Advertisement

ಹಾಲೆಪ್‌-ಸ್ಟೀಫ‌ನ್ಸ್‌: ಪ್ಯಾರಿಸ್‌ ರಾಣಿ ಯಾರು?

06:00 AM Jun 09, 2018 | |

ಪ್ಯಾರಿಸ್‌: ಫ್ರೆಂಚ್‌ ಓಪನ್‌ ವನಿತಾ ಸಿಂಗಲ್ಸ್‌ ಕಿರೀಟಕ್ಕಾಗಿ ಶನಿವಾರ ಸಂಜೆ ವಿಶ್ವದ ನಂಬರ್‌ ವನ್‌ ಆಟಗಾರ್ತಿ, ರೊಮೇನಿಯಾದ ಸಿಮೋನಾ ಹಾಲೆಪ್‌ ಮತ್ತು ಅಮೆರಿಕದ ಸ್ಲೋನ್‌ ಸ್ಟೀಫ‌ನ್ಸ್‌ ಸೆಣಸಾಡಲಿದ್ದಾರೆ. ಯಾರೇ ಗೆದ್ದರೂ ಪ್ಯಾರಿಸ್‌ಗೆ ನೂತನ “ರಾಣಿ’ಯೊಬ್ಬಳು ಸಿಗಲಿದ್ದಾಳೆ.

Advertisement

ಗುರುವಾರದ ಸೆಮಿಫೈನಲ್‌ನಲ್ಲಿ ಸಿಮೋನಾ ಹಾಲೆಪ್‌ ಮತ್ತು ಸ್ಲೋನ್‌ ಸ್ಟೀಫ‌ನ್ಸ್‌ ನೇರ ಸೆಟ್‌ಗಳ ಜಯದೊಂದಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿ ದರು. ಹಾಲೆಪ್‌ 6-1, 6-4ರಿಂದ ಗಾರ್ಬಿನ್‌ ಮುಗುರುಜಾ ಅವರನ್ನು ಮಣಿಸಿದರೆ, ಸ್ಟೀಫ‌ನ್ಸ್‌ 6-4, 6-4ರಿಂದ ಗೆಳತಿಯೂ ಆಗಿರುವ ತನ್ನದೇ ದೇಶದ ಮ್ಯಾಡಿಸನ್‌ ಕೀಸ್‌ಗೆ ಸೋಲುಣಿಸಿದರು.

ಇದು 2002ರ ಬಳಿಕ ನಡೆದ ಮೊದಲ “ಆಲ್‌ ಅಮೆರಿಕನ್‌’ ಫ್ರೆಂಚ್‌ ಓಪನ್‌ ಸೆಮಿಫೈನಲ್‌ ಆಗಿತ್ತು. ಹಾಗೆಯೇ ಕಳೆದ ವರ್ಷದ ಯುಎಸ್‌ ಓಪನ್‌ ಫೈನಲ್‌ನ ಪುನರಾವರ್ತನೆಯೂ ಆಗಿತ್ತು. ಅಂದು ಕೀಸ್‌ ಅವರನ್ನು ಸೋಲಿಸುವ ಮೂಲಕವೇ ಸ್ಟೀಫ‌ನ್ಸ್‌ ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದರು.  ಸ್ಲೋನ್‌ ಸ್ಟೀಫ‌ನ್ಸ್‌ ಈವರೆಗೆ ಫ್ರೆಂಚ್‌ ಓಪನ್‌ನಲ್ಲಿ 4ನೇ ಸುತ್ತು ದಾಟಿದವರಲ್ಲ. ಇದೀಗ ಮೊದಲ ಸಲ ಪ್ಯಾರಿಸ್‌ನಲ್ಲಿ ಪ್ರಶಸ್ತಿ ಸಮರಕ್ಕೆ ಸಜ್ಜಾಗಿದ್ದಾರೆ.

3ನೇ ಫ್ರೆಂಚ್‌ ಫೈನಲ್‌
ಸಿಮೋನಾ ಹಾಲೆಪ್‌ ಪಾಲಿಗೆ ಇದು 4ನೇ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಆದರೆ, ಫ್ರೆಂಚ್‌ ಓಪನ್‌ನಲ್ಲಿ 3ನೇ ಫೈನಲ್‌. ಹಿಂದಿನೆರಡೂ ಸಲ ಪ್ಯಾರಿಸ್‌ ನಲ್ಲಿ ರೊಮೇನಿಯನ್‌ ಆಟಗಾರ್ತಿಗೆ ಸೋಲೇ ಸಂಗಾಯಾಗಿತ್ತು. ಈ ವರ್ಷದ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ನಲ್ಲೂ ಎಡ ವಿದ್ದರು.

ನಡಾಲ್‌-ಥೀಮ್‌ ಫೈನಲ್‌ ಮುಖಾಮುಖಿ


“ಕ್ಲೇ ಸ್ಪೆಷಲಿಸ್ಟ್‌’ಗಳೆಂದೇ ಗುರುತಿಸಲ್ಪಡುವ ಹಾಲಿ ಚಾಂಪಿಯನ್‌ ರಫೆಲ್‌ ನಡಾಲ್‌ ಮತ್ತು ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಫ್ರೆಂಚ್‌ ಓಪನ್‌ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ಶುಕ್ರವಾರದ ಮೊದಲ ಸೆಮಿಫೈನಲ್‌ನಲ್ಲಿ ಥೀಮ್‌ ಅಚ್ಚರಿಯ ಪ್ರವೇಶ ಪಡೆದ ಇಟೆಲಿಯ ಮಾರ್ಕೊ ಸೆಶಿನಾಟೊ ವಿರುದ್ಧ 7-5, 7-6 (12-10), 6-1 ಅಂತರದ ಜಯ ಸಾಧಿಸಿದರು. ಇನ್ನೊಂದು ಪಂದ್ಯದಲ್ಲಿ ರಫೆಲ್‌ ನಡಾಲ್‌ ಆರ್ಜೆಂಟೀನಾದ ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ಅವರನ್ನು 6-4, 6-1, 6-2 ಅಂತರದಿಂದ ಮಣಿಸಿದರು. ಇವರಿಬ್ಬರ ಪ್ರಶಸ್ತಿ ಸಮರ ರವಿವಾರ ಸಂಜೆ ನಡೆಯಲಿದೆ.
ಡೊಮಿನಿಕ್‌ ಥೀಮ್‌ ಪಾಲಿಗೆ ಇದು ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಎಂಬುದು ವಿಶೇಷ. ಇದಕ್ಕೂ ಮುನ್ನ 2016 ಹಾಗೂ 2017ರಲ್ಲಿ ಫ್ರೆಂಚ್‌ ಓಪನ್‌ ಸೆಮಿಫೈನಲ್‌ ಪ್ರವೇಶಿಸಿದರೂ ಇಲ್ಲಿ ಕ್ರಮವಾಗಿ ಜೊಕೋವಿಕ್‌ ಹಾಗೂ ನಡಾಲ್‌ ವಿರುದ್ಧ ಸೋತು ಫೈನಲ್‌ ಅವಕಾಶದಿಂದ ವಂಚಿತರಾಗಿದ್ದರು. ಉಳಿದಂತೆ ಬೇರೆ ಯಾವುದೇ ಗ್ರ್ಯಾನ್‌ಸ್ಲಾಮ್‌ಗಳಲ್ಲೂ ಥೀಮ್‌ 4ನೇ ಸುತ್ತಿನ ಗಡಿ ದಾಟಿದವರಲ್ಲ. 

Advertisement

ರಫೆಲ್‌ ನಡಾಲ್‌ ನೆಚ್ಚಿನ ಆಟಗಾರನಾಗಿದ್ದು, ಹಾಲಿ ಚಾಂಪಿಯನ್‌ ಕೂಡ ಆಗಿದ್ದಾರೆ. ಈಗಾಗಲೇ 10 ಸಲ ಫ್ರೆಂಚ್‌ ಓಪನ್‌ ಪ್ರಶಸ್ತಿಯನ್ನೆತ್ತಿ ಮೆರೆದಿದ್ದಾರೆ. ಕಳೆದ ವರ್ಷದ ಫೈನಲ್‌ನಲ್ಲಿ ಅವರು ಸ್ಟಾನಿಸ್ಲಾಸ್‌ ವಾವ್ರಿಂಕ ವಿರುದ್ಧ ಗೆದ್ದು ಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next