Advertisement

ಫ್ರೆಂಚ್‌ ಓಪನ್‌-2020; ಮುಗುರುಜಾ 3 ಗಂಟೆ ಹೋರಾಟ

11:08 PM Sep 29, 2020 | mahesh |

ಪ್ಯಾರಿಸ್‌: ಸ್ಪೇನಿನ ಮಾಜಿ ಚಾಂಪಿಯನ್‌ ಗಾರ್ಬಿನ್‌ ಮುಗುರುಜಾ 3 ಗಂಟೆಗಳ ಕಾಲ ಹೋರಾಟ ನಡೆಸಿ ಫ್ರೆಂಚ್‌ ಓಪನ್‌ ಗ್ರ್ಯಾಸ್ಲಾಮ್‌ ಮೊದಲ ಸುತ್ತಿನ ಆಘಾತದಿಂದ ಪಾರಾಗಿದ್ದಾರೆ. ವನಿತಾ ಸಿಂಗಲ್ಸ್‌ನಲ್ಲಿ ಸ್ಲೊವೇನಿಯಾದ ಟಮರಾ ಜಿದಾನ್ಸೆಕ್‌ ವಿರುದ್ಧದ ಪಂದ್ಯವನ್ನು ಅವರು 7-5, 4-6, 8-6 ಅಂತರದಿಂದ ಗೆದ್ದು ನಿಟ್ಟುಸಿರೆಳೆದರು. 2016ರಲ್ಲಿ ಇಲ್ಲಿ ಪ್ರಶಸ್ತಿ ಜಯಿಸಿದ್ದ ಮಾಜಿ ನಂ.1 ಆಟಗಾರ್ತಿ ಮುಗುರುಜಾ ಇನ್ನು ಜೆಕ್‌ ಆಟಗಾರ್ತಿ ಕ್ರಿಸ್ಟಿನಾ ಪ್ಲಿಸ್ಕೋವಾ ವಿರುದ್ಧ ಆಡಲಿದ್ದಾರೆ. ಅವರು ಸ್ಲೊವಾಕಿಯಾದ ವಿಕ್ಟೋರಿಯಾ ಕುಜೊವಾ ವಿರುದ್ಧ 6-1, 6-2ರಿಂದ ಗೆದ್ದು ಬಂದರು.

Advertisement

ಸೆರೆನಾ ಗೆಲುವು
ಕೂಟದ ನೆಚ್ಚಿನ ಆಟಗಾರ್ತಿಯರಲ್ಲಿ ಒಬ್ಬರಾಗಿರುವ ಸೆರೆನಾ ವಿಲಿಯಮ್ಸ್‌ ಮೊದಲ ಸುತ್ತಿನಲ್ಲಿ ಅಮೆರಿಕದವರೇ ಆದ ಕ್ರಿಸ್ಟಿ ಆ್ಯನ್‌ ವಿರುದ್ಧ 7-6 (2), 6-0 ಅಂತರದ ಜಯ ಸಾಧಿಸಿದರು. ಇವರ ಮುಂದಿನ ಎದುರಾಳಿ ಬಲ್ಗೇರಿಯಾದ ಸ್ವೆತಾನಾ ಪಿರೊಂಕೋವಾ. ಅವರು ಜರ್ಮನಿಯ ಆ್ಯಂಡ್ರಿಯಾ ಪೆಟ್ಕೊವಿಕ್‌ ವಿರುದ್ಧ 6-3, 6-3 ಅಂತರದ ಮೇಲುಗೈ ಸಾಧಿಸಿದರು.

ನಡಾಲ್‌ ಗೆಲುವು
“ಕ್ಲೇ ಕೋರ್ಟ್‌ ಮಾಸ್ಟರ್‌’ ರಫೆಲ್‌ ನಡಾಲ್‌ ಕೂಡ ಗೆಲುವಿನ ಓಟ ಆರಂಭಿಸಿದ್ದಾರೆ. ಅವರು ಮೊದಲ ಸುತ್ತಿನಲ್ಲಿ ಬೆಲರೂಸ್‌ನ ಈಗರ್‌ ಗೆರಸಿಮೋವ್‌ ವಿರುದ್ಧ 6-4, 6-4, 6-2 ನೇರ ಸೆಟ್‌ ಜಯ ಸಾಧಿಸಿದರು. ದ್ವಿತೀಯ ಸುತ್ತಿನಲ್ಲಿ ಅಮೆರಿಕದ ಮೆಕೆಂಜಿ ಮೆಕ್‌ಡೊನಾಲ್ಡ್‌ ವಿರುದ್ಧ ಆಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next