Advertisement
ಬುಧವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಪುರುಷರ ಸಿಂಗಲ್ಸ್‌ನ ವಿಶ್ವ ನಂ.1 ಆಟಗಾರ ಜೊಕೊವಿಕ್, ಪ್ಯಾಬ್ಲೊ ಕರೆನೊ ಬುಸ್ಟರಿಂದ ಪೈಪೋಟಿ ಎದುರಿಸಿದರು. ಆದರೆ ಗೆಲುವನ್ನು ಬಿಟ್ಟುಕೊಡಲಿಲ್ಲ. ಮೊದಲ ಸೆಟ್ ಅನ್ನು ಜೊಕೊ ಕಳೆದುಕೊಂಡರು. ಮುಂದಿನ ಮೂರು ಸೆಟ್‌ಗಳನ್ನು ಸತತವಾಗಿ ಗೆದ್ದ ಜೊಕೊ ಯುಎಸ್ ಓಪನ್ ನೋವನ್ನು ಮರೆತರು. ಪ್ಯಾಬ್ಲೊ ವಿರುದ್ಧ ಜೊಕೊ ಗೆಲುವಿನ ಅಂತರ 4 -6, 6-2, 6-3, 6-4.
ಪುರುಷರ ಸಿಂಗಲ್ಸ್‌ನ ಇನ್ನೊಂದು ಎಂಟರ ಘಟ್ಟದ ಪಂದ್ಯದಲ್ಲಿ ಸ್ಟೆಫನಸ್ ಸಿಸಿಪಸ್ ಅವರು 7-5, 6-2, 6-3ರಿಂದ ಆಂಡ್ರೆ ರಬ್ಲೆವ್‌ರನ್ನು ಸೋಲಿಸಿ, ಕೂಟದಿಂದ ಹೊರಗಟ್ಟಿದರು. ಸಿಸಿಪಸ್ ಉಪಾಂತ್ಯದಲ್ಲಿ ನೊವಾಕ್ ಜೊಕೊವಿಕ್‌ರಂತಹ ಪ್ರಬಲ ಸ್ಪರ್ಧಿಯನ್ನು ಎದುರಿಸಬೇಕಾಗಿದೆ. ಇದು ಅವರಿಗೆ ಒಂದು ಅವಕಾಶವೂ ಹೌದು. ಇಲ್ಲಿ ಯಶಸ್ವಿಯಾಗಿ, ಅಂತಿಮಹಂತಕ್ಕೇರಿದರೆ ಭವಿಷ್ಯದ ತಾರೆಯಾಗಿ ಹೊರಹೊಮ್ಮಲೂಬಹುದು.