Advertisement

ಫ್ರಾನ್ಸ್‌ ಮಾಜಿ ಅಧ್ಯಕ್ಷ ನಿಕೋಲಸ್‌ಗೆ 1 ವರ್ಷ ಜೈಲು ಶಿಕ್ಷೆ

03:14 AM Mar 02, 2021 | Team Udayavani |

ಪ್ಯಾರಿಸ್‌: ಭ್ರಷ್ಟಾಚಾರ ಹಾಗೂ ವರ್ಚಸ್ಸಿನ ದುರುಪಯೋಗ ಪ್ರಕರಣವೊಂದರಲ್ಲಿ ಸಿಲುಕಿದ್ದ ಫ್ರಾನ್‌ ನ ಮಾಜಿ ಅಧ್ಯಕ್ಷ ನಿಕೋಲಸ್‌ ಸರ್ಕೋಝಿ ಅವರಿಗೆ ಪ್ಯಾರಿಸ್‌ನ ಸ್ಥಳೀಯ ನ್ಯಾಯಾಲಯ 1 ವರ್ಷದ ಜೈಲು ಹಾಗೂ 2 ವರ್ಷಗಳವರೆಗೆ ರಾಜಕೀಯದಿಂದ ಅಮಾನತು ಶಿಕ್ಷೆ ವಿಧಿಸಿದೆ.

Advertisement

2014 ರಲ್ಲಿ ತಮ್ಮ ವಿರುದ್ಧದ ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ, ವಿಚಾರಣೆ ನಡೆಯುತ್ತಿದ್ದ ನ್ಯಾಯಾಲಯದ ನ್ಯಾಯಾಧೀಶ ರಿಂದ ಕೆಲವು ಮಹತ್ವದ ದಾಖಲೆಗಳನ್ನು ಪಡೆಯಲು ತಮ್ಮ ವರ್ಚಸ್ಸು ಬಳಸಿಕೊಂಡಿದ್ದರೆಂಬ ಆರೋಪ ನಿಕೋಲಸ್‌ ಮೇಲಿದ್ದು, ಅದೀಗ ಸಾಬೀತಾಗಿದೆ. ಆ ಹಿನ್ನೆಲೆಯಲ್ಲಿ ಅವರಿಗೆ ಶಿಕ್ಷೆ ಜಾರಿಯಾಗಿದೆ.

ತಮ್ಮ ವಿರುದ್ಧದ 1 ವರ್ಷದ ಜೈಲು ಶಿಕ್ಷೆಯನ್ನು ಗೃಹ ಬಂಧನದ ರೂಪದಲ್ಲೇ ನೀಡುವಂತೆ ನಿಕೋಲಸ್‌ ನ್ಯಾಯಾಲಯವನ್ನು ಕೇಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next