Advertisement

ಹೈಕೋರ್ಟ್‌ಗೆ ಇಂದಿನಿಂದ ಅ.5ರವರೆಗೆ ದಸರಾ ರಜೆ

11:29 PM Sep 29, 2019 | Team Udayavani |

ಬೆಂಗಳೂರು: ಹೈಕೋರ್ಟ್‌ಗೆ ಸೆ.30ರಿಂದ ಅ.5ರವರೆಗೆ ದಸರಾ ರಜೆ ಇರಲಿದೆ. ಈ ಅವಧಿಯಲ್ಲಿ ಬೆಂಗಳೂರು ಪ್ರಧಾನ ಪೀಠದಲ್ಲಿ ಅ.1 ಮತ್ತು ಧಾರವಾಡ, ಕಲಬುರಗಿ ನ್ಯಾಯಪೀಠಗಳಲ್ಲಿ ಅ.4ರಂದು ಒಂದು ದಿನ ರಜಾ ಕಾಲದ ವಿಶೇಷ ನ್ಯಾಯಪೀಠಗಳು ಕಾರ್ಯ ನಿರ್ವಹಿಸಲಿವೆ.

Advertisement

ಬೆಂಗಳೂರು ಪ್ರಧಾನ ಪೀಠದಲ್ಲಿ ಅ.1ರಂದು ರಜಾ ಕಾಲದ ವಿಶೇಷ ನ್ಯಾಯಪೀಠ ಕಾರ್ಯ ನಿರ್ವಹಿಸಲಿದ್ದು, ನ್ಯಾ.ಎಚ್‌.ಟಿ. ನರೇಂದ್ರಪ್ರಸಾದ್‌ ಹಾಗೂ ನ್ಯಾ.ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ನ್ಯಾ.ಎಚ್‌.ಟಿ. ನರೇಂದ್ರಪ್ರಸಾದ್‌, ನ್ಯಾ.ಎಚ್‌.ಪಿ.ಸಂದೇಶ್‌ ಹಾಗೂ ನ್ಯಾ.ಪಿಜಿಎಂ ಪಾಟೀಲ್‌ ಅವರುಗಳ ಏಕಸದಸ್ಯ ನ್ಯಾಯಪೀಠ ಕಾರ್ಯ ನಿರ್ವಹಿಸಲಿದೆ.

ಅದೇ ರೀತಿ, ಅ.4ರಂದು ಧಾರವಾಡ ಪೀಠದಲ್ಲಿ ನ್ಯಾ.ಬಿ.ಎ.ಪಾಟೀಲ್‌ ಹಾಗೂ ನ್ಯಾ.ಎಸ್‌.ಆರ್‌. ಕೃಷ್ಣಕುಮಾರ್‌ ಅವರ ವಿಭಾಗೀಯ ನ್ಯಾಯಪೀಠ ಹಾಗೂ ಅವರುಗಳ ಪ್ರತ್ಯೇಕ ಏಕಸದಸ್ಯ ನ್ಯಾಯಪೀಠ ಕಾರ್ಯ ನಿರ್ವಹಿಸಲಿದೆ. ಕಲರಬುರಗಿ ನ್ಯಾಯಪೀಠದಲ್ಲಿ ನ್ಯಾ. ಎನ್‌.ಕೆ. ಸುಧೀಂದ್ರರಾವ್‌ ಹಾಗೂ ನ್ಯಾ.ಸಚಿನ್‌ ಎಸ್‌.ಮಗದುಮ್‌ ಅವರ ನ್ಯಾಯಪೀಠಗಳು ಕಾರ್ಯ ನಿರ್ವಹಿಸಲಿವೆ ಎಂದು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next