Advertisement

ನಿಸ್ವಾರ್ಥ ಸೇವೆಯಿಂದ ಸಮಾಜಕ್ಕೆ ಮಾದರಿಯಾಗಿ

12:37 PM May 10, 2017 | |

ಚನ್ನಗಿರಿ: ತ್ಯಾಗ-ಸೇವೆಗಳಿಗೆ ವಿಶೇಷ ಅರ್ಥಕೊಟ್ಟು ಸಮಾಜಕ್ಕೆ ಮಾದರಿಯಂತೆ ಮನುಷ್ಯ ಬದುಕಬೇಕು ಎಂದು ರಾಂಪುರ ಬೃಹನ್ಮಠದ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 

Advertisement

ಪಟ್ಟಣದ ಕೇದಾರ ಶಾಖಾ ಹಿರೇಮಠದಲ್ಲಿ ಶ್ರೀ ಘಂಟಾಕರ್ಣ, ವೀರಭದ್ರೇಶ್ವರ ಮತ್ತು ಭದ್ರಕಾಳಿ ದೇವಿಯ ನೂತನ ದೇವಾಲಯ ಉದ್ಘಾಟನೆ ಹಾಗೂ ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ, ಗೋಪುರದ ಕಳಸಾರೋಹಣ ಪ್ರಯುಕ್ತ ಆಯೋಜಿಸಿದ್ದ ಧರ್ಮಸಭೆ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. 

ಮಠ-ಮಾನ್ಯಗಳಿಂದ ಧಾರ್ಮಿಕತೆ ಪಾಲನೆಯಾಗುತ್ತಿದೆ. ಗುರು ಇದ್ದರೆ ಗುರಿ ಮುಟ್ಟಲು ಸಾಧ್ಯೆಂಬುದು ನಿಜಕ್ಕೂ ಸತ್ಯ. ಮಠಗಳ ಪೀಠಾಧಿಪತಿಗಳಿಂದ ಮಾತ್ರ ಭಾರತೀಯ ಸಂಸ್ಕೃತಿ ಆಚಾರ-ವಿಚಾರಗಳನ್ನು ಉಳಿಸಲು ಸಾಧ್ಯ. ಸ್ವಾರ್ಥವಿಲ್ಲದೇ ಸಮಾಜಮುಖೀ ಆದವರನ್ನು ಈ ಜಗತ್ತು ಹೆಚ್ಚುಕಾಲ ನೆನಪಿನಲ್ಲಿಟ್ಟುಕೊಳ್ಳುತ್ತದೆ.

ರಾಜನ ಕಿರೀಟಕ್ಕಿಂತ ಸಾಧಕನ ಪಾದುಕೆಗಳ ಪೂಜೆ ಮಾಡುವ ಸಂಸ್ಕೃತಿಯಿರುವ ದೇಶ ನಮ್ಮದು ಎಂದರು. ಸಮಾಜವನ್ನು ಪ್ರೀತಿಯ ತೆಕ್ಕೆಯಲ್ಲಿ ತಬ್ಬಿಕೊಳ್ಳಬೇಕು. ಬೆಂಕಿಯಂತಹ ಮನಸ್ಸನ್ನು ಬೆಳಕನ್ನಾಗಿಸಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಎಲ್ಲಾ ಸಮಸ್ಯೆಗಳಿಗೆ ಅಧ್ಯಾತ್ಮದ ಮೂಲಕ ಪರಿಹಾರ ಕಂಡುಕೊಳ್ಳಬಹುದು.

ವಿಜ್ಞಾನದ ತಳಹದಿಯ ಮೇಲೆ ಧಾರ್ಮಿಕ ಆಚರಣೆಗಳ ಪರಿಪಾಠ ಮಾಡಿಕೊಂಡು ಸಾಗಬೇಕು ಎಂದರು. ಮನುಷ್ಯ ಕೇವಲ ಧನವಂತನಾದರೆ ಸಾಲದು, ಧರ್ಮವಂತನಾಗಿ ಬದುಕಬೇಕು. ಧರ್ಮದ ಪರಿಪಾಲನೆ ಆಗುತ್ತಿಲ್ಲ. ಭಾರತೀಯ ಸಂಸ್ಕೃತಿ ಆಚಾರ-ವಿಚಾರಗಳನ್ನು ಬದಿಗೊತ್ತಿ ಜೀವನದಲ್ಲಿ ಮುನ್ನಡೆಯುತ್ತಿದ್ದಾನೆ. 

Advertisement

ಮುಂದೊಂದು ದಿನಕ್ಕೆ ಇದಕ್ಕೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಅದ್ದರಿಂದ ಇಂದಿನಿಂದಲೇ ಎಚ್ಚೆತ್ತು ಸಮಾಜದ ಅಭಿವೃದ್ಧಿಗೆ ಒತ್ತುನೀಡಬೇಕು ಎಂದರು. ತಾವರಕೆರೆ ಜಿಪಂ ಸದಸ್ಯ ಎಂ. ಯೋಗೇಶ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಮೌಲ್ಯಗಳು ಕಣ್ಮರೆಯಾಗುತ್ತಿವೆ.

ಸ್ವಾರ್ಥ ಜೀವನದಲ್ಲಿ ಬದುಕುತ್ತಿರುವ ಮನುಷ್ಯನಿಗೆ ನೆಮ್ಮದಿಯ ಜೀವನ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸಮಾಜದ ಸುಧಾರಣೆಗೆ ಮಠಾಧಿಧೀಶರ ಪಾತ್ರ ಬಹುಮುಖ್ಯವಾಗಿದೆ. ಮಠಗಳ ಬೆಳವಣಿಗೆಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದರು. ಎಂ.ಬಿ. ನಾಗರಾಜ್‌ ಮಾತನಾಡಿ. ಸಾಮಾಜಿಕ-ಧಾರ್ಮಿಕ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು.

ಪಾಶ್ಚಿಮಾತ್ಯ ಸಂಸ್ಕೃತಿಯ ಹಾವಳಿಯಿಂದ ಭಾರತೀಯ ಸಂಸ್ಕೃತಿ ವಿನಾಶದತ್ತ ಹೋಗುತ್ತಿದೆ. ಯುವಕರು ಸಂಸ್ಕಾರ ಮನೋಭಾವವಿಲ್ಲದೆ ಜೀವನ ಸಾಗಿಸುತ್ತಿದ್ದಾರೆ. ಮೊದಲು ಯುವ ಸಮೂಹದಲ್ಲಿ ಧಾರ್ಮಿಕ ಮನೋಭಾವ ಸಾರಬೇಕು ಎಂದು ಹೇಳಿದರು. 

ಹಾಲಸ್ವಾಮಿ ವಿರಕ್ತಮಠದ ಶ್ರೀ ಜಯದೇವ ಸ್ವಾಮೀಜಿ, ಹೊಟ್ಯಾಪುರ ಹಿರೇಮಠದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಯರಗುಂಟೆ ಪರಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಮಾಡಳ್‌ ವಿರೂಪಾಕ್ಷಪ್ಪ, ಮಹಾಂತೇಶ್‌ ಶಾಸ್ತ್ರಿ, ಎಂ.ಬಿ. ನಾಗರಾಜ್‌ ಮುಂತಾದವರು ಉಪಸ್ಥಿತರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next