Advertisement

ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌: ಸೈನಾ ನೆಹ್ವಾಲ್‌ ಪರಾಭವ

12:09 AM Oct 26, 2019 | Team Udayavani |

ಪ್ಯಾರಿಸ್‌: ಭಾರೀ ಹೋರಾಟ ನಡೆಸಿದ ಸೈನಾ ನೆಹ್ವಾಲ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು 700,000 ಡಾಲರ್‌ ಬಹುಮಾನದ “ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿ’ಯಿಂದ ಹೊರಬಿದ್ದಿದ್ದಾರೆ. ಭಾರತದ ಮತ್ತೋರ್ವ ಆಟಗಾರ್ತಿ ಪಿ.ವಿ. ಸಿಂಧು ಶುಕ್ರವಾರ ತಡರಾತ್ರಿ ಮತ್ತೂಂದು ಕ್ವಾರ್ಟರ್‌ ಫೈನಲ್‌ನಲ್ಲಿ ಅದೃಷ್ಟಪರೀಕ್ಷೆಗೆ ಇಳಿಯಲಿದ್ದಾರೆ.

Advertisement

ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಕೊರಿಯಾದ ಆ್ಯನ್‌ ಸೆ ಯಂಗ್‌ ವಿರುದ್ಧ ಸೈನಾ 20-22, 21-23 ಅಂತರದಿಂದ ಸೋಲು ಕಾಣಬೇಕಾಯಿತು. ಈ ರೋಚಕ ಹಣಾಹಣಿ 49 ನಿಮಿಷಗಳ ತನಕ ಸಾಗಿತು.ಈ ವರ್ಷದ ಬ್ಯಾಡ್ಮಿಂಟನ್‌ ಏಶ್ಯ ಚಾಂಪಿಯನ್‌ಶಿಪ್‌ ಬಳಿಕ ಸೈನಾ ಕಂಡ ಮೊದಲ ಕ್ವಾರ್ಟರ್‌ ಫೈನಲ್‌ ಇದಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next