Advertisement
ಆದರೆ ಕೈಲಾಸವಾದಿವೋ ಶಿವನ್ ಅವರು ಚಂದ್ರಯಾನ 2 ಮಿಷನ್ ಯೋಜನೆ ವೇಳೆ ಹೆಸರು ಹೆಚ್ಚು ಪ್ರಚಲಿತವಾಯಿತು. ಆದರೆ ಅದಕ್ಕೂ ಮುನ್ನ ಕೆ.ಶಿವನ್ ಅವರ ಹೆಸರನ್ನು ಬಹುತೇಕರು ಕೇಳಿರಲಿಲ್ಲ. 2018ರಲ್ಲಿ ಶಿವನ್ ಅವರು ಇಸ್ರೋದ 9ನೇ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದರು.
Related Articles
Advertisement
1980ರಲ್ಲಿ ಮದ್ರಾಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದರು ಶಿವನ್. ಐಐಎಸ್ ಸಿ ಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ನ ಮಾಸ್ಟರ್ ಡಿಗ್ರಿ ಪಡೆದಿದ್ದರು. ಬಳಿಕ 2006ರಲ್ಲಿ ಬಾಂಬೆ ಐಐಟಿಯಲ್ಲಿ ಪಿಎಚ್ ಡಿ ಪೂರ್ಣಗೊಳಿಸಿದ್ದರು. ಸತ್ಯಭಾಮಾ ಯೂನಿರ್ವಸಿಟಿ ಶಿವನ್ ಅವರಿಗೆ ವಿಜ್ಞಾನದಲ್ಲಿನ ಸೇವೆಗಾಗಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು.
1982ರಲ್ಲಿ ಶಿವನ್ ಇಸ್ರೋಗೆ ಸೇರಿದ್ದರು. ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್(ಪಿಎಸ್ ಎಲ್ ವಿ) ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳಲ್ಲಿ ಶಿವನ್ ಪ್ರಮುಖ ಪಾತ್ರವಹಿಸಿದ್ದರು. ಮೂರು ದಶಕಗಳ ದೀರ್ಘಾವಧಿ ಸೇವೆಯಲ್ಲಿ ಶಿವನ್ ಅವರು ಜಿಎಸ್ ಎಲ್ ವಿ, ಪಿಎಸ್ ಎಲ್ ವಿ, ಜಿಎಸ್ ಎಲ್ ವಿ ಮಾರ್ಕ್ -3 ಸೇರಿದಂತೆ ಹಲವು ಪ್ರತಿಷ್ಠಿದ ಮಿಷನ್ ಗಳಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸಿದ್ದರು.
ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಶಿವನ್ ಅವರು 1999ರಲ್ಲಿ ಡಾ.ವಿಕ್ರಮ್ ಸಾರಾಭಾಯ್ ರಿಸರ್ಚ್ ಪ್ರಶಸ್ತಿ, 2007ರಲ್ಲಿ ಇಸ್ರೋ ಮೆರಿಟ್ ಪ್ರಶಸ್ತಿ, 2011ರಲ್ಲಿ ಬಿರೇನ್ ರಾಯ್ ಸ್ಪೇಸ್ ಸೈನ್ಸ್ ಪ್ರಶಸ್ತಿಗೆ ಭಾಜನರಾಗಿದ್ದರು.