Advertisement

ದಲಿತ ಸಮಾಜದಿಂದ ದೇಶದ ಹೋರಾಟಕ್ಕೆ ನಾಂದಿ

09:20 PM Mar 16, 2020 | Lakshmi GovindaRaj |

ಪಿರಿಯಾಪಟ್ಟಣ: ದೇಶ ಇತಿಹಾಸದಲ್ಲಿ ಚಳುವಳಿ ಕಟ್ಟಿ ಹೋರಾಟದ ಕಹಳೆ ಊದಿದ ಹೆಗ್ಗಳಿಕೆ ದಲಿತ ಸಮಾಜಕ್ಕೆ ಸಲ್ಲಬೇಕು ಎಂದು ಮೈಸೂರು ಮಹಾರಾಣಿ ಕಲಾ ಕಾಲೇಜಿನ ಉಪನ್ಯಾಸಕ ಪ್ರೊ.ಪುಟ್ಟರಾಜು ತಿಳಿಸಿದರು. ಪಟ್ಟಣದ ರೋಟರಿ ಭವನದಲ್ಲಿ ಭಾನುವಾರ ಇತ್ತಿಚೆಗೆ ನಿವೃತ್ತಿ ಹೊಂದಿದ ಡಿ.ಚನ್ನವೀರಯ್ಯರವರಿಗೆ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಪರಿಶಿಷ್ಟ ಜಾತಿ ಪಂಗಡದ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಜಗತ್ತಿನ ಜ್ಞಾನದ ಪಿತಾಮಹ ಎಂದು ಕರೆಯಲ್ಪಡುವ ಡಾ.ಬಿ.ಆರ್‌. ಅಂಬೇಡ್ಕರ್‌ ರವರ ಹೆಸರಿನಲ್ಲಿ ಸಂಘ ಸಂಸ್ಥೆಗಳನ್ನು ಕಟ್ಟಿ, ಅವರ ವಿಚಾರ ಧಾರೆಗಳನ್ನು ಜಗತ್ತಿಗೆ ಬಿತ್ತರಿಸಿದವರು ಲಕ್ಷಾಂತರ ಜನ ದಲಿತ ಹೋರಾಟಗಾರರು. ಅಂಬೇಡ್ಕರ್‌ ರವರ ಹೆಸರಿನಲ್ಲಿ ಬದುಕುತ್ತಿರುವ ಅವರು ಕೊಟ್ಟ ಹಕ್ಕುಗಳು ಮತ್ತು ಸವಲತ್ತುಗಳನ್ನು ಅನುಭವಿಸುತ್ತಿರುವ ಭಾರತೀಯರು ಮರೆಯುತ್ತಿರುವುದು ಬೇಸರದ ಸಂಗತಿ ಎಂದರು.

ಶಿಕ್ಷಕ ವಿದ್ಯಾರ್ಥಿಗಳಲ್ಲಿ ದೇಶ ಕಟ್ಟುವ ಎದೆಗಾರಿಕೆಯನ್ನು ರೂಪಿಸಿ, ಅವರನ್ನು ರಾಷ್ಟ್ರಕ್ಕೆ ಅರ್ಪಿಸುವ ಕೆಲಸ ಸದಾ ಮಾಡುತ್ತಿರುತ್ತಾನೆ. ಶಿಕ್ಷಕರು ತಮ್ಮ ತ್ಯಾಗ ಮತ್ತು ಸಮರ್ಪಣಾ ಮನೋಭಾವದಿಂದಲೇ ತಮ್ಮ ಶಿಷ್ಯರ ಮನಃ ಪಟಲದಲ್ಲಿ ಸದಾ ನಿಲ್ಲುತ್ತಾರೆ. ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ನಿರ್ಮಾಣ ಉತ್ತಮ ಶಿಕ್ಷಕರಿಂದಲೇ ಎಂಬುದನ್ನು ಇತಿಹಾಸ ಸಾರೀ ಹೇಳಿದೆ ಎಂದರು.

ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಈರಯ್ಯ ಮಾತನಾಡಿ, ಡಿ.ಚನ್ನವೀರಯ್ಯನವರು ನೇರ ಮತ್ತು ದಿಟ್ಟತನದ ಮೂಲಕ ತಾಲೂಕಿನಲ್ಲಿ ಸಾವಿರಾರು ಶಿಷ್ಯಕೋಟಿಯನ್ನು ಹೊಂದಿರುವುದಲ್ಲದೆ, ಸಾಮಾಜಿಕವಾಗಿ ತನ್ನನು ತಾನು ತೊಡಗಿಸಿಕೊಂಡಿ¨ªಾರೆ. ಇವರು ಬಡವರ ನಿರ್ಗತಿಕರ ಮತ್ತು ಮಹಿಳಾ ಸಬಲೀಕರಣದ ಪರ ಹೋರಾಟ ಮಾಡುತ್ತಿರುವುದು ಹೆಮ್ಮಯ ವಿಚಾರ. ಇವರು ಉತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸಿರುವುದನ್ನು ಗಮನಿಸಿ ಹಲವು ಪ್ರಶಸ್ತಿಗಳು ಇವರನ್ನು ಹರಿಸಿ ಬಂದಿರುವುದು ಸಂತೋಷದಾಯಕ ಎಂದರು.

ದಸಂಸ ಮುಖಂಡ ಪಿ.ಮಹದೇವ್‌ ಮಾತನಾಡಿ, ಕೆ.ಆರ್‌.ನಗರ ಹಾಗೂ ಪಿರಿಯಾಪಟ್ಟಣದ ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಡಿ.ಚನ್ನವೀರಯ್ಯನವರು ಶಿಕ್ಷಣ ತಜ್ಞರಾಗಿ ಹಲವು ಜನಪರ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡವರು. ಇವರು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿ ಜನಮನ್ನಣೆಗಳಿಸಿದವರು ಇವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

Advertisement

ಎಪಿಎಂಸಿ ಅಧ್ಯಕ್ಷ ರಾಜಯ್ಯ, ತಾಲೂಕು ಎಸ್ಸಿಎಸ್ಟಿ ನೌಕರರ ಸಂಘದ ಉಪಾಧ್ಯಕ್ಷ ಎನ್‌.ಆರ್‌. ಕಾಂತರಾಜ್‌, ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳಾದ ಸಿ.ಎಸ್‌.ಜಗದೀಶ್‌, ಜೆ.ಮೋಹನ್‌, ವಾಜೀದ್‌ ಖಾನ್‌, ಅಣ್ಣಯ್ಯ, ಪಿ.ಪಿ.ಮಹದೇವ್‌, ಹೊನ್ನೂರಯ್ಯ, ಚೌತಿ ಮಲ್ಲಣ್ಣ, ಸೋಮಶೇಖರ್‌, ಆರ್‌. ಡಿ. ಮಹದೇವ್‌, ಸುರೇಶ್‌, ಆಯಿತನಹಳ್ಳಿ ಗಣೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next