Advertisement

ದಂತದ ಬೊಂಬೆ

06:16 PM Jul 23, 2019 | mahesh |

ಬೆಳಗ್ಗೆ-ರಾತ್ರಿ ಬ್ರಶ್‌ ಮಾಡ್ತೀನಿ, ಮಧ್ಯಾಹ್ನವೂ ಮೌತ್‌ವಾಷ್‌ ಬಳಸೋಕೆ ಮರೆಯೋದಿಲ್ಲ, ಆದರೂ ಹಲ್ಲು ಹಳದಿಗಟ್ಟಿದೆ…ಇದು ಹಲವರ ಸಮಸ್ಯೆ. ಹಲ್ಲಿನ ಬಣ್ಣದ ಕಾರಣದಿಂದ, ಮುಕ್ತವಾಗಿ ನಗುವುದನ್ನೂ ನಿಲ್ಲಿಸಿದ್ದಾರೆ ಕೆಲವರು. ಅಂಥವರಿಗಾಗಿ ಕೆಲವು ಟಿಪ್ಸ್‌ಗಳು ಇಲ್ಲಿವೆ. ಮನೆಯಲ್ಲೇ ಸಿಗುವ ವಸ್ತುಗಳಿಂದ ಹಲ್ಲನ್ನು ಫ‌ಳ ಫ‌ಳ ಹೊಳೆಯುವಂತೆ ಮಾಡುವುದು ಹೇಗೆಂದು ಇಲ್ಲಿದೆ ನೋಡಿ.

Advertisement

– ಪ್ರತಿದಿನ ಬೆಳಗ್ಗೆ ಅಥವಾ ವಾರಕ್ಕೆ ಮೂರು ಬಾರಿ, ಬ್ರಶ್‌ ಮಾಡುವ ಮುನ್ನ ಕೊಬ್ಬರಿ ಎಣ್ಣೆಯಿಂದ 15-20 ನಿಮಿಷ ಬಾಯಿ ಮುಕ್ಕಳಿಸಿ.
– ವಾರಕ್ಕೆರಡು ಬಾರಿ ಟೂತ್‌ಪೇಸ್ಟ್‌ನ ಬದಲು, ಅಡುಗೆ ಸೋಡಾ ಬಳಸಿ ಬ್ರಷ್‌ ಮಾಡಿ.
– ಆ್ಯಪಲ್‌ ಸಿಡರ್‌ ವಿನೇಗರ್‌ ಅನ್ನು ನೀರಿನೊಂದಿಗೆ ಬೆರೆಸಿ ಬಾಯಿ ಮುಕ್ಕಳಿಸಿ. (ಪ್ರತಿದಿನವೂ ಇದನ್ನು ಬಳಸಬಾರದು)
-ತಾಜಾ ಸ್ಟ್ರಾಬೆರಿ ತುಂಡನ್ನು ಅಡುಗೆ ಸೋಡಾದಲ್ಲಿ ಅದ್ದಿ, ಹಲ್ಲು ಉಜ್ಜಿದರೆ ಹಲ್ಲಿಗೆ ಹೊಳಪು ಸಿಗುತ್ತದೆ.
– ಲಿಂಬೆಹಣ್ಣಿನ ರಸಕ್ಕೆ, ಉಪ್ಪು ಬೆರೆಸಿ, ಬಾಯಿ ಮುಕ್ಕಳಿಸಿ.
-ಅನಾನಸ್‌ ಹಣ್ಣಿನಲ್ಲಿರುವ ಬ್ರೊಮೆಲೈನ್‌ ಅಂಶವು ಹಲ್ಲಿಗೆ ಹೊಳಪು ನೀಡುತ್ತದಂತೆ. ಅನಾನಸ್‌ ಹಣ್ಣಿನ ಸೇವನೆಯಿಂದ, ಬ್ರೊಮೆಲೈನ್‌ ಅಂಶವಿರುವ ಟೂತ್‌ಪೇಸ್ಟ್‌ ಬಳಕೆಯಿಂದ ಹಲ್ಲು ಬಿಳಿಯಾಗುತ್ತದೆ.
-ಬಾಳೆಹಣ್ಣು, ಲಿಂಬೆಹಣ್ಣು, ಕಿತ್ತಳೆ ಹಣ್ಣಿನ ಸಿಪ್ಪೆಯ ಒಳಗಿನ ಬಿಳಿಭಾಗದಿಂದ ಹಲ್ಲುಜ್ಜಿ.
-ಇದ್ದಿಲಿನ ಪುಡಿ ಜೊತೆಗೆ ಉಪ್ಪು ಸೇರಿಸಿ ಬ್ರಷ್‌ ಮಾಡಬಹುದು.
-ಹೆಚ್ಚು ಕ್ಯಾಲ್ಸಿಯಂ ಇರುವ ಆಹಾರ ಸೇವಿಸಿ.

ಇವುಗಳಿಗೆ ಬೈ ಬೈ ಮಾಡಿ
-ಅತಿಯಾದ ಕಾಫಿ, ಟೀ ಸೇವನೆ
-ಧೂಮಪಾನ, ಮದ್ಯಪಾನ
-ಸೋಡಾ ಮಿಶ್ರಿತ ತಂಪು ಪಾನೀಯ
-ಆಹಾರದಲ್ಲಿ ಅತಿಯಾದ ಸಕ್ಕರೆ ಪ್ರಮಾಣ

Advertisement

Udayavani is now on Telegram. Click here to join our channel and stay updated with the latest news.

Next