ಪ್ಯಾರಿಸ್: ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ನೆಚ್ಚಿನ ಆಟಗಾರ ರಫೆಲ್ ನಡಾಲ್ 3ನೇ ಸುತ್ತಿಗೆ ಓಟ ಬೆಳೆಸಿದರೆ, ವಿಶ್ವದ ಮಾಜಿ ನಂ.1 ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ ದ್ವಿತೀಯ ಸುತ್ತಿನಲ್ಲಿ ಆಘಾತಕಾರಿ ಸೋಲಿನೊಂದಿಗೆ ಹೋರಾಟವನ್ನು ಕೊನೆ ಗೊಳಿಸಿದ್ದಾರೆ. ವೈಲ್ಡ್‌ಕಾರ್ಡ್ ಮೂಲಕ ಪ್ರವೇಶ ಪಡೆದ, ವಿಶ್ವ ರ್‍ಯಾಂಕಿಂಗ್‌ನಲ್ಲಿ 227ರಷ್ಟು ಕೆಳ ಸ್ಥಾನದಲ್ಲಿರುವ ಆತಿಥೇಯ ನಾಡಿನ ಲಿಯೋಲಿಯಾ ಜೀನ್‌ಜಿàನ್ 6-2, 6-2 ನೇರ ಸೆಟ್‌ಗಳಿಂದ ಪ್ಲಿಸ್ಕೋವಾಗೆ ಸೋಲುಣಿಸಿದರು.
ಇದು ಜೀನ್‌ಜಿàನ್ ಅವರ ಮೊದಲ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಯಾಗಿದ್ದು, ಮೊದಲ ಸಲ ಟಾಪ್-10 ರ್‍ಯಾಂಕಿಂಗ್ ಆಟಗಾರ್ತಿಯೆದುರು ಕಣಕ್ಕಿಳಿದಿದ್ದರು.
3ನೇ ಶ್ರೇಯಾಂಕದ ಸ್ಪೇನ್ ಆಟಗಾರ್ತಿ ಪೌಲಾ ಬಡೋಸಾ ಸೋಲಿನ ದವಡೆಯಿಂದ ಪಾರಾಗಿ 3ನೇ ಸುತ್ತಿಗೆ ಮುನ್ನಡೆದರು. ಸ್ಲೊವೇನಿಯಾದ 68ನೇ ಶ್ರೇಯಾಂಕದ ಕಾಜಾ ಜುವಾನ್ ವಿರುದ್ಧ ಭಾರೀ ಬೆವರಿಳಿಸಿಕೊಂಡ ಬಡೋಸಾ, 2 ಗಂಟೆ, 17 ನಿಮಿಷಗಳ ಹೋರಾಟದ ಬಳಿಕ 7-5, 3-6, 6-2 ಅಂತರದ ಜಯ ಸಾಧಿಸಿದರು.
ಪುರುಷರ ಸಿಂಗಲ್ಸ್: ಪುರುಷರ ಸಿಂಗಲ್ಸ್‌ನಲ್ಲಿ ರಫೆಲ್ ನಡಾಲ್ 6-3, 6-1, 6-4ರಿಂದ ಫ್ರಾನ್ಸ್‌ನ ಕೊರೆಂಟಿನ್ ಮೌಟೆಟ್ ಅವರನ್ನು ಪರಾಭವಗೊಳಿಸಿ 3ನೇ ಸುತ್ತಿಗೆ ಮುನ್ನಡೆದರು. ಇದು ಅವರ 300ನೇ ಗ್ರಾನ್‌ಸ್ಲಾಮ್ ಗೆಲುವು. ದ್ವಿತೀಯ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಡ್ಯಾನಿಲ್ ಮೆಡ್ವೆಡೇವ್ ಸರ್ಬಿಯಾದ ಲಾಸ್ಲೊ ಡಿಜೆರೆ ವಿರುದ್ಧ 6-3, 6-4, 6-3 ಗೆಲುವು ಸಾಧಿಸಿದರು. ಮೊದಲ ಸುತ್ತಿನಲ್ಲಿ ಡೆನ್ನಿಸ್ ಶಪೊವಲೋವ್ ಅವರಿಗೆ ಸೋಲಿನೇಟು ನೀಡಿದ್ದ ಹೋಲ್ಗರ್ ರುನೆ ಫಿನ್ಲಂಡ್‌ನ ಫಿನ್ಲಂಡ್‌ನ ಹೆನ್ರಿ ಲಾಕೊÕàನೆನ್ ಅವರನ್ನು 6-3, 6-3, 6-3ರಿಂದ ಮಣಿಸಿ 3ನೇ ಸುತ್ತಿಗೆ ಲಗ್ಗೆ ಇರಿಸಿದರು. 8ನೇ ಶ್ರೇಯಾಂಕದ ಕ್ಯಾಸ್ಪರ್ ರೂಡ್ ಮೂಡ 3ನೇ ಸುತ್ತಿಗೆ ಮುನ್ನಡೆದಿದ್ದಾರೆ.
ಭಾರತಕ್ಕೆ ಮಿಶ್ರಫಲ: ಭಾರತ ಗುರುವಾರದ ಸ್ಪರ್ಧೆಯಲ್ಲಿ ಮಿಶ್ರಫಲ ಅನುಭವಿಸಿತು. ಪುರುಷರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ-ಮ್ಯಾಟೆÌ ಮಿಡ್ಲ್ ಕೂಪ್ ಸೇರಿಕೊಂಡು ಫ್ಯಾಬ್ರಿಕ್ ಮಾರ್ಟಿನ್ (ಫ್ರಾನ್ಸ್)-ಆ್ಯಂಡ್ರೆ ಗೊಲುಬೇವ್ (ಕಜಾಕ್‌ಸ್ಥಾನ್) ವಿರುದ್ಧ 6-3, 6-4 ಗೆಲುವು ಸಾಧಿಸಿದರು. ಆದರೆ ರಾಮ್‌ಕುಮಾರ್ ರಾಮನಾಥನ್-ಹಂಟರ್ ರೀಸ್ 6ನೇ ಶ್ರೇಯಾಂಕದ ವೆಸ್ಲಿ ಕೂಹೊÉàಫ್-ನೀಲ್ ಸ್ಕಪ್‌ಸ್ಕಿ ವಿರುದ್ಧ ಸೋಲುಂಡು ಹೊರಬಿದ್ದರು. ಡಚ್-ಬ್ರಿಟಿಷ್ ಜೋಡಿ 6-3, 6-2 ಅಂತರದ ಮೇಲುಗೈ ಸಾಧಿಸಿತು.
ಸಾನಿಯಾ ಜೋಡಿಗೆ ಜಯ: ವನಿತಾ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ-ಲೂಸಿ ರಡೇಕಾ ಇಟಲಿಯ ಜಾಸ್ಮಿನ್ ಪೌಲಿನಿ-ಮಾರ್ಟಿನಾ ಟ್ರೆವಿಸಾನ್ ವಿರುದ್ಧ 4-6, 6-2, 6-1 ಅಂತರದ ಗೆಲುವು ಸಾಧಿಸಿ ದ್ವಿತೀಯ ಸುತ್ತು ಪ್ರವೇಶಿಸಿದರು.