Advertisement
ಆದರೆ, ಎಲ್ಲಾ ಸಂತೋಷಗಳಿಗೂ ಭಗವಂತ ಒಂದು ಫುಲ್‌ಸ್ಟಾಪ್ ಇಡುವಂತೆ, ಶ್ರೇಯಸ್‌ನ ಈ ಸಂತೋಷಗಳಿಗೂ ಫುಲ್‌ಸ್ಟಾಪ್ ಇಡುತ್ತಾನೆ. ಪ್ರತಿಯೊಬ್ಬರ ಕಾಲೇಜು ಜೀವನವನ್ನು ನೆನಪಿಸುವಂತಹ “ಕಿರಿಕ್ ಪಾರ್ಟಿ’ ಕೆಲವು ತಿಂಗಳುಗಳ ಹಿಂದಷ್ಟೇ ಬಂದಿತ್ತು. ಅದೇ ಸಾಲಿಗೆ ಸೇರಿದ ಇನ್ನೊಂದು ಸಿನಿಮಾ “ನೂರೊಂದು ನೆನಪು’. ಒಬ್ಬ ವಿದ್ಯಾರ್ಥಿಯ ಕಾಲೇಜು ಜೀವನದಲ್ಲಿನ ನೂರೊಂದು ನೆನಪುಗಳ’ನ್ನು ತೋರಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದೆ.
Related Articles
Advertisement
ಆದರೆ, ಅದ್ಯಾವುದೇ ಪ್ರೇಕ್ಷಕರನ್ನು ತಟ್ಟುವುದೇ ಇಲ್ಲ. ಅದೇ ಕಾರಣಕ್ಕೆ ಚಿತ್ರದಲ್ಲಿ ನಾಯಕನ “ನೂರೊಂದು ನೆನಪು’ಗಳನ್ನು ನೋಡಬಹುದೇ ಹೊರತು, ಚಿತ್ರದ “ನೂರೊಂದು ನೆನಪು’ಗಳು ಕಾಡುವುದೇ ಇಲ್ಲ. ಇಡೀ ಚಿತ್ರದ ಕೇಂದ್ರಬಿಂದುವೆಂದರೆ ಅದು ಚೇತನ್ ಅವರ ಪಾತ್ರ. ಅದರ ಸುತ್ತವೇ ಇಡೀ ಚಿತ್ರ ಸುತ್ತುತ್ತದೆ ಮತ್ತು ಚೇತನ್ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದರೆ. ಹೆಚ್ಚು ಆಕ್ರಮಣಕಾರಿಯಲ್ಲದ, ಹಾಗೆಯೇ ತೀರಾ ಸೋಬರ್ ಅಲ್ಲದ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಇನ್ನು ಡಿಎಸ್‌ಪಿಯಾಗಿ ಕಾಣಿಸಿಕೊಂಡಿರುವ ರಾಜ್‌ವರ್ಧನ್, ಇನ್ನಷ್ಟು ಪಳಗಬೇಕು. ಆದರೂ ಮೊದಲ ಪ್ರಯತ್ನದಲ್ಲೇ ಅವರು ಗಮನಸೆಳೆಯುತ್ತಾರೆ. ನಾಯಕಿಯರ ಪೈಕಿ ಹೆಚ್ಚು ಗಮನಸೆಳೆಯುವುದು ಮೇಘನಾ ರಾಜ್. ಯಶ್ ಶೆಟ್ಟಿ, ರವಿಶಂಕರ್ ತರಹ ನಟಿಸುತ್ತಾರೋ ಅಥವಾ ಅವರನ್ನು ಅನುಕರಣೆ ಮಾಡುತ್ತಾರೋ ಹೇಳುವುದು ಕಷ್ಟ.
ರಾಜೇಶ್ ನಟರಂಗ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರೂ, ಪ್ರೇಕ್ಷಕರನ್ನು ಭಾವುಕರನ್ನಾಗಿ ಮಾಡಿ ಹೋಗುತ್ತಾರೆ. “ನೂರೊಂದು ನೆನಪು’ ನಿಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿಸುವಂತಹ ಇನ್ನೊಂದು ಚಿತ್ರ. ಅಂದಹಾಗೆ, ಇದು “ದುನಿಯಾದಾರಿ’ ಎನ್ನುವ ಮರಾಠಿ ಕಾದಂಬರಿ ಆಧಾರಿತ ಮತ್ತು ಅದೇ ಹೆಸರಿನ ಚಿತ್ರದ ರೀಮೇಕು.
ಚಿತ್ರ: ನೂರೊಂದು ನೆನಪುನಿರ್ಮಾಣ: ಕುಮರೇಶ್
ನಿರ್ದೇಶನ: ಸೂರಜ್ ದೇಸಾಯಿ, ಮನಿಶ್ ದೇಸಾಯಿ
ತಾರಾಗಣ: ಚೇತನ್, ರಾಜ್‌ವರ್ಧನ್, ಮೇಘನಾ ರಾಜ್, ಸುಷ್ಮಿತಾ ಜೋಷಿ, ಯಶ್ ಶೆಟ್ಟಿ, ನಟರಂಗ ರಾಜೇಶ್ ಮುಂತಾದವರು * ಚೇತನ್ ನಾಡಿಗೇರ್