Advertisement

ಆ.15ರಿಂದ 30 ಮೆಗ್ಯಾವಾಟ್‌ ವಿದ್ಯುತ್‌ ಉತ್ಪಾದನೆ

05:51 PM Jun 28, 2022 | Team Udayavani |

ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕು ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿಯಿಂದ ಇನ್ನು ಮುಂದೆ ಶಾಪ ಮುಕ್ತವಾಗುವುದಕ್ಕಾಗಿ ಸಿದ್ಧಸಿರಿ ಎಥೆನಾಲ್‌ ಹಾಗೂ ಪವರ್‌ ಉತ್ಪಾದನೆ ಕೆಲಸಗಳು ಭರದಿಂದ ನಡೆಯುತ್ತಿವೆ. ಒಟ್ಟು 450 ಕೋಟಿ ರೂ.ಯೋಜನೆಯಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳ ಜೋಡಣೆ ನಡೆಯುತ್ತಿದ್ದು, 30 ಮೆಗ್ಯಾವಾಟ್‌ ವಿದ್ಯುತ್‌ ಉತ್ಪಾದನೆ ಆಗಸ್ಟ್‌ 15ಕ್ಕೆ ಪ್ರಾರಂಭ ಆಗಲಿದೆ ಎಂದು ವಿಜಯಪುರ ಶಾಸಕರು ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Advertisement

ಪಟ್ಟಣದಲ್ಲಿ ಸಿದ್ಧಸಿರಿ ಎಥೆನಾಲ್‌ ಹಾಗೂ ಪವರ್‌ ವಿಭಾಗದಿಂದ ಸಿದ್ಧಸಿರಿ ಸಂಕೀರ್ಣಗಳ, ಗೋಶಾಲೆ, ಸಿಬಿಎಸ್‌ಸಿ ಪಬ್ಲಿಕ್‌ ಶಾಲೆ, 108 ಹಾಸಿಗೆವುಳ್ಳ ಆಸ್ಪತ್ರೆ, ಎಸ್‌.ಮಾರ್ಟ್‌, ಕಲ್ಯಾಣ ಮಂಟಪ, ಕೃಷಿ ಸೇವಾ ಕೇಂದ್ರ, ಇಂಧನ ಕೇಂದ್ರಗಳ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಚಿಂಚೋಳಿ ಸಕ್ಕರೆ ಕಾರ್ಖಾನೆಯನ್ನು 37.74ಕೋಟಿ ರೂ.ಗಳನ್ನು ನೀಡಿ ಹರಾಜು ಟೆಂಡರ್‌ನಲ್ಲಿ ಪಡೆದುಕೊಂಡಿದ್ದೇನೆ. ದೇಶದಲ್ಲಿಯೇ 4.23 ಲಕ್ಷ ಟನ್‌ ಎಥೆನಾಲ್‌ ಉತ್ಪಾದನೆ 10 ಟನ್‌ ಸಿಎನ್‌ಜಿ ಉತ್ಪಾದಿಸಲಾಗುವುದು. 213 ಎಕರೆ ಜಮೀನುದಲ್ಲಿ 96 ಎಕರೆ ಜಮೀನು ಕಾರ್ಖಾನೆಗೆ ಒಳಪಟ್ಟಿದೆ. 113 ಎಕರೆ ಪಂಜಾಬ್‌ ಬ್ಯಾಂಕ್‌ ನೀಡುತ್ತಿದೆ. ಮುಂದಿನ ವರ್ಷ 10 ಲಕ್ಷ ಟನ್‌ ಎಥೆನಾಲ್‌ ಉತ್ಪಾದನೆ ಮಾಡಲಾಗುವುದು. ರೈತರು ನಮ್ಮ ಮೇಲೆ ವಿಶ್ವಾಸ ಇರಬೇಕು. ಈಗಾಗಲೇ ಕಾರ್ಖಾನೆಯಲ್ಲಿ 154 ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಲಾಗಿದೆ ಎಂದರು.

ನಾನು ಯಾರಿಗೂ ಲಂಚ ಕೊಡುವುದು ಇಲ್ಲ ಲಂಚ ಕೊಟ್ಟಿದ್ದರೆ ನಾನು ಆಗಲೇ ಮಂತ್ರಿಯಾಗುತ್ತಿದ್ದೆ. ನಮ್ಮಲ್ಲಿ ಗೂಂಡಾಗಿರಿ ನಡೆಯುವುದಿಲ್ಲ. ಗುಂಡಾಗಿರಿಯಿಂದಲೇ ರಾಜಕೀಯ ಪ್ರಾರಂಭಿಸಿದ್ದೇನೆ. ಚಿಂಚೋಳಿ ತಾಲೂಕು ಭವಿಷ್ಯದಲ್ಲಿ ಸುವರ್ಣಾಕ್ಷರದಲ್ಲಿ ಬರೆಯುವಂತಹದಾಗಲಿದೆ. ನನಗೆ ಇಳಿಸುವುದು ಏರಿಸುವುದು ಎಲ್ಲವೂ ಗೊತ್ತಿದೆ. ಮುಂದೆ ನಾನು ಜ್ಯೋತಿಷ್ಯ ಆಗುತ್ತೇನೆ ನಗೆ ಚಟಾಕಿ ಹಾರಿಸಿದರು.

ಕೇಂದ್ರ ಸಚಿವ ಭಗವಂತ ಖುಬಾ ಮಾತನಾಡಿ, ನಮ್ಮ ಮತಕ್ಷೇತ್ರದಲ್ಲಿ ಬಸನಗೌಡ ಪಾಟೀಲ ಯತ್ನಾಳ ಎಥೆನಾಲ್‌ ಮತ್ತು ಪವರ್‌ ಘಟಕ ಪ್ರಾರಂಭಿಸುವುದಕ್ಕಾಗಿ 450 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿದ್ದಾರೆ. ಇನ್ನು ಮುಂದೇ ದೇಶದಲ್ಲಿ ಎಥೆನಾಲ್‌ ಬೇಡಿಕೆ ಹೆಚ್ಚಾಗಲಿದೆ. ಸಂಸದ ಡಾ|ಉಮೇಶ ಜಾಧವ್‌ ಕಾಂಗ್ರೆಸ್‌ ಪಕ್ಷದಲ್ಲಿಯೇ ಇದ್ದರೆ ಈ ಕಾರ್ಖಾನೆ ಪ್ರಾರಂಭಗೊಳ್ಳುತ್ತಿರಲಿಲ್ಲ. ಬಿಜೆಪಿ ಬಂದ ನಂತರ ಎಲ್ಲ ಉತ್ತಮ ಬೆಳವಣಿಗೆ ಆಗಿವೆ. ಕೇಂದ್ರ ಸರಕಾರದಿಂದ ಸಿಗುವ ಎಲ್ಲ ಸಹಾಯ ಸಹಕಾರ ನೀಡುತ್ತೇನೆ ಎಂದು ಸಚಿವ ಖುಬಾ ಭರವಸೆ ನೀಡಿದರು.

Advertisement

ಅರಣ್ಯ ಸಚಿವ ಉಮೇಶ ಕತ್ತಿ ಮಾತನಾಡಿ, ಕಾರ್ಖಾನೆ ಪ್ರಾರಂಭದಿಂದ ಹಿಂದುಳಿದ ಪ್ರದೇಶ ಇನ್ನು ಹೆಚ್ಚು ಅಭಿವೃದ್ಧಿ ಆಗಲಿದೆ. ನಾನು ರೊಕ್ಕ ಕೊಟ್ಟು ಮಂತ್ರಿಯಾಗಿಲ್ಲ. 8 ಸಲ ಶಾಸಕನಾಗಿದ್ದೇನೆ. ಸಚಿವರಾಗಿ ಕೆಲಸ ಮಾಡಿದ್ದರಿಂದ ನನಗೆ ಸಚಿವ ಸ್ಥಾನ ಸಿಕ್ಕಿದೆ ಎಂದು ಹೇಳಿದರು.ಸಂಸದ ಡಾ| ಉಮೇಶ ಜಾಧವ್‌ ಮಾತನಾಡಿದರು.

ಶಾಸಕರಾದ ಡಾ|ಅವಿನಾಶ ಜಾಧವ್‌, ರಾಜಕುಮಾರ ಪಾಟೀಲ ತೇಲ್ಕೂರ, ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿದರು. ರಾಮನಗೌಡ ಪಾಟೀಲ ಯತ್ನಾಳ, ಜಗದೀಶ ಕ್ಷತ್ರಿ, ಹಾರಕೂಡ ಪೀಠಾಧಿಪತಿ ಡಾ| ಚೆನ್ನವೀರ ಶಿವಾಚಾರ್ಯರು, ಜಗದೇವಿ ಗಡಂತಿ, ಶಿವಶರಣಪ್ಪ ಜಾಪಟ್ಟಿ, ಬಸಯ್ಯ ಹಿರೇಮಠ, ಶಿವಾನಂದ, ಸಾಯಿಬಾಬಾ, ರಮೇಶ ಬೀರಾದಾರ, ಶೈಲಜಾ ಪಾಟೀಲ, ಸೋಮಶೇಖರ ಬಂಡಿ, ಗಣಪತಿ, ಜ್ಯೋತಿಬಾ ಸಿದ್ರಾಮಪ್ಪ ದಂಗಾಪೂರ, ಬಸವಣ್ಣಪ್ಪ ಕುಡಹಳ್ಳಿ ಇನ್ನಿತರಿದ್ದರರು. ಪ್ರಭುಗೌಡ ದೇಸಾಯಿ ಸ್ವಾಗತಿಸಿದರು. ಸಂಗನಬಸಪ್ಪ ಸಜ್ಜನ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next