Advertisement

ತಾಜಾ ಮಾವು, ಹಲಸು ಬೇಕಾ?ಮೇಳಕ್ಕೆ ಬನ್ನಿ;ಲಾಲ್‌ಬಾಗ್‌ನಲ್ಲಿ ಜೂ.13ರವರೆಗೆ ಪ್ರದರ್ಶನ, ಮಾರಾಟ

01:09 PM May 27, 2022 | Team Udayavani |

ಬೆಂಗಳೂರು: ತೋಟಗಾರಿಕೆ ಇಲಾಖೆ ಹಾಗೂ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವತಿಯಿಂದ ಲಾಲ್‌ ಬಾಗ್‌ನಲ್ಲಿ ಮೇ 27ರಿಂದ ಜೂ.13ರ ವರೆಗೆ ಮಾವು-ಹಲಸು ಹಣ್ಣು ಪ್ರದರ್ಶನ ಮತ್ತು ಮಾರಾಟ ಮೇಳ 2022ನ್ನು ಹಮ್ಮಿಕೊಳ್ಳಲಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಜಿ ನಾಗರಾಜು ತಿಳಿಸಿದರು.

Advertisement

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಸಂಜೆ 4.30ಕ್ಕೆ ಮೇಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾರಾಟ ಮಳಿಗೆಯನ್ನು ತೋಟಗಾರಿಕೆ ಸಚಿವ ಮುನಿರತ್ನ ಚಾಲನೆ ನೀಡಲಿದ್ದಾರೆ ಎಂದರು.

ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್‌ ಮಾತನಾಡಿ, ರಾಮನಗರ ಮತ್ತು ಕೋಲಾರ ಜಿಲ್ಲೆಗಳ 108 ರೈತರು ಮಳಿಗೆ ಹಾಗೂ ರೈತ ಉತ್ಪಾದಕ ಸಂಘಗಳಿಂದಲೂ ಮಳಿಗೆ ಪ್ರಾರಂಭಿಸಲಾಗುತ್ತಿದೆ. ಗ್ರಾಹಕರಿಗೆ ಹೊರೆಯಾಗದಂತೆ ಹಾಗೂ ರೈತರಿಗೆ ನಷ್ಟವಾಗದಂತೆ ಬೆಲೆ ನಿಗದಿ ಮಾಡಲಾಗಿದೆ. 16 ಮಳಿಗೆಗಳನ್ನು ಹಲಸು ಬೆಳೆಗಾರರಿಗಾಗಿ, 8 ಮಳಿಗೆಗಳನ್ನು ಹಲಸು-ಮಾವು ಉತ್ಪನ್ನಗಳಿಗೆ ನೀಡಲಾಗಿದೆ. ಗ್ರಾಹಕರಿಗೆ ಮಾರುಕಟ್ಟೆ ಗಿಂತಲೂ ಕಡಿಮೆ ಬೆಲೆಗೆ ಉತ್ತಮ ಮತ್ತು ಗುಣಮಟ್ಟದ ಮಾವಿನ ಹಣ್ಣನ್ನು ಒದಗಿಸಲಾಗುವುದು ಎಂದರು.

ಮಾವು ಹೊರದೇಶ ಹಾಗೂ ರಾಜ್ಯಗಳಲ್ಲಿ ಪರಿಚಯಿಸಲು ರಾಜ್ಯದ ಮಾವಿಗೆ ಕರ್‌ಸಿರಿ ಎಂಬ ಹೆಸರು ಹಾಗೂ ಚಿಹ್ನೆಯನ್ನು ವಿನ್ಯಾಸಗೊಳಿಸಿ ಬ್ರಾಂಡ್‌ ಮೂಲಕ ಹಣ್ಣುಗಳನ್ನು ಮಾಡಲು ಉತ್ತೇಜಿಸಲಾಗುತ್ತಿದೆ. ಹಲಸಿನ ತಳಿಗಳು ವಿವಿಧ ಗಾತ್ರ, ಹಳದಿ, ಕೇಸರಿ, ಕೆಂಪು ಬಣ್ಣ ತೊಳೆಗಳು ಹಾಗೂ ಪ್ರಸಿದ್ಧ ತಳಿಗಳು ದೊರಕಲಿವೆ. ಹಪ್ಪಳ, ಚಿಪ್ಸ್‌ ಹಾಗೂ ಇತರೆ ಸಂಸ್ಕರಿಸಿದ ಹಲಸಿನ ಉತ್ಪನ್ನಗಳು ಲಭ್ಯವಿದೆ ಎಂದರು.

ಆಯುಕ್ತರಿಗೆ ಪತ್ರ: ಕಬ್ಬನ್‌ ಪಾರ್ಕ್‌ನಲ್ಲಿ ಮಾವು ಮೇಳ ಹಮ್ಮಿಕೊಳ್ಳುವುದಕ್ಕೆ ನಿರ್ಧರಿಸಿದೆ. ಈ ಸಂಬಂಧ ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಜತೆಗೆ ನಗರದ ಎಲ್ಲ ಭಾಗಗಳಲ್ಲಿ ರೈತರು ವಾಹನಗಳಲ್ಲಿ ಮಾವು ಮಾರಾಟಕ್ಕೆ ಅವಕಾಶ ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿರುವುದಾಗಿ ಹೇಳಿದರು. ತೋಟಗಾರಿ ಇಲಾಖೆ ಹಿರಿಯ ಸಹಾಯ ನಿರ್ದೇಶಕಿ ಲಲಿತಾ ಉಪಸ್ಥಿತರಿದ್ದರು.

Advertisement

ಯಾವ ಮಾವು ತಳಿ ಲಭ್ಯ?
ಮೇಳದಲ್ಲಿ ಬಾದಾಮಿ, ರಸಪುರಿ, ಬೈಗನ್‌ಪಲ್ಲಿ, ಮಲ್ಲಿಕಾ, ಮಲಗೋವಾ, ಸಿಂಧೂರ, ಕೇಸರ್‌, ತೋತಾಪುರಿ ಸೇರಿದಂತೆ ವಿವಿಧ ತಳಿಗಳ ಮಾವು ಖರೀದಿಗೆ ಲಭ್ಯ. ಉಪ್ಪಿನಕಾಯಿ ತಯಾರಿಗೆ ಉಪಯೋಗಿಸುವ ವಿವಿಧ ಮಾವಿನಕಾಯಿ ಮಾರಾಟಕ್ಕೆ ಲಭ್ಯವಿದೆ.

ಬೆಳಗ್ಗೆ 8ರಿಂದ ರಾತ್ರಿ 8ರ ತನಕ ಅವಕಾಶ ಮೇಳವು ನಿತ್ಯ ಬೆಳಗ್ಗೆ 8ರಿಂದ ಸಂಜೆ 8ರವರೆಗೆ ಗ್ರಾಹಕರ ಖರೀದಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ತಾಜಾ ಹಣ್ಣುಗಳನ್ನು ಖರೀದಿಸ ಬಹುದಾಗಿದೆ. ಸಹಜವಾಗಿ ಮಾಗಿದ ಅಥವಾ ಇಥಲೀನ್‌ ಉಪಚರಿಸಿ ಮಾಗಿದ ಹಣ್ಣುಗಳನ್ನು ಮಾತ್ರ ಮಾರುವ ಅವಕಾಶ ಕಲ್ಪಿಸಲಾಗಿದೆ. ಕಾರ್ಬೈಡ್‌ನಿಂದ ಮಾಗಿಸಿದ ಹಣ್ಣುಗಳನ್ನು ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next