Advertisement

Explainer;ವಿವೇಕಾನಂದರ ಬಗ್ಗೆ ಅವಹೇಳನ…ಅಮೋಘ ದಾಸ್‌ ಗೆ ಇಸ್ಕಾನ್‌ ನಿಷೇಧ..ಏನಿದು ವಿವಾದ

01:05 PM Jul 12, 2023 | Team Udayavani |

ಸನಾತನ ಧರ್ಮದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಇಸ್ಕಾನ್‌ ನ ಸನ್ಯಾಸಿಯೊಬ್ಬರ ಮೇಲೆ ಒಂದು ತಿಂಗಳ ಕಾಲ ನಿಷೇಧ ಹೇರಿರುವ ಘಟನೆ ನಡೆದಿದೆ. ಅದಕ್ಕೆ ಕಾರಣ ಇಸ್ಕಾನ್‌ ನ ಜನಪ್ರಿಯ ಧರ್ಮ ಪ್ರಚಾರಕ ಅಮೋಘ ಲೀಲಾ ದಾಸ್‌ ಸ್ವಾಮಿ ವಿವೇಕಾನಂದ ಮತ್ತು ಅವರ ಗುರು ರಾಮಕೃಷ್ಣ ಪರಮಹಂಸರ ಕುರಿತು ಟೀಕೆ ಮಾಡಿರುವುದು. ಅಮೋಘ ಲೀಲಾ ದಾಸ್‌ ಪ್ರವಚನದ ವಿಡಿಯೋ ವೈರಲ್‌ ಆಗುವ ಮೂಲಕ ವಿವಾದದ ಕೇಂದ್ರಬಿಂದುವಾಗಿದ್ದಾರೆ.

Advertisement

ಇದನ್ನೂ ಓದಿ:‌ಹುಟ್ಟುಹಬ್ಬಕ್ಕೆ ಬಿಗ್‌ ಸರ್ಪ್ರೈಸ್:‌ ʼಟಗರುʼ2ʼ‌ ಗೆ ರೆಡಿಯಾದ ಶಿವಣ್ಣ? ಪೋಸ್ಟರ್‌ ವೈರಲ್

ಸ್ವಾಮಿ ವಿವೇಕಾನಂದ ಮತ್ತು ಅವರ ಗುರು ರಾಮಕೃಷ್ಣ ಪರಮಹಂಸ ಅವರ ಬಗ್ಗೆ ಪ್ರವಚನದ ವೇಳೆ ವಿವಾದಿತ ಹೇಳಿಕೆಯನ್ನು ನೀಡಿರುವುದಾಗಿ ಅಮೋಘ ಲೀಲಾ ಪ್ರಭು ತಪ್ಪೊಪ್ಪಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಒಂದು ತಿಂಗಳ ಕಾಲ ಅವರ ಪ್ರವಚನ, ಭೇಟಿಗೆ ನಿಷೇಧ ಹೇರಲಾಗಿದೆ. ಪ್ರಾಯಶ್ಚಿತ್ತಕ್ಕಾಗಿ ದಾಸ್‌ ಒಂದು ತಿಂಗಳ ಕಾಲ ಗೋವರ್ಧನಗಿರಿ ಬೆಟ್ಟಕ್ಕೆ ತೆರಳಲಿದ್ದಾರೆ ಎಂದು ಇಸ್ಕಾನ್‌ ಪ್ರಕಟನೆಯಲ್ಲಿ ತಿಳಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಅಮೋಘ ಲೀಲಾ ದಾಸ್‌ ತುಂಬಾ ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಇವರ ಧಾರ್ಮಿಕ ಪ್ರವಚನದ ವಿಡಿಯೋಗಳು ಸ್ಫೂರ್ತಿದಾಯಕವಾಗಿರುವ ಮೂಲಕ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ ನಲ್ಲಿರುತ್ತಿದ್ದವು.

Advertisement

ಸ್ವಾಮಿ ವಿವೇಕಾನಂದರ ಬಗ್ಗೆ ಹೇಳಿದ್ದೇನು?

ಸನ್ಯಾಸಿಗಳಾದವರು, ದಿವ್ಯ ಪುರುಷರು ಮೀನನ್ನು ತಿನ್ನಬಹುದೇ ಎಂದು ಪ್ರವಚನದಲ್ಲಿ ತಿಳಿಸಿದ್ದ ಅಮೋಘ ಲೀಲಾ ದಾಸ್‌, ಸ್ವಾಮಿ ವಿವೇಕಾನಂದರು ಮೀನು ತಿನ್ನುತ್ತಿದ್ದ ವಿಷಯವನ್ನು ಪ್ರಶ್ನಿಸಿದ್ದರು. ದೈವಿ ಪುರುಷರು ಮೀನನ್ನು ತಿನ್ನಲು ಸಾಧ್ಯವೇ? ಆ ಮೀನು ಕೂಡಾ ನೋವನ್ನು ಅನುಭವಿಸುವುದಿಲ್ಲವೇ? ಮೀನು ತಿನ್ನು ಎಂದು ಹೇಳುವ ಹೃದಯದಲ್ಲಿ ಕರುಣೆಗೆ ಜಾಗವಿರಲು ಸಾಧ್ಯವೇ? ನನಗೆ ಸ್ವಾಮಿ ವಿವೇಕಾನಂದರ ಬಗ್ಗೆ ಅಪಾರ ಗೌರವವಿದೆ. ಆದರೆ ಅವರು ಹೇಳಿದ್ದನ್ನೆಲ್ಲಾ ಒಪ್ಪಲು ಸಾಧ್ಯವಿಲ್ಲ ಎಂದು ಲೀಲಾ ದಾಸ್‌ ಹೇಳಿದ್ದರು.

ಯಾರಿವರು ಅಮೋಘ ಲೀಲಾ ದಾಸ್?‌

ಯೂಟ್ಯೂಬ್‌ ನಲ್ಲಿ ಲಭ್ಯವಿರುವ ಕೆಲವು ಸಂದರ್ಶನಗಳಲ್ಲಿ ಹೇಳಿಕೊಂಡಿರುವಂತೆ, ದಾಸ್‌ ಉತ್ತರಪ್ರದೇಶದ ಲಕ್ನೋ ಮೂಲದವರು. ಮೂಲ ಹೆಸರು ಆಶೀಷ್‌ ಅರೋರಾ. ಸನ್ಯಾಸ ದೀಕ್ಷೆಗಿಂತ ಮೊದಲು ಅಮೆರಿಕ ಮೂಲದ ಕಂಪನಿಯಲ್ಲಿ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿದ್ದರು. ಪಿಯುಸಿ ವಿದ್ಯಾಭ್ಯಾಸದ ಸಂದರ್ಭದಲ್ಲಿಯೇ ಅರೋರಾ ಧಾರ್ಮಿಕ ವಿಚಾರದಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ಈ ಕಾರಣಕ್ಕಾಗಿಯೇ ಮನೆ ಬಿಟ್ಟು ದೇವರನ್ನು ಅರಸುತ್ತಾ ಹೋಗಿದ್ದರು. ಕೆಲಕಾಲದ ನಂತರ ವಾಪಸ್‌ ಆದ ಅರೋರಾ ಸಾಫ್ಟ್‌ ವೇರ್‌ ಎಂಜಿನಿಯರಿಂಗ್‌ ಗೆ ಸೇರಿಕೊಂಡಿದ್ದು, 2004ರಲ್ಲಿ ಪದವಿ ಪಡೆದಿದ್ದರು. ತದನಂತರ ಅಮೆರಿಕದ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 2010ರಲ್ಲಿ ತಮ್ಮ 29ನೇ ವಯಸ್ಸಿನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ಇಸ್ಕಾನ್‌ ಗೆ ಸೇರಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next