Advertisement

ಸಾಕು ಬೆಕ್ಕುಅಂತ ಹುಲಿ ಮರಿ ತಂದ ದಂಪತಿ!

10:26 AM Oct 12, 2020 | Nagendra Trasi |

ಪ್ಯಾರಿಸ್‌: 5.17 ಲಕ್ಷ ರೂ. ಕೊಟ್ಟು “ಸವನ್ನಾ ಬೆಕ್ಕು’ ಖರೀದಿಸಿ ತಂದಿದ್ದ ದಂಪತಿಗೆ ಬಳಿಕ ಅದು ಬೆಕ್ಕಲ್ಲ, ಹುಲಿಮರಿ ಎಂದು ಗೊತ್ತಾಗಿ ಆಘಾತಕ್ಕೀಡಾದ ಘಟನೆ
ಪ್ಯಾರಿಸ್‌ನಲ್ಲಿ ನಡೆದಿದೆ. ಹೌದು! ಲೆ ಹಾರ್ವೆ ಸಿಟಿಯ ದಂಪತಿ ಆನ್‌ಲೈನ್‌ನಲ್ಲಿ ಆಕರ್ಷಕ ಜಾಹೀರಾತುಗಳನ್ನು ನೋಡಿ, ಸಾಕುಬೆಕ್ಕು ಖರೀದಿ ಸಲು, ಅಂಗಡಿಗೆ ತೆರಳಿದ್ದರು.

Advertisement

ಭಾರೀ ಚೌಕಾಸಿ ಮಾಡಿ 5.17 ಲಕ್ಷ ರೂ.ಗೆ ಸವನ್ನಾ ಬೆಕ್ಕು ಖರೀದಿಸಿದ್ದರು. ಮನೆಗೆ ತಂದು ಮುದ್ದಿಸಿದ್ದು, ಹಾಲು ಕುಡಿಸಿದ್ದು, ಸೆಲ್ಫಿ ತೆಗೆದುಕೊಂಡಿದ್ದು, ಜತೆಯಲ್ಲಿ ಮಲಗಿಸಿಕೊಂಡಿದ್ದೆಲ್ಲವೂ ಆಯಿತು.

ಆದರೆ, ವಾರದ ಬಳಿಕ ಆ ಬೆಕ್ಕಿನ ನಡತೆಯೇ ವಿಚಿತ್ರವಾಗಿತ್ತು. “ಮಿಯಾಂವ್‌’ ಎನ್ನುವ ಬದಲಿಗೆ, “ಗುರ್ರ… ಗುರ್ರ’ ಎನ್ನತೊಡಗಿತು. ಕಣ್ಣಲ್ಲಿ ಬೇಟೆಯ
ಹೊಂಚಿತ್ತು. ಓಹ್‌! ಇದು ಬೆಕ್ಕಲ್ಲ, ಹುಲಿಮರಿ ಅಂತ ಗೊತ್ತಾದ ಕೂಡಲೇ ಪೊಲೀಸರಿಗೆ ಫೋನ್‌ ಮಾಡಿ, ಅಂಗಡಿ ಮಾಲೀಕನ ವಿರುದ್ಧ ದೂರು ನೀಡಿದ್ದಾರೆ.
ಅದು ಸುಮಾತ್ರಾದ ಹುಲಿ ಮರಿ. ಇಂಡೋನೇಷ್ಯಾ ದಿಂದ ಫ್ರಾನ್ಸ್‌ಗೆ ಅಕ್ರಮ ಸಾಗಾಟ ಕಂಡಿದೆ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.

12ರಿಂದ ಅಮೆರಿಕ ಸಚಿವಸ್ಟೀಫ‌ನ್‌ ಭಾರತ ಪ್ರವಾಸ
ಅಮೆರಿಕ ವಿದೇಶಾಂಗ ಖಾತೆ ಸಹಾಯಕ ಸಚಿವ ಸ್ಟೀಫ‌ನ್‌ ಬೀಗನ್‌ ಅ.12- 16ರ ವರೆಗೆ ಭಾರತ ಮತ್ತು ಬಾಂಗ್ಲಾ ದೇಶ ಪ್ರವಾಸಕೈಗೊಳ್ಳಲಿದ್ದಾರೆ.12-14ರ
ವರೆಗೆ ನವದೆಹಲಿಗೆ ಭೇಟಿ ನೀಡಲಿರುವ ಅವರು,ಕೇಂದ್ರ ಸರ್ಕಾರದ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಲಿದ್ದಾರೆ.

ಭಾರತ ಮತ್ತು ಅಮೆರಿಕ ಫೋರಂ ಅನ್ನು ಉದ್ದೇಶಿಸಿ ಬೀಗನ್‌ ಮಾತನಾಡಲಿದ್ದಾರೆ. ಅಮೆರಿಕ ವಿದೇಶಾಂಗ ಸಚಿವ ಮೈಕ್‌  ಪೊಂಪೊ ಮತ್ತು ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅ.6ರಂದು ಭೇಟಿಯಾದ ನಂತರದ ಹಂತದ ಭೇಟಿ ಇದಾಗಿದೆ. ಬಾಂಗ್ಲಾದೇಶಕ್ಕೂ ಭೇಟಿ ನೀಡಲಿರುವ
ಅವರು, ಢಾಕಾದಲ್ಲಿ ಅಮೆರಿಕ-ಬಾಂಗ್ಲಾದೇಶ ನಡುವಿನ ಸಹಭಾಗಿತ್ವದ ಬಗ್ಗೆ ಚರ್ಚೆ ನಡೆಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next