Advertisement

“ರಾಮಾಯಣ ಎಕ್ಸ್‌ಪ್ರೆಸ್‌’ನ.14ರಿಂದ

11:10 AM Jul 11, 2018 | Harsha Rao |

ಹೊಸದಿಲ್ಲಿ: ಭಾರತ ಮತ್ತು ಶ್ರೀಲಂಕಾಗಳಲ್ಲಿ ಶ್ರೀರಾಮ ಸಂಚರಿಸಿದ ಸ್ಥಳಗಳಿಗೆ ಜನರನ್ನು ಕರೆದೊಯ್ಯುವ ನಿಟ್ಟಿನಲ್ಲಿ ರೈಲ್ವೇ ಇಲಾಖೆ ನ. 14ರಂದು ದಿಲ್ಲಿಯ ಸಪœರ್‌ಜಂಗ್‌ ನಿಲ್ದಾಣದಿಂದ ಸೇವೆ ಆರಂಭಿಸಲಿದೆ. ಅದಕ್ಕೆ “ಶ್ರೀ ರಾಮಾಯಣ ಎಕ್ಸ್‌ಪ್ರೆಸ್‌’ ಎಂದು ಹೆಸರಿಡಲಾಗಿದೆ.

Advertisement

ಒಟ್ಟು 16 ದಿನಗಳ ಯಾತ್ರೆಯನ್ನು ಭಾರತ ಮತ್ತು ಶ್ರೀಲಂಕಾದಿಂದ ಆರಂಭಿಸಲಾಗುತ್ತದೆ ಎಂದು ಇಂಡಿಯನ್‌ ರೈಲ್ವೇ ಕೆಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೊರೇಷನ್‌ (ಐಆರ್‌ಸಿಟಿಸಿ) ಮಂಗಳವಾರ ತಿಳಿಸಿದೆ. ಹೊಸದಿಲ್ಲಿಯಿಂದ ಹೊರಟ ಬಳಿಕ ಹನುಮಾನ್‌ ಗಾಹಿì, ರಾಮ್‌ಕೋಟ್‌ ಮತ್ತು ಕನಕ್‌ ಭವನ್‌ ದೇಗುಲಗಳಲ್ಲಿ ರೈಲಿಗೆ ನಿಲುಗಡೆ ಒದಗಿಸಲಾಗುತ್ತದೆ. ರಾಮಾ ಯಣ ಸರ್ಕಿಟ್‌ನಲ್ಲಿ ಪ್ರಸ್ತಾವಿಸಲಾಗಿರುವ ಕರ್ನಾಟಕದ ಹಂಪಿ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಕರೆದೊಯ್ಯಲಾಗುತ್ತದೆ. ಚೆನ್ನೈನಿಂದ ಕೊಲಂಬೋಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಉಂಟು. ಪ್ರತಿ ವ್ಯಕ್ತಿಗೆ 15,120 ರೂ. ಶುಲ್ಕ ನಿಗದಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next