ಗೆಳೆತನ ಎಂಬುವುದು ಜೀವನದಲ್ಲಿ ಒಂದು ಅಮೂಲ್ಯವಾದ ಬಂಧ. ಸ್ನೇಹ ಎಂಬುದು ಬಾಲ್ಯದಿಂದ ಮುಪ್ಪಿನವರೆಗೂ ಬೆಸೆದು ಕೊಳ್ಳುವಂತಹ ಬಾಂಧವ್ಯ. ಹುಟ್ಟಿದ ಮೇಲೆ ಒಬ್ಬ ತಾಯಿ ಸ್ನೇಹಿತಳಾಗ ಬಹುದು. ಒಬ್ಬ ತಂದೆ ಸ್ನೇಹಿತನಾಗಬಹುದು. ಒಡಹುಟ್ಟಿದವರೂ ಕೂಡ ಉತ್ತಮ ಸ್ನೇಹಿತರೆನಿಸಿಕೊಳ್ಳಬಹುದು. ಗೆಳೆತನ ಮಾಡೋದು ತುಂಬಾ ಸುಲಭ. ಆದರೆ, ನಿಭಾಯಿಸೋದು ತುಂಬಾ ಕಷ್ಟ.
ಗೆಳೆಯರೊಂದಿಗೆ ಕಳೆದ ಆ ಸಂತಸದ ಕ್ಷಣ ಎಂದಿಗೂ ಅಜರಾಮರ. ಗೆಳೆತನದ ನಂತರ ಬೆಸೆದುಕೊಳ್ಳುವ ಬಂಧ ರಕ್ತ ಸಂಬಂಧಕ್ಕಿಂತ ಮಿಗಿಲಾದುದು. ಒಬ್ಬ ಉತ್ತಮ ಗೆಳೆಯನೊಂದಿಗೆ ಮನದ ನೋವನ್ನು ಹಂಚಿಕೊಂಡರೆ ಮನಸ್ಸಿಗೆ ಅದೆಷ್ಟೋ ಸಮಾಧಾನ. ಅವರು ಧೈರ್ಯವನ್ನು ತುಂಬುವ ಆತ್ಮೀಯರು. ಗೆಳೆಯರು ಕಷ್ಟದ ಸಂದರ್ಭದಲ್ಲಿ ಹೆಗಲಿಗೆ ಹೆಗಲು ಕೊಡುತ್ತಾರೆ. ನಾನಿದ್ದೇನೆ, ನಿನ್ನೊಂದಿಗೆ ಎಂದು ಭರವಸೆ ತುಂಬುತ್ತಾರೆ.
ಸ್ನೇಹ ಎಂದಾಗ ನನಗೆ ನೆನಪಾಗುವುದು ನನ್ನ ಪ್ರಾಣ ಸ್ನೇಹಿತ. ನನ್ನ ಕಾಲೇಜು ಜೀವನದಲ್ಲಿ ವಿದ್ಯಾಭ್ಯಾಸವನ್ನು ನಿರ್ಲಕ್ಷ್ಯ ಮಾಡಿ ಬೇಕಾಬಿಟ್ಟಿಯಾಗಿದ್ದ ನಾನು ಯಾವುದರ ಮೇಲೂ ಆಸಕ್ತಿಯಿಲ್ಲದೆ ನನ್ನದೇ ಪ್ರಪಂಚದಲ್ಲಿ ಇದ್ದವನು. ಹೀಗೇ ಒಂದು ದಿನ ಗ್ರಂಥಾಲಯ ದಲ್ಲಿ ಓದುತ್ತಿದ್ದಾಗ ಅವನ ಭೇಟಿಯಾಗಿತ್ತು. ಅವನ ಮಾತಿನ ಮೋಡಿಗೆ ನಾನು ಮರುಳಾಗಿದ್ದೆ. ಮರುದಿನ ಸೂರ್ಯ ತನ್ನ ಕೆಲಸ ಮುಗಿಸಿ ಹೊರಡುವ ವೇಳೆಗೆ ಜೀವದ ಗೆಳೆಯನಾಗಿ ಬದಲಾಗಿದ್ದ. ಮೊದಮೊದಲು ಪುಸ್ತಕ ವಿನಿಮಯ ಮಾಡಿಕೊಳ್ಳಲು ಸೀಮಿತವಾಗಿದ್ದ ನಮ್ಮ ಗೆಳೆತನ, ಮನದ ಮಾತುಗಳನ್ನು ಹರಟುವವರೆಗೂ ಬೆಳೆದಿತ್ತು.
ಜೇಮ್ಸ್ ಆಲ್ಡಿನ್ ಪಾಯಸ್,
ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು