Advertisement

ಸಿಮೋನಾ ಹಾಲೆಪ್‌ ಮರಳಿ ಅಂಕಣಕ್ಕೆ

11:38 PM Mar 19, 2024 | Team Udayavani |

ಮಿಯಾಮಿ (ಫ್ಲೋರಿಡಾ): ಡೋಪಿಂಗ್‌ ಪ್ರಕರಣದಲ್ಲಿ ನಿಷೇಧಕ್ಕೊಳಗಾಗಿದ್ದ ರೊಮೇನಿಯಾದ ಸಿಮೋನಾ ಹಾಲೆಪ್‌ ಈ ವಾರ ನಿಷೇಧ ಮುಕ್ತರಾಗಿ ಮರಳಿ ಟೆನಿಸ್‌ ಅಂಕಣಕ್ಕೆ ಇಳಿಯಲಿದ್ದಾರೆ. ಈ ಪ್ರಕರಣದ ವಿರುದ್ಧ ಮೇಲ್ಮನವಿ ಸಲ್ಲಿಸಿದ ಹಾಲೆಪ್‌ಗೆ ಗೆಲುವು ಒಲಿದಿತ್ತು.

Advertisement

ಸಿಮೋನಾ ಹಾಲೆಪ್‌ “ಮಿಯಾಮಿ ಓಪನ್‌’ ಟೆನಿಸ್‌ ಪಂದ್ಯಾವಳಿಗೆ ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ಪೌಲಾ ಬಡೋಸಾ ಅವರನ್ನು ಎದುರಿಸಲಿದ್ದಾರೆ. ಇವರೆದುರು ಈವರೆಗೆ ಆಡಿದ ಎರಡೂ ಪಂದ್ಯಗಳಲ್ಲಿ ಹಾಲೆಪ್‌ ಜಯ ಸಾಧಿಸಿದ್ದಾರೆ. ಇದು 2022ರ ಯುಎಸ್‌ ಓಪನ್‌ ಬಳಿಕ ಹಾಲೆಪ್‌ ಆಡುತ್ತಿರುವ ಮೊದಲ ಪಂದ್ಯ. ಅಲ್ಲಿ ಇವರು ಉಕ್ರೇನ್‌ನ ಅರ್ಹತಾ ಆಟಗಾರ್ತಿ ದರಿಯಾ ಸ್ನಿಗರ್‌ ವಿರುದ್ಧ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದರು.

ನಿಷೇಧಿತ ಪದಾರ್ಥ ಸೇವನೆ ಪ್ರಕರಣದಲ್ಲಿ 2022ರ ಅಕ್ಟೋಬರ್‌ನಲ್ಲಿ ಸಿಮೋನಾ ಹಾಲೆಪ್‌ ಅವರಿಗೆ 4 ವರ್ಷಗಳ ನಿಷೇಧ ವಿಧಿಸಲಾಗಿತ್ತು. ಆದರೆ “ಗ್ಲೋಬಲ್‌ ಸ್ಪೋರ್ಟ್ಸ್ ಕೋರ್ಟ್‌’ನಲ್ಲಿ ಹೋರಾಡಿದ ಹಾಲೆಪ್‌ಗೆ ರಿಯಾಯಿತಿ ಲಭಿಸಿದ್ದು, ಅದು ಶಿಕ್ಷೆಯ ಪ್ರಮಾಣವನ್ನು ಇಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next