Advertisement
ಬುಧವಾರ ಮತ್ತು ಗುರುವಾರ ರಾತ್ರಿ ವೇಳೆ ಬೆಳಕಿಗಾಗಿ ಅಕ್ಷರಶ ಪರದಾಡಿದ ಸುಳ್ಯದ ನಗರ ಮತ್ತು ಕೆಲ ಗ್ರಾಮಾಂತರ ಪ್ರದೇಶದ ನಿವಾಸಿಗಳು ಮೆಸ್ಕಾಂಗೆ ಕರೆ ಮಾಡಿ ಸುಸ್ತಾಗಿದ್ದಾರೆ. ಪರೀಕ್ಷೆ ನಡೆಯುತ್ತಿರುವ ಕಾರಣ ಪರ್ಯಾಯ ವ್ಯವಸ್ಥೆಗೆ ಮೊರೆ ಹೋಗಲೇಬೇಕಾದ ಕಾರಣ, ಕೆಲ ಮನೆಗಳಲ್ಲಿ ಖಾಲಿ ಬಾಟ್ಲಿ ಬಳಸಿ ಅದಕ್ಕೆ ಎಣ್ಣೆ ಹೊಯ್ದು ಬೆಳಕು ಕಂಡುಕೊಂಡಿದ್ದಾರೆ.
ಬುಧವಾರ ಮತ್ತು ಗುರುವಾರ ಸುರಿದ ಮಳೆಗೆ ಪುತ್ತೂರು ಮತ್ತು ಸುಳ್ಯ ತಾಲೂಕಿನಲ್ಲಿ 110 ವಿದ್ಯುತ್ ಕಂಬಗಳಿಗೆ, ಹಲವು ಟಿ.ಸಿ. ಪರಿವರ್ತಕ, ಗೃಹ ವಿದ್ಯುತ್ ಉಪಕರಣಗಳಿಗೆ ಹಾನಿ ಉಂಟಾಗಿದೆ. ಮೆಸ್ಕಾಂ ನೀಡಿದ ಮಾಹಿತಿ ಪ್ರಕಾರ 15 ಲಕ್ಷ ರೂ. ನಷ್ಟು ನಷ್ಟ ಸಂಭವಿಸಿದೆ. ಈಗಾಗಲೇ ಹಾನಿಗೀಡಾದ ವಿದ್ಯುತ್ ಕಂಬ ದುರಸ್ತಿ ಪ್ರಗತಿಯಲ್ಲಿದ್ದು, ಅಂತಿಮ ಹಂತಕ್ಕೆ ತಲುಪಿಲ್ಲ.
Related Articles
ಹೊಗೆ ಮುಕ್ತ ಜಿಲ್ಲೆಯ ನೆಪದಲ್ಲಿ ಸೀಮೆ ಎಣ್ಣೆ ವಿತರಣೆಗೆ ಕಡಿವಾಣ ಬಿದ್ದಿದೆ. ಹಾಗಾಗಿ ಚಿಮಿಣಿ ದೀಪ ಉರಿಸಲು ಎಣ್ಣೆ ಸಮಸ್ಯೆ ಕಾಡಿದೆ. ಉಳಿದ ತೆಂಗಿನ ಎಣ್ಣೆ. ಇತ್ಯಾದಿ ಬಗೆಯ ಎಣ್ಣೆಗಳನ್ನು ದೀಪಕ್ಕೆ ಬಳಸಲಾಗುತ್ತಿದೆ. ಆದರೆ ಇಲ್ಲಿ ಜನರಿಗೆ ಒಟ್ಟು ವ್ಯವಸ್ಥೆಯಲ್ಲೇ ಪರದಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
Advertisement