ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸ್ನೇಹಿತರ ಮಧ್ಯೆ ನಡೆದ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯವಾದ ಘಟನೆ ಜೆ.ಪಿ.ನಗರ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಜರಗನಹಳ್ಳಿ ನಿವಾಸಿ, ಕಾರು ಚಾಲಕ ಹೇಮಂತ್ ಕುಮಾರ್ (25) ಕೊಲೆಯಾದವ. ಪ್ರಕರಣ ಸಂಬಂಧ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುವ ಅಮೃತ್ ಎಂಬಾತನನ್ನು ಬಂಧಿಸಲಾಗಿದೆ. ಜರಗನಹಳ್ಳಿ ಕ್ರಾಸ್ ಬಳಿಯಿರುವ ಸಿಂಧೂರು ಕಲ್ಯಾಣ ಮಂದಿರ ಸಮೀಪ ಘಟನೆ ನಡೆದಿದೆ.
ಡಿ.31ರ ತಡರಾತ್ರಿ 12 ಗಂಟೆ ಸುಮಾರಿಗೆ ಸಾರಕ್ಕಿ ಅಗ್ರಹಾರ ನಿವಾಸಿಗಳಾದ ಹೇಮಂತ್ ಮತ್ತು ಈತನ ಸಹೋದರ ಹಾಗೂ ಈತನ ಸ್ನೇಹಿತ ಅಮೃತ್ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ಈ ವೇಳೆ ಹೇಮಂತ್‌ನ ಸಹೋದರ ಹಾಗೂ ಈತನ ಸ್ನೇಹಿತರ ನಡುವೆ ಗಲಾಟೆಯಾಗಿದ್ದು, ಹೇಮಂತ್ ಇಬ್ಬರನ್ನು ಸಮಾಧಾನ ಮಾಡಿದ್ದಾನೆ.
ಕೆಲ ಹೊತ್ತಿನ ಬಳಿಕ ಆರೋಪಿ ಅಮೃತ್, “ನಿನ್ನ ತಮ್ಮನ ಕೆಟ್ಟ ಚಟಗಳ ಬಗ್ಗೆ ಹೇಳುತ್ತೇನೆ’ ಎಂದು ಹೇಮಂತ್ ಕುಮಾರ್‌ನನ್ನು ಬಾರ್‌ನಿಂದ ಹೊರಗಡೆ ಕರೆತಂದು ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಇದೇ ವೇಳೆ ಹೇಮಂತ್‌ನ ಸಹೋದರ ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆ ಸಂಬಂಧ ತಲೆಮರೆಸಿಕೊಂಡಿದ್ದ ಆರೋಪಿ ಅಮೃತ್‌ನನ್ನು ಸೋಮವಾರ ನಸುಕಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುವ ಅಮೃತ್, ತನ್ನ ರಕ್ಷಣೆಗಾಗಿ ಚಾಕು ಖರೀದಿಸಿದ್ದು, ಮದ್ಯ ಸೇವಿಸಲು ಹೋಗುವಾಗ ಕೊಂಡೊಯ್ದಿದ್ದ. ಇದೇ ವೇಳೆ ಜಗಳ ವಿಕೋಪಕ್ಕೆ ಹೋದಾಗ ಅದೇ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಜೆ.ಪಿ.ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಮತ್ತೂಂದು ಪ್ರಕರಣದಲ್ಲಿ ಶಿವಮೊಗ್ಗ ಮೂಲದ ಅಮಿತ್ (24) ಎಂಬಾತನನು,° ಮದ್ಯದ ಅಮಲಿನಲ್ಲಿದ್ದ ಆತನ ಸ್ನೇಹಿತರೇ ಇರಿದು ಕೊಂದಿದ್ದಾರೆ. ಪ್ರಕರಣ ಸಂಬಂಧ ಒಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಇತ್ತೀಚೆಗಷ್ಟೇ ನಗರಕ್ಕೆ ಬಂದಿದ್ದ ಅಮಿತ್, ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ. ಭಾನುವಾರ ರಾತ್ರಿ ಬೇರೆಡೆ ಇರುವ ಸ್ನೇಹಿತರೆಲ್ಲ ಜೆ.ಪಿ.ನಗರದ ಮುಖ್ಯರಸ್ತೆಯಲ್ಲಿ ಹೊಸ ವರ್ಷಾಚರಣೆ ಮಾಡಿದ್ದಾರೆ.
ಈ ವೇಳೆ ಕಂಠಪೂರ್ತಿ ಮದ್ಯ ಸೇವಿಸಿದ್ದು, ಆಚರಣೆ ಬಳಿಕ ಎಲ್ಲರೂ ತಮ್ಮ ಮನೆಗಳಿಗೆ ತೆರಳಿದ್ದಾರೆ. ಆದರೆ, ದಾರಿ ಮಧ್ಯೆ ಮತ್ತೂಮ್ಮೆ ಎಲ್ಲರು ಪರಸ್ಪರ ಕರೆ ಮಾಡಿಕೊಂಡು ಜೆ.ಪಿ.ನಗರದ ಮುಖ್ಯ ರಸ್ತೆಗೆ ವಾಪಸ್ ಬಂದಿದ್ದಾರೆ. ಈ ವೇಳೆ ಸ್ನೇಹಿತರ ನಡುವೆ ಜಗಳವಾಗಿದ್ದು, ನಾಲ್ಕು ಮಂದಿ ಪೈಕಿ ಒಬ್ಟಾತ ಅಮಿತ್‌ಗೆ ಚಾಕುವಿನಿಂದ ಇರಿದಿದ್ದಾನೆ.
ಹೀಗಾಗಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಅಮಿತ್ ಸಾವನ್ನಪ್ಪಿದ್ದಾನೆ. ಪ್ರಕರಣ ಸಂಬಂಧ ಒಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದು, ಮದ್ಯದ ಅಮಲಿನಲ್ಲಿ ಘಟನೆ ನಡೆದಿರುವುದಾಗಿ ಹೇಳಿದ್ದಾನೆ. ಮತ್ತೂಬ್ಬನ ಬಂಧನದ ನಂತರ ಆದರೆ ಕೊಲೆಗೆ ಸ್ಪಷ್ಟ ಕಾರಣ ಗೊತ್ತಾಗಲಿದೆ ಎಂದು ಜೆ.ಪಿ.ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.