Advertisement
ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಜಿಲ್ಲಾದ್ಯಂತ ತರಗತಿ ಮರು ಆರಂಭಗೊಳ್ಳುತ್ತಿದ್ದು ನಗರ ಪ್ರದೇಶದ ಪ್ರಾಥಮಿಕ ತರಗತಿಗಳು ಮಕ್ಕಳ ಸ್ವಾಗತಕ್ಕೆ ಶಾಲೆಗಳು ಸಜ್ಜಾಗಿವೆ. ಒಂದೂವರೆ ವರ್ಷದಿಂದ ಶಾಲಾ ವಾತಾವರಣದಿಂದ ದೂರವಾಗಿದ್ದ ಪುಟಾಣಿಗಳನ್ನು ಮರಳಿ ಶಾಲಾ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಹೆಗಲೇರಿದೆ. ಅಂತೂ, ಆನ್‌ಲೈನ್ ತರಗತಿಗಾಗಿ ಮೊಬೈಲ್ ಪರದೆಯಲ್ಲಿ ತಲ್ಲೀನರಾಗಿದ್ದ ಪುಟಾಣಿಗಳು ಇನ್ನು ಮುಂದೆ ಶಾಲೆಯ ಕರಿಹಲಗೆಯತ್ತ ದೃಷ್ಟಿ ಇಡಲಿದ್ದಾರೆ.
Related Articles
Advertisement
ಈಗಾಗಲೇ 6ರಿಂದ 12ನೇ ತರಗತಿ ಆರಂಭವಾಗಿರುವುದರಿಂದ ಸೋಮವಾರ 1ರಿಂದ 5ನೇ ತರಗತಿ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಇನ್ನು ಮುಂದೆ ಮಕ್ಕಳ ಕಲರವ ಕೇಳಿಬರಲಿವೆ.
ಖರೀದಿ ಭರಾಟೆಅ. 25ರಿಂದ 1ರಿಂದ 5ನೇ ತರಗತಿ ತೆರೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಸೇರುವ ಮಕ್ಕಳು, ಈಗಾಗಲೇ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಖರೀದಿಗೆ ಹೆತ್ತವರು ಅಂಗಡಿಗಳಲ್ಲಿ ಮುಗಿಬಿದ್ದಿದ್ದಾರೆ. ಮಂಗ ಳೂರಿನ ವಿವಿಧ ಸಮವಸ್ತ್ರ ಮಾರಾಟದ ಅಂಗಡಿಯಲ್ಲಿ ರವಿವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ಸಮವಸ್ತ್ರ ಖರೀದಿಯಲ್ಲಿ ತೊಡಗಿಕೊಂಡ ದೃಶ್ಯ ಕಂಡುಬಂತು. ಮೂಲ್ಕಿ: 22 ಶಾಲೆಗಳು ಆರಂಭ, ಸಿದ್ಧತೆ ಪೂರ್ಣ
ಮೂಲ್ಕಿ: ಮೂಲ್ಕಿ ಕ್ಲಸ್ಟರ್ ವ್ಯಾಪ್ತಿಯ 13 ಹಿರಿಯ ಪ್ರಾಥಮಿಕ ಮತ್ತು ನಾಲ್ಕು ಕಿರಿಯ ಪ್ರಾಥಮಿಕ ಸರ ಕಾರಿ ಅನುದಾನಿತ ಶಾಲೆಗಳ ಹಾಗೂ 5 ಅನು ದಾನೇತರ ಶಾಲೆಗಳು ಸೇರಿ ಒಟ್ಟು 22 ಶಾಲೆಗಳಲ್ಲಿ ಸೋಮವಾರದಿಂದ 1ರಿಂದ 5ನೇ ತರಗತಿ ಮಕ್ಕಳ ಶಾಲೆ ಆರಂಭವಾಗಲಿದೆ. ಶನಿವಾರದಿಂದಲೇ ಆಯಾ ಶಾಲೆಯ ವ್ಯಾಪ್ತಿಯ ಸ್ಥಳೀಯಾಡಳಿತದ ಸಹಕಾರದಲ್ಲಿ ಸ್ವತ್ಛತೆ ಮಾಡಲಾಗುತ್ತಿದೆ. ಶಾಲೆಗಳಿಗೆ ಸ್ಯಾನಿಟೈಸೇಶನ್ ಮಾಡಿ ತರಗತಿಗಳನ್ನು ಸಿದ್ಧ ಪಡಿಸಲಾಗಿದೆ. ಅನುದಾನಿತ ಶಾಲೆಗಳಲ್ಲಿ ಕೂಡ ಸಿದ್ಧತೆ ಕಾರ್ಯ ಹಮ್ಮಿಕೊಳ್ಳಲಾಗಿದೆ. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ವಿದ್ಯಾರ್ಥಿಗಳು ತರಗತಿ ಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸೂಚಿಸಲಾ ಗಿದೆ. ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನ್‌ಗೆ ಒಳಪಡಿಸಿ ಜ್ವರ ಇದ್ದಲ್ಲಿ ಅಂತಹ ಮಕ್ಕಳಿಗೆ ಬೇರೆಯೇ ವ್ಯವಸ್ಥೆ ಮಾಡಲಾಗುತ್ತದೆ. ಸೋಮವಾರದಂದು ಅರ್ಧದಿನ ಮಾತ್ರ ಶಾಲೆ ಇರುವುದರಿಂದ ಬಿಸಿ ಊಟದ ವ್ಯವಸ್ಥೆ ಇರುವುದಿಲ್ಲ. ನ. 2ರಿಂದ ಊಟದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಮೂಲ್ಕಿ ಕ್ಲಸ್ಟರ್ ಸಿಆರ್‌ಪಿ ನೀತಾ ತಂತ್ರಿ ಅವರು ಉದಯವಾಣಿಗೆ ತಿಳಿಸಿದ್ದಾರೆ. ಈಗಾಲೇ ದಾಖಲಾತಿ ಪಡೆದು ಆನ್‌ಲೈನ್ ಮೂಲಕ ತರಗತಿ ಪಡೆಯುತ್ತಿದ್ದ ಮಕ್ಕಳು ಹಾಗೂ ಮುಂದೆ ಯಾವುದಾದರೂ ಮಕ್ಕಳು ದಾಖಲಾತಿ ಆಗದೆ ಬಾಕಿ ಇದ್ದಲ್ಲಿ ನ. 30ರೊಳಗೆ ದಾಖಲಾತಿಗೆ ಸರಕಾರ ವಿಶೇಷ ಅವಕಾಶ ನೀಡಿದೆ.