Advertisement

ಆಟ ಮುಗಿಸಿದ ಸ್ಟೆಫ‌ನಸ್‌ ಸಿಸಿಪಸ್‌ ; ರೂಡ್‌, ಕಸತ್ಕಿನಾ ಕ್ವಾರ್ಟರ್‌ ಫೈನಲ್‌ಗೆ

11:18 PM May 30, 2022 | Team Udayavani |

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಕ್ವಾರ್ಟರ್‌ ಫೈನಲ್‌ ಅಖಾಡ ಸಜ್ಜುಗೊಳ್ಳುತ್ತಿದೆ. ಸೋಮವಾರದ ಮುಖಾಮುಖಿಯಲ್ಲಿ ರಷ್ಯದ ವೆರೋನಿಕಾ ಕುಡೆರ್ಮೆ ಟೋವಾ ಮತ್ತು ದರಿಯಾ ಕಸತ್ಕಿನಾ ಜಯ ಸಾಧಿಸಿದ್ದು, ಕ್ವಾರ್ಟರ್‌ ಫೈನಲ್‌ನಲ್ಲಿ ಪರಸ್ಪರ ಎದು ರಾಗುತ್ತಿದ್ದಾರೆ. ಪುರುಷರ ಸಿಂಗಲ್ಸ್‌ ನಲ್ಲಿ ನಾರ್ವೆಯ ಕ್ಯಾಸ್ಪರ್‌ ರೂಡ್‌, ಡೆನ್ಮಾರ್ಕ್‌ನ ಹೋಲ್ಜರ್‌ ರುನೆ ಲಾಸ್ಟ್‌-8 ರೌಂಡ್‌ ತಲುಪಿದ್ದಾರೆ. ಗ್ರೀಸ್‌ನ ದೈತ್ಯ ಆಟಗಾರ ಸ್ಟೆಫ‌ನಸ್‌ ಸಿಸಿಪಸ್‌ ಆಟ ಕೊನೆಗೊಂಡಿದೆ.

Advertisement

ವನಿತಾ ಸಿಂಗಲ್ಸ್‌ನಲ್ಲಿ 20ನೇ ಶ್ರೇಯಾಂಕದ ದರಿಯಾ ಕಸತ್ಕಿನಾ ಇಟಲಿಯ ಕ್ಯಾಮಿಲಾ ಜಾರ್ಜಿ ವಿರುದ್ಧ 6-2, 6-2 ನೇರ ಸೆಟ್‌ಗಳಿಂದ ಗೆದ್ದು ಬಂದರು. ಅನಂತರದ ಮುಖಾಮುಖಿಯಲ್ಲಿ ವೆರೋನಿಕಾ ಕುಡೆರ್ಮೆಟೋವಾ 3 ಸೆಟ್‌ಗಳ ಹೋರಾಟದ ಬಳಿಕ ಅಮೆರಿಕದ ಮ್ಯಾಡಿಸನ್‌ ಕೀಸ್‌ ಅವರನ್ನು 1-6, 6-3, 6-1 ಅಂತರದಿಂದ ಪರಾಭವಗೊಳಿಸಿದರು.

2018ರಲ್ಲಿ ರೊಲ್ಯಾಂಡ್‌ ಗ್ಯಾರೋಸ್‌ ಸೆಮಿಫೈನಲ್‌ ತಲುಪಿದ್ದ ಕೀಸ್‌ ಮೊದಲ ಸೆಟ್‌ ಅನ್ನು ಸುಲಭದಲ್ಲಿ ವಶಪಡಿಸಿಕೊಂಡರು. ಆದರೆ ಮುಂದಿನೆರಡು ಸೆಟ್‌ಗಳಲ್ಲಿ ರಷ್ಯನ್‌ ಆಟಗಾರ್ತಿ ತಿರುಗಿ ಬಿದ್ದರು.

ಕಳೆದ 12 ಕೂಟಗಳಲ್ಲಿ ಕುಡೆರ್ಮೆಟೋವಾ ಎಲ್ಲಿಯೂ ತೃತೀಯ ಸುತ್ತು ದಾಟಿಲ್ಲ. ಮ್ಯಾಡಿಸನ್‌ ಕೀಸ್‌ 2017ರ ಯುಎಸ್‌ ಓಪನ್‌ ರನ್ನರ್ ಅಪ್‌ ಆಗಿದ್ದಾರೆ.

ಜೊಕೋ-ನಡಾಲ್‌ ಫೈಟ್‌
ಕೂಟದ ಸ್ಟಾರ್‌ ಆಟಗಾರರಾದ ನೊವಾಕ್‌ ಜೊಕೋವಿಕ್‌ ಮತ್ತು ರಫೆಲ್‌ ನಡಾಲ್‌ ಕ್ವಾರ್ಟರ್‌ ಪೈನಲ್‌ನಲ್ಲಿ ಮುಖಾಮುಖಿ ಆಗುತ್ತಿರುವುದು ಈ ಕೂಟದ ವಿಶೇಷ. 2006ರ ಫ್ರೆಂಚ್‌ ಓಪನ್‌ ಪಂದ್ಯಾವಳಿಯಲ್ಲಿ ಇವರಿಬ್ಬರು ಮೊದಲ ಸಲ ಮುಖಾಮುಖೀ ಆಗಿದ್ದರು.

Advertisement

ಅಲ್ಲಿಂದೀಚೆ ಸಮಬಲದ ಹೋರಾಟ ನಡೆಸುತ್ತ ಬಂದಿದ್ದಾರೆ. ಇದರಲ್ಲಿ ನಡಾಲ್‌ 30-28 ಅಂತರದ ಅಲ್ಪ ಮುನ್ನಡೆ ಹೊಂದಿದ್ದಾರೆ. ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ನಡಾಲ್‌ 5 ಸೆಟ್‌ಗಳ ಕಾದಾಟದ ಬಳಿಕ ಕೆನಡಾದ ಫೆಲಿಕ್ಸ್‌ ಔಗರ್‌ ಅಲಿಯಾಸಿಮ್‌ ವಿರುದ್ಧ 3-6, 6-3, 6-2, 3-6, 6-3 ಅಂತರದ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಜೊಕೋವಿಕ್‌ 6-1, 6-3, 6-3 ಸೆಟ್‌ಗಳಿಂದ ಡೀಗೊ ಶಾರ್ಟ್ಸ್ ಮನ್‌ಗೆ ಸೋಲುಣಿಸಿದ್ದರು.

ರೂಡ್‌ ಗೆಲುವಿನ ರೋಡ್‌
ಪುರುಷರ ಸಿಂಗಲ್ಸ್‌ನಲ್ಲಿ ನಾರ್ವೆಯ ಕ್ಯಾಸ್ಪರ್‌ ರೂಡ್‌ ಮೊದಲ ಸಲ ಫ್ರೆಂಚ್‌ ಓಪನ್‌ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಹಾಕಿದರು. ಅವರು ಪೋಲೆಂಡ್‌ನ‌ ಹ್ಯೂಬರ್ಟ್‌ ಹುರ್ಕಾಝ್ ವಿರುದ್ಧ 6-2, 6-3, 3-6, 6-3 ಅಂತರದಿಂದ ಗೆದ್ದು ಬಂದರು. ಹೋಲ್ಜರ್‌ ರುನೆ 7-5, 3-6, 6-3, 6-4ರಿಂದ ಸಿಸಿಪಸ್‌ಗೆ ಸೋಲಿನ ಆಘಾತವಿಕ್ಕಿದರು.

 

Advertisement

Udayavani is now on Telegram. Click here to join our channel and stay updated with the latest news.

Next