Advertisement
ತಾಲೂಕಿನ ಭಾಗ್ಯನಗರದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ 1994-95ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಶನಿವಾರ ಏರ್ಪಡಿಸಿದ್ದ ರಜತ ಮಹೋತ್ಸವ ಹಾಗೂ ಗುರು ವಂದನಾ ಕಾರ್ಯಕ್ರಮಲ್ಲಿ ಅವರು ಮಾತನಾಡಿದರು.
Related Articles
Advertisement
ರೇಣುಕಾ ಮಣ್ಣೂರ, ಜಗದೀಶ ಹನುಮನಾಳ, ಜ್ಯೋತಿ ತುಂಬಳದ, ಗುರುರಾಜ ಬನ್ನಿಗೋಳ, ಶರಣು ತಿಳಿಗೋಳ ಮತ್ತಿತರರು ಅನಿಸಿಕೆ ವ್ಯಕ್ತಪಡಿಸಿದರು. ಪ್ರಭಾಕರ ಪಟವಾರಿ, ಮಾರುತಿ ಚಿತ್ರಗಾರ ಮತ್ತು ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗಾಯತ್ರಿ ಹಾಗೂ ಸುಮಿತ್ರಾ ಬೆಟಗೇರಿ ಪ್ರಾರ್ಥಿಸಿದರು. ಪರಶುರಾಮ ನಾಯಕ ಸ್ವಾಗತಿಸಿದರು. ಡಿ.ಗುರುರಾಜ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ಡೊಳ್ಳಿನ್ ಆಶಯ ನುಡಿಗಳನ್ನಾಡಿದರು. ರವಿ ಕುರಗೋಡ ವರದಿ ವಾಚಿಸಿದರು. ಬಸವರಾಜ ಕರುಗಲ್ ನಿರೂಪಿಸಿದರು. ಗಿರೀಶ್ ಪಾನಘಂಟಿ ವಂದಿಸಿದರು.
ವಿದೇಶದಿಂದ ಬಂದ ಗೆಳೆಯರು:
ಹಳೆಯ ವಿದ್ಯಾರ್ಥಿ ಚಂದ್ರಕಾಂತ್ ಜಾಧವ್ ಬಹ್ರೇನ್‌ನಿಂದ ಆಗಮಿಸಿ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಇವರು ಬಹ್ರೇನ್ ದೇಶದಲ್ಲಿ ಮಾರುಕಟ್ಟೆ ವಿಭಾಗದಲ್ಲಿ ಉನ್ನತ ಹುದ್ದೆಯಲ್ಲಿದ್ದು, 25 ವರ್ಷಗಳ ಬಳಿಕ ತಾನು ಕಲಿತ ಶಾಲೆಗೆ ಮರಳಿ ಭೇಟಿ ನೀಡಿದ ಕುರಿತು ಪ್ರಸ್ತಾಪಿಸಿದರು. ಇನ್ನೂ ಜರ್ಮನಿ ದೇಶದಲ್ಲಿ ನೆಲೆಸಿದ ಸಾಫ್ಟವೇರ್ ಇಂಜನಿಯರ್ ಪ್ರಶಾಂತ ಮಾದಿನೂರು ವೀಡಿಯೋ ಮೂಲಕ ತಮ್ಮ ಸಂದೇಶ ಕಳಿಸಿ ಅಂದಿನ ನೆನಪು ಮೆಲುಕು ಹಾಕಿದರು.
ಸಹಾಯ ಹಸ್ತ:
ಹಳೆಯ ವಿದ್ಯಾರ್ಥಿಗಳು ಬ್ಯಾಂಕ್ ಖಾತೆ ತೆರೆದಿದ್ದು, ಖಾತೆಗೆ ಹಳೆಯ ವಿದ್ಯಾರ್ಥಿಗಳು ಪ್ರತಿ ತಿಂಗಳು ಸಾಧ್ಯವಾದಷ್ಟು ಹಣ ಹಾಕಿದರೆ ಆ ಖಾತೆಯಲ್ಲಿ ಜಮೆಯಾಗುವ ಹಣದಲ್ಲಿ ಪ್ರತಿ ವರ್ಷ ಸ್ನೇಹಿತರ ಕುಟುಂಬದ ಆರ್ಥಿಕ ಸಂಕಷ್ಟಗಳಿಗೆ ಸಹಾಯ ಹಸ್ತ ಚಾಚುವ ಯೋಜನೆಗೆ ಚಾಲನೆ ನೀಡಲಾಯಿತು. ಗುರುವಂದನೆ ಸಲ್ಲಿಸಿದ ವಿದ್ಯಾರ್ಥಿಗಳು ಕಾರ್ಯಕ್ರಮದ ಸ್ಮರಣಾರ್ಥ ಭಾಗ್ಯನಗರ ಪ್ರೌಢಶಾಲೆಗೆ ಊಟದ ತಟ್ಟೆ-ಲೋಟ್ ದೇಣಿಗೆ ನೀಡಿದರು.