Advertisement
ಸೋಮವಾರವೇ ಜಿಲ್ಲೆಗೆ ಮುಂಗಾರು ಪ್ರವೇಶದ ಲಕ್ಷಣಗಳು ಕಂಡುಬರುತ್ತಿರು ವುದರಿಂದ ಗಿಡಗಳನ್ನು ನೆಡುವುದಕ್ಕೆ ಇದು ಸೂಕ್ತ ಸಮಯ ಎನಿಸಿದೆ. ಪ್ರತಿ ಗ್ರಾ.ಪಂ.ಗಳು ಪುತ್ತೂರಿನ ಸಾಮಾಜಿಕ ಅರಣ್ಯ ಇಲಾಖೆಗೆ ಇಮೇಲ್ ಮೂಲಕ 500, 200, 100 ಗಿಡಗಳಿಗೆ ಬೇಡಿಕೆ ಸಲ್ಲಿಸಿವೆ.
Related Articles
ಉದ್ಯೋಗ ಖಾತರಿ ಯೋಜನೆಯ ಜಾಬ್ ಕಾರ್ಡ್ ಮಾಡಿಸಿಕೊಂಡವರಿಗೆ ಪ್ರತಿ ಗಿಡಗಳ ನಾಟಿಗೆ 55ರಿಂದ 60 ರೂ. ಸಿಗಲಿದ್ದು, ಬದುಕಿ ಉಳಿದ ಗಿಡಗಳ ನಿರ್ವಹಣೆಗೆ ಮೊದಲ ವರ್ಷ 10.50 ರೂ. ನಿರ್ವಹಣ ವೆಚ್ಚವೂ ಸಿಗಲಿದೆ. ಗ್ರಾ.ಪಂ.ಗಳಿಗೂ ಇದೇ ಯೋಜನೆಯಲ್ಲಿ ಗಿಡಗಳ ನಾಟಿಗೆ ಅವಕಾಶವಿರುವ ಹಿನ್ನೆಲೆಯಲ್ಲಿ, ತಿಂಗಳಪೂರ್ತಿ ವಿವಿಧ ಕಡೆಗಳಲ್ಲಿ ಗಿಡಗಳನ್ನು ನಾಟಿ ಮಾಡುವ ದೃಷ್ಟಿಯಿಂದ ಹೆಚ್ಚಿನ ಗಿಡಗಳಿಗೆ ಬೇಡಿಕೆ ಇದೆ.
Advertisement
ಸ್ಮಾ ಫ್ಸ್ (ಎಸ್‌ಎಂಎಎಫ್) ನಲ್ಲೂ ಅವಕಾಶಸಬ್ಮಿಷನ್ ಆನ್ ಆ್ಯಗ್ರೋಫಾರೆಸ್ಟ್ರಿ (ಎಸ್‌ಎಂಎಎಫ್) ಯೋಜನೆಯ ಮೂಲಕವೂ ಗಿಡಗಳ ನಾಟಿಗೆ ಅವಕಾಶವಿದ್ದು, 6ಗಿ9 ಅಳತೆಗೆ 1 ರೂ. ಹಾಗೂ 8ಗಿ12 ಅಳತೆಗೆ 3 ರೂ. ಪಾವತಿಸಿ ಫಲಾನುಭವಿಗಳು ಗಿಡಗಳನ್ನು ಪಡೆಯಬಹುದಾಗಿದೆ. ಇದರಲ್ಲಿ ಬೌಂಡರಿ ಪ್ಲಾಟಿಂಗ್‌ಗೆ ಪ್ರತಿ ಗಿಡಕ್ಕೆ 14 ರೂ., ಒಂದು ಹೆಕ್ಟೇರ್‌ನಲ್ಲಿ 100ರಿಂದ 500ರಂತೆ ಪ್ರತಿಗಿಡಕ್ಕೆ 14 ರೂ., ಒಂದು ಹೆಕ್ಟೇರ್‌ನಲ್ಲಿ 500ರಿಂದ 1000ದಂತೆ ಪ್ರತಿ ಗಿಡಕ್ಕೆ 10 ರೂ., ಒಂದು ಹೆಕ್ಟೇರ್‌ನಲ್ಲಿ 1000ದಿಂದ 1200ರಂತೆ ಪ್ರತಿ ಗಿಡಕ್ಕೆ 7 ರೂ. ಪ್ರೋತ್ಸಾಹ ಧನ ಲಭ್ಯವಾಗಲಿದೆ. ಇದರ ನಿರ್ವಹಣೆಗೂ ನಿರ್ವಹಣ ವೆಚ್ಚ ಸಿಗಲಿದೆ. ಫಲಾನುಭವಿಗಳು ಹೀಗೆ ಮಾಡಿ
ಆಸಕ್ತ ಹಾಗೂ ಅರ್ಹ ಫಲಾನುಭವಿಗಳು ಸಂಬಂಧಿಸಿದ ಗ್ರಾಮ ಪಂಚಾಯತ್‌ಗಳಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ಚೀಟಿಯನ್ನು ನೋಂದಾಯಿಸಿಕೊಂಡು ಪೂರ್ಣ ವಿಳಾಸ ಹಾಗೂ ಸ್ಥಳದ ವಿವರಗೊಂದಿಗೆ (ಆರ್‌ಟಿಸಿ, ನಕಾಶೆ ಪ್ರತಿ, ಸಣ್ಣ ರೈತ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ವಿವರ, ಆಧಾರ್ ಕಾರ್ಡ್ ಪ್ರತಿ ಇತ್ಯಾದಿ) ಸಸಿ ಬೇಡಿಕೆ ವಿವರಗಳನ್ನು ಕಚೇರಿಗೆ ಸಲ್ಲಿಸಿ ಗಿಡಗಳನ್ನು ಇಲಾಖೆಯ ಮುಕ್ವೆ ನರ್ಸರಿಯಿಂದ ಪಡೆದುಕೊಳ್ಳಬಹುದಾಗಿದೆ. ಗ್ರಾ.ಪಂ.ನಿಂದ ಬೇಡಿಕೆ
ಇಮೇಲ್ ಮೂಲಕ ಸಾಕಷ್ಟು ಗ್ರಾ.ಪಂ.ನಿಂದ ಬೇಡಿಕೆ ಬಂದಿದ್ದು, ಸ್ವತ್ಛ ಮೇವ ಜಯತೇ ಆಂದೋಲನ ತಿಂಗಳ ಪೂರ್ತಿ ನಡೆಯುತ್ತಿರುವುದರಿಂದ ವಿವಿಧ ಸ್ಥಳಗಳಲ್ಲಿ ಗ್ರಾ.ಪಂ. ಗಿಡಗಳನ್ನು ನೆಡಲಿದೆ. ಉದ್ಯೋಗ ಖಾತರಿ ಯೋಜನೆಯ ಮೂಲಕ ಇದಕ್ಕೆ ಪ್ರೋತ್ಸಾಹ ಧನ ಪಡೆಯುವುದಕ್ಕೆ ಅವಕಾಶವಿದೆ.
– ವಿದ್ಯಾರಾಣಿ ಪಿ.ಕೆ. ವಲಯ ಅರಣ್ಯಾಧಿಕಾರಿ, ಸಾಮಾಜಿಕ ಅರಣ್ಯ ವಿಭಾಗ, ಪುತ್ತೂರು