ಕಾಠ್ಮಂಡು: 1970ರ ದಶಕದಲ್ಲಿ ಹಲವಾರು ಯುವ ವಿದೇಶಿಗರನ್ನು ಹತ್ಯೆಗೈದಿದ್ದ ಅಪರಾಧಿ, ಕುಖ್ಯಾತ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ ಶುಕ್ರವಾರ(ಡಿಸೆಂಬರ್ 23) 20 ವರ್ಷಗಳ ಬಳಿಕ ನೇಪಾಳ ಜೈಲಿನಿಂದ ಬಿಡುಗಡೆಗೊಂಡಿದ್ದಾನೆ.
ಇದನ್ನೂ ಓದಿ:ಇಂಜೆಕ್ಷನ್ ನೀಡಿದ ಮರುದಿನವೇ ಲಕ್ಷಾಂತರ ರೂ. ಮೌಲ್ಯದ ಎತ್ತುಗಳು ಸಾವು
ಚಾರ್ಲ್ಸ್ ಶೋಭರಾಜ್ (79ವರ್ಷ)ನ ವಯಸ್ಸನ್ನು ಪರಿಗಣಿಸಿ ನೇಪಾಳ ನ್ಯಾಯಾಲಯ ಬಿಡುಗಡೆಯ ತೀರ್ಮಾನ ಕೈಗೊಂಡಿತ್ತು. 15 ದಿನಗಳಲ್ಲಿ ಶೋಭರಾಜ್ ನನ್ನು ನೇಪಾಳದಿಂದ ಫ್ರಾನ್ಸ್ ಗೆ ಗಡಿಪಾರು ಮಾಡಬೇಕು ಎಂದು ನೇಪಾಳ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.
ಏತನ್ಮಧ್ಯೆ ಶುಕ್ರವಾರ ಸಂಜೆ ವಿಮಾನದ ಟಿಕೆಟ್ ಅನ್ನು ಕಾಯ್ದಿರಿಸಲಾಗಿದೆ ಎಂದು ಶೋಭರಾಜ್ ವಕೀಲ ಕೋರ್ಟ್ ಗೆ ಮಾಹಿತಿ ನೀಡಿದ್ದರು. ಆದಷ್ಟು ಶೀಘ್ರ ಶೋಭರಾಜ್ ನನ್ನು ಫ್ರಾನ್ಸ್ ಗೆ ಗಡಿಪಾರು ಮಾಡುವುದು ನೇಪಾಳ ಸರ್ಕಾರದ ಬಯಕೆಯಾಗಿದೆ.
ಶುಕ್ರವಾರ ಸಂಜೆ 6ಗಂಟೆಗೆ ಕತಾರ್ ಏರ್ ವೇಸ್ ವಿಮಾನದಲ್ಲಿ ಚಾರ್ಲ್ಸ್ ಶೋಭರಾಜ್ ಫ್ರಾನ್ಸ್ ಗೆ ತೆರಳಲಿದ್ದಾನೆ ಎಂದು ಗೋಪಾಲ್ ಶಿವಾಕೋಟಿ ಚಿಂತನ್ ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ಶೋಭರಾಜ್ ಪೋಷಕರು ಭಾರತ ಮತ್ತು ವಿಯೆಟ್ನಾಂಗೆ ಸೇರಿದವರು. 2003ರಂದು ಚಾರ್ಲ್ಸ್ ನೇಪಾಳದ ಕ್ಯಾಸಿನೋ ಎದುರು ಪತ್ತೆಯಾಗಿದ್ದು, ಎರಡು ಪ್ರಕರಣಗಳಲ್ಲಿ ವಾಂಟೆಡ್ ಆಗಿದ್ದ ಈತನನ್ನು ಬಂಧಿಸಲಾಗಿತ್ತು.