Advertisement

ಕ್ರಿಸ್ಮಸ್‌ ಸೌಹಾರ್ದ ಕೂಟ

10:48 AM Jan 10, 2018 | |

ಮಹಾನಗರ: ಶತಮಾನಗಳಿಂದ ಭಾರತದಲ್ಲಿ ಸರ್ವ ಧರ್ಮದ ಜನತೆ ಸಹಬಾಳ್ವೆ ನಡೆಸಿದ್ದಾರೆ. ಸೌಹಾರ್ದತೆಯ ಬದುಕೇ ಭಾರತದ ಉಸಿರು. ಭಾರತ ದಲ್ಲಿರುವ ಶ್ರೇಷ್ಠ ಸಂಸ್ಕೃತಿ, ಸಂಸ್ಕಾರವನ್ನು ವಿಶ್ವದ ಯಾವುದೇ ದೇಶದಲ್ಲೂ ಕಾಣಲು ಸಾಧ್ಯವಿಲ್ಲ. ಇಂತಹ ಉನ್ನತ ಪರಂಪರೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿ ಎಂದು ಶ್ರೀ ಕಟೀಲು ಕ್ಷೇತ್ರದ ಶ್ರೀ ಕಮಲಾದೇವಿ ಆಸ್ರಣ್ಣ ಹೇಳಿದರು.

Advertisement

ವಿನಿಶಾ ಚಾರಿಟೆಬಲ್‌ ಟ್ರಸ್ಟ್‌ ಬೋಂದೆಲ್‌ ವತಿಯಿಂದ ಸಂತ ಲಾರೆನ್ಸ್‌ ಚರ್ಚ್‌ ಮುಂಭಾಗದ ಮೈದಾನದಲ್ಲಿ ನಡೆದ ಕ್ರಿಸ್ಮಸ್‌ ಸೌಹಾರ್ದ ಕೂಟದಲ್ಲಿ ಅವರು ಆಶೀರ್ವಚನ ನೀಡಿದರು. ಸಂತ ಲಾರೆನ್ಸ್‌ ಚರ್ಚ್‌ನ ಧರ್ಮಗುರು ಫಾ| ಆಂಡ್ರೂ ಡಿ’ಸೋಜಾ ಅಧ್ಯಕ್ಷತೆ ವಹಿಸಿ, ಪರಸ್ಪರ ನಂಬಿಕೆ, ವಿಶ್ವಾಸದ ತಳಹದಿಯಲ್ಲಿ ಒಂದಾಗಿ ಬಾಳುವುದೇ ಹಬ್ಬಗಳ ಆಶಯವಾಗಿದೆ ಎಂದರು.

ಸಾಹಿತಿ ವಸಂತ ಕುಮಾರ್‌ ಪೆರ್ಲ, ಆಕಾಶವಾಣಿಯ ಕಾರ್ಯಕ್ರಮ ನಿರ್ದೇಶಕ ಸದಾನಂದ ಪೆರ್ಲ, ಚಿಲಿಂಬಿ ಶಿರಡಿ ಸಾಯಿಬಾಬಾ ಮಂದಿರದ ಆಡಳಿತ ಟ್ರಸ್ಟಿ ವಿಶ್ವಾಸ್‌ ಕುಮಾರ್‌ ದಾಸ್‌, ನಿವೃತ್ತ ಯೋಧ ತಾರಾನಾಥ ಬೋಳಾರ, ಕಾರ್ಮಿಕ ಮುಖಂಡ ಸುನೀಲ್‌ ಕುಮಾರ್‌ ಬಜಾಲ್‌, ನಾರಾಯಣ ಮೂಳೂರು ಅತಿಥಿಗಳಾಗಿದ್ದರು.

ವಿನಿಶಾ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯಧನ ವಿತರಣೆ, ಶಾಲಾ
ಮಕ್ಕಳಿಗೆ ಮತ್ತು ಆಶ್ರಮದ ಮಕ್ಕಳಿಗೆ ಸಮವಸ್ತ್ರ ವಿತರಣೆ, ವಿದ್ಯಾರ್ಥಿ ವೇತನ ವಿತರಣೆ, ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಲಾಯಿತು. ಟ್ರಸ್ಟ್‌ನ ನಿರ್ದೇಶಕರಾದ ಜೆರಾಲ್ಡ್‌, ಮರಿಯಾ ಪ್ರಿಯಾ ಜೆರಾಲ್ಡ್‌ ಮೊದಲಾದವರು ಉಪಸ್ಥಿತರಿದ್ದರು. 

ಸಾಧಕರಿಗೆ ಸಮ್ಮಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಕಾಶ್‌ ಪಂಡಿತ್‌ ಮಂದಾರಬೈಲು, ಯೋಗಗುರು ಜಗದೀಶ್‌ ಶೆಟ್ಟಿ ಬಿಜೈ, ಸಿ.ಫಿಲೋಮಿನಾ, ಅಖಿಲ ಭಾರತ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಇರಾ ನೇಮು ಪೂಜಾರಿ, ಪತ್ರಕರ್ತ ಪಿ.ಬಿ.ಹರೀಶ್‌ ರೈ, ಗ್ರೀಷ್ಮಾ ಶೆಟ್ಟಿ, ಅದ್ವಿಕಾ ಶೆಟ್ಟಿ , ಪೂರ್ವಿ ಇವರನ್ನು ಸಮ್ಮಾನಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next