ಬ್ರಿಟಿಷ್‌ ಸಾಮ್ರಾಜ್ಯ ನೀಡಿದ್ದ ನೈಟ್‌ಹುಡ್‌ (ಸರ್‌) ಪ್ರಶಸ್ತಿಯನ್ನು ಠಾಕೂರರು ಹಿಂದಿರುಗಿಸಿದ್ದರ ವಿವರಣೆ ಇದೆ. ಪುಸ್ತಕದಲ್ಲಿ ಅತ್ಯುತ್ತಮ ಚಿತ್ರಗಳು, ರೇಖಾಚಿತ್ರಗಳೂ ಇವೆ. ನಮ್ಮನ್ನು ಬೌದಿಕವಾಗಿ ಶ್ರೀಮಂತವಾಗಿಸುವ ಪುಸ್ತಕವಿದು.

ಪುಸ್ತಕ: ರವೀಂದ್ರನಾಥ ಠಾಕೂರರು
ಲೇಖಕರು: ಮಾಸ್ತಿ ವೆಂಕಟೇಶ ಅಯ್ಯಂಗಾರ್‌
ಪ್ರಕಾಶಕರು: ಮಾಸ್ತಿ ಸಾಹಿತ್ಯ ಸಂಪದ (ಮೊದಲ ಪರಿಷ್ಕೃತ ಗಣಕ ಮುದ್ರಣ)

* ಕಲ್ಗುಂಡಿ ನವೀನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next