Advertisement

ವಿಶ್ವದ ಮೊದಲ ಕೃತಕ ಹೃದಯ ಕಸಿ..!

12:10 PM Jul 20, 2021 | Team Udayavani |

ಫ್ರೆಂಚ್ :  ಫ್ರೆಂಚ್ ಪ್ರಾಸ್ತೆಟಿಕ್ಸ್  ಉತ್ಪಾದಕ  ಕಾರ್ಮಾಟ್  ತನ್ನ ಮೊದಲ ಬಾರಿಗೆ ಕೃತಕ ಹೃದಯವೊಂದನ್ನು ಮಾರಾಟ ಮಾಡಿದೆ.

Advertisement

ಇಟಾಲಿಯನ್ ಮೂಲದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರಿಗೆ ಕಸಿ ಮಾಡುವ ಮುಲಕ ಅಳವಡಿಸುವ ಉದ್ದೇಶದಿಂದ ಈ ಕೃತಕ ಹೃದಯ ಮಾರಾಟವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಇನ್ನು, ಕೃತಕ ಹೃದಯ ಮಾನವನಿಗೆ ಕಸಿ ಮಾಡುವುದಕ್ಕೆ ಯುರೋಪಿಯನ್ ಸಿಇ ಮಾನ್ಯತೆಯನ್ನು 2020 ರಲ್ಲಿ ಸಂಸ್ಥೆ ಪಡೆದುಕೊಂಡಿದೆ ಎಂದು ವರದಿ ಹೇಳಿದೆ.

ಇದನ್ನೂಓದಿ : ಮುಖ್ಯಮಂತ್ರಿಗಳ ಬಗ್ಗೆ ಪಕ್ಷದಲ್ಲಿ ಯಾವುದೇ ಅಪಸ್ವರವಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ

2008 ರಲ್ಲಿ ಸ್ಥಾಪನೆಯಾದ ಸಂಸ್ಥೆ ಕಾರ್ಮಾಟ್, ಇದೇ ಮೊದಲ ಬಾರಿಗೆ ಕೃತಕ ಹೃದಯವೊಂದನ್ನು ಮಾರಾಟ ಮಾಡಿದೆ ಎಂದು ಅಂತರಾಷ್ಟ್ರೀಯ ಸುದ್ದಿ ಸಂಸ್ತೆಯೊಂದು ವರದಿ ಮಾಡಿದೆ.

Advertisement

ಈ ಕೃತಕ ಹೃದಯ ಕಸಿ ಕಾರ್ಯವನ್ನು “ಇಟಲಿಯ ಕೃತಕ ಹೃದಯಗಳ ಕ್ಷೇತ್ರದಲ್ಲಿ ಅತ್ಯುತ್ತಮ ಅನುಭವ ಹೊಂದಿರುವ ಸಂಶೋಧನಾ ಕೇಂದ್ರಗಳಲ್ಲಿ ಒಂದಾದ ನೇಪಲ್ಸ್‌ ನ ಅಜೀಂಡಾ ಒಸ್ಪೆಡಲಿಯೆರಾ ಡಿ ಕೊಲ್ಲಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸಕ ಡಾ. ಸಿರೋ ಮೈಲ್ಲೊ ಅವರ ನೇತೃತ್ವದಲ್ಲಿ ಅಳವಡಿಸಲಾಗಿದೆ ಎಂದು ಕಾರ್ಮಾಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು, ಈ ಕೃತಕ ಹೃದಯ ಅಳವಡಿಸುವಿಕೆಯ ಕಸಿ ಮಾಡುವುದಕ್ಕೆ ಸುಮಾರು 150,000  ಯೂರೋ (177 ಮಿಲಿಯನ್ ಡಾಲರ್ ) ವೆಚ್ಚವಾಗಿದೆ ಎಂದು ಹೇಳಲಾಗಿದ್ದು, ದುಬಾರಿ ಶಸ್ತ್ರಚಿಕಿತ್ಸೆಯೆಂದು ವರದಿಯಾಗಿದೆ.

ಇದನ್ನೂಓದಿ :  ನಾನೇ ಸಿಎಂ ಎಂದು ಯಾರು ಬೇಕಾದರೂ ಹೇಳಿಕೊಳ್ಳುವ ಸಂಸ್ಕ್ರತಿ ಬಿಜೆಪಿಯಲ್ಲಿಲ್ಲ: ರೇಣುಕಾಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next