Advertisement
ರಾರಾಜಿಸುತ್ತಿವೆ ಫ್ಲೆಕ್ಸ್, ಬ್ಯಾನರ್: ದಕ್ಷಿಣ ಭಾರತ ದಲ್ಲಿಯೇ ಅತ್ಯಂತ ವೈಭವ ಹಾಗೂ ಶ್ರದ್ಧಾಭಕ್ತಿಯಿಂದ ನಡೆಯಲಿರುವ ಗುರುಪೂಜಾ ಮಹೋತ್ಸವ ಹಾಗೂ ಸಂಗೀತೋತ್ಸವಕ್ಕೆ ಶ್ರೀ ಕೈವಾರ ಮಠ ಅಗತ್ಯ ಸಿದ್ಧತೆ ಗಳನ್ನು ಕೈಗೊಳ್ಳುತ್ತಿದ್ದು, ಮಹೋತ್ಸವಕ್ಕೆ ಭಕ್ತರನ್ನು ಹಾಗೂ ಸಂಗೀತ ಪ್ರೇಮಿಗಳನ್ನು ಕೈಬೀಸಿ ಕರೆಯುವ ಸ್ವಾಗತ ಕಮಾನುಗಳು, ಫ್ಲೆಕ್ಸ್, ಬ್ಯಾನರ್‌ಗಳು ಜಿಲ್ಲಾ ದ್ಯಂತ ರಾರಾಜಿಸುತ್ತಿವೆ.
Related Articles
Advertisement
3 ಲಕ್ಷಕೂ ಅಧಿಕ ಸಂಗೀತ ಪ್ರೇಮಿಗಳು ಭೇಟಿ: ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿರುವ ಹಲವಾರು ಸಂಗೀತ ವಿದ್ವಾಂಸರನ್ನು ಮತ್ತು ಸಂಗೀತದ ನಾನಾ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ನೋಡಿ ಆನಂದಿಸುವ ಸದಾವಕಾಶವನ್ನು ಯೋಗಿನಾರೇಯಣ ಮಠದಲ್ಲಿ ಕಲ್ಪಿಸಲಾಗಿದೆ. ಮೂರು ದಿನಗಳ ಕಾಲ ಮೂರು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಸಂಗೀತ ಪ್ರೇಮಿಗಳು ಕೈವಾರಕ್ಕೆ ಲಗ್ಗೆ ಹಾಕಲಿದ್ದಾರೆ.
ಮೂರು ದಿನಗಳ ಸಂಗೀತೋತ್ಸವದಲ್ಲಿ ಪ್ರಸಿದ್ಧ ಸಂಗೀತ ವಿದ್ವಾಂಸರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅನೇಕ ಸಂಗೀತ ದಿಗ್ಗಜರು ಈ ರಾಷ್ಟ್ರೀಯ ಸಂಗೀತೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಸಿಮೆಂಟ್ ಸೀಟ್ ಅಳವಡಿಕೆ: ಮೂರು ದಿನಗಳ ಗುರು ಪೂಜಾ ಹಾಗೂ ಸಂಗೀತೋತ್ಸವಕ್ಕೆ ಯೋಗಿ ನಾರೇಯಣ ಮಠದ ಸಭಾಂಗಣವನ್ನು ವಿಶೇಷವಾಗಿ ಸಿದ್ಧತೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಸಭಾಂ ಗಣದ ಮುಂದೆಯೂ ಮಳೆಗಾಲ ಆಗಿರುವುದರಿಂದ ಭಕ್ತರಿಗೆ ಅನುಕೂಲವಾಗುವಂತೆ ವಿಶಾಲ ಸಭಾಂಗಣ ನಿರ್ಮಿಸಿ ಸಿಮೆಂಟ್ ಸೀಟ್ ಅಳವಡಿಸಲಾಗುತ್ತಿದೆ.
ಭಕ್ತರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲು ಆಯೋಜಿ ಸಲಾಗಿದೆ ಎಂದು ಕೈವಾರ ಶ್ರೀ ಯೋಗಿನಾರೇಯಣ ಮಠದ ಆಡಳಿತಾಧಿ ಕಾರಿ ಕೆ.ಲಕ್ಷ್ಮೀನಾರಾಯಣ್ ತಿಳಿಸಿದರು.
● ಕಾಗತಿ ನಾಗರಾಜಪ್ಪ