ಪ್ಯಾರಿಸ್ : ಹಾಲಿ ಚಾಂಪಿಯನ್ ರಫೆಲ್ ನಡಾಲ್ ತಮ್ಮ 35ನೇ ಜನ್ಮದಿನವನ್ನು ದ್ವಿತೀಯ ಸುತ್ತಿನ ಗೆಲುವಿನೊಂದಿಗೆ ಆಚರಿಸಿದರು.
ಫ್ರಾನ್ಸ್‌ನ ರಿಚರ್ಡ್ ಗಾಸ್ಕ್ವೆಟ್ ಅವರನ್ನು 6-0, 7-5, 6-2 ಅಂತರದಿಂದ ಹಿಮ್ಮೆಟ್ಟಿಸಿದರು. ಇದರೊಂದಿಗೆ ಗಾಸ್ಕ್ವೆಟ್ ವಿರುದ್ಧ ನಡಾಲ್ ಅವರ ಅಜೇಯ ಓಟ 17ಕ್ಕೆ ವಿಸ್ತರಿಸಲ್ಪಟ್ಟಿತು. 2004ರಲ್ಲಿ ಇವರಿಬ್ಬರು ಮೊದಲ ಸಲ ಮುಖಾಮುಖೀ ಆಗಿದ್ದರು. ಕಳೆದ 12 ಸೋಲುಗಳ ವೇಳೆ ಚಾಂಪಿಯನ್ ಆಟಗಾರನ ವಿರುದ್ಧ ಗಾಸ್ಕ್ವೆಟ್‌ಗೆ ಒಂದು ಸೆಟ್ ಕೂಡ ಗೆಲ್ಲಲಾಗಿಲ್ಲ!
ನಡಾಲ್ ಒಬ್ಬನೇ ಆಟಗಾರನ ವಿರುದ್ಧ 17 ಪಂದ್ಯಗಳನ್ನು ಗೆದ್ದ 5ನೇ ಟೆನಿಸಿಗನಾಗಿದ್ದಾರೆ. ಉಳಿದವ ರೆಂದರೆ ಬೋರ್ಗ್, ಜೊಕೋವಿಕ್, ಫೆಡರರ್ ಮತ್ತು ಇವಾನ್ ಲೆಂಡ್ಲ್.
ಇದನ್ನೂ ಓದಿ :ಉದ್ದೀಪನ ಬಲೆಯಲ್ಲಿ ಕುಸ್ತಿಪಟು ಸುಮಿತ್ : ಭಾರತದ ಕುಸ್ತಿಗೆ ಇನ್ನೊಂದು ಕಳಂಕ
ಫೆಡರರ್ 6-2, 2-6, 7-6 (7-4), 6-2ರಿಂದ ಮರಿನ್ ಸಿಲಿಕ್‌ಗೆ ಸೋಲುಣಿಸಿದರೆ, ಜೊಕೋವಿಕ್ ಉರುಗ್ವೆಯ ಪಾಬ್ಲೊ ಕ್ಯುವಾಸ್ ವಿರುದ್ಧ 6-3, 6-2, 6-4ರಿಂದ ಗೆದ್ದು ಬಂದರು.