ಇಂಫಾಲ: ಮಣಿಪುರದಲ್ಲಿ ಬುಧವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಬಿಷ್ಣುಪುರ ಜಿಲ್ಲೆಯಲ್ಲಿ ಗುಂಡಿನ ದಾಳಿ ನಡೆದಿದೆ. ಬಿಷ್ಣುಪುರ ಜಿಲ್ಲೆಯ ಕುಂಬಿ ಮತ್ತು ತೌಬಲ್ ಜಿಲ್ಲೆಯ ವಾಂಗೂ ನಡುವೆ ಗುಂಡಿನ ದಾಳಿ ನಡೆದಿದ್ದು ಈ ವೇಳೆ ನಾಲ್ವರು ನಾಪತ್ತೆಯಾಗಿರುವ ಕುರಿತು ವರದಿಯಾಗಿದೆ.
ನಾಪತ್ತೆಯಾಗಿರುವ ನಾಲ್ವರನ್ನು ಓಯಿನಮ್ ರೊಮೆನ್ ಮೈತೆ (45), ಅಹಾಂತೇಮ್ ದಾರಾ ಮೈತೆ (56), ತೌಡಮ್ ಇಬೊಮ್ಚಾ ಮೈತೆ (53) ಮತ್ತು ತೌದಮ್ ಆನಂದ್ ಮೈತೆ (27) ಎಂದು ಗುರುತಿಸಲಾಗಿದೆ.
ಗುಂಡಿನ ದಾಳಿ ನಡೆದ ಪ್ರದೇಶದ ಬಳಿ ಶುಂಠಿ ಕೊಯ್ಲು ಮಾಡಲು ಹೋದ ನಾಲ್ವರು ನಾಪತ್ತೆಯಾಗಿದ್ದಾರೆ. ಗುಂಡಿನ ದಾಳಿಗೂ ಮೊದಲು ಮಾರ್ಟರ್ ಫೈರಿಂಗ್ ನಡೆದಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ. ಘಟನೆ ಕುರಿತು ಕುಂಬಿ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.
ಇದಕ್ಕೂ ಮೊದಲು ಜನವರಿ 1 ರಂದು ತೌಬಲ್‌ನ ಲಿಲಾಂಗ್ ಪ್ರದೇಶದಲ್ಲಿ ಅಪರಿಚಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಮತ್ತು ಸ್ಥಳೀಯರ ನಡುವೆ ಘರ್ಷಣೆಗಳು ನಡೆದಿತ್ತು. ಈ ವೇಳೆ ನಾಲ್ವರು ಮೃತಪಟ್ಟಿದ್ದರು, ಈ ಹಿಂದೆಯೂ ಎರಡು ಸಮುದಾಯಗಳ ನಡುವೆ ಘರ್ಷಣೆಗಳು ನಡೆದಿದ್ದು ಅದರಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದು ಗೊತ್ತಿರುವ ವಿಚಾರ ಒಟ್ಟಾರೆಯಾಗಿ ಮಣಿಪುರದ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಇದನ್ನೂ ಓದಿ: December ತಿಂಗಳಲ್ಲಿ ಮದ್ಯ ಮಾರಾಟ; ಉಡುಪಿ: ದಾಖಲೆ ಪ್ರಮಾಣದಲ್ಲಿ ವಹಿವಾಟು