Advertisement

ಏ.7ರಿಂದ ದೇಶಾದ್ಯಂತ ಸರಕು,ಸಾಗಣೆ ವಾಹನಗಳ ಮುಷ್ಕರ

06:30 AM Mar 25, 2018 | Team Udayavani |

ಬೆಂಗಳೂರು: ಸರಕು ಸಾಗಣೆ ವಾಹನಗಳಿಗೆ ಥರ್ಡ್‌ ಪಾರ್ಟಿ ವಿಮೆ ಪ್ರೀಮಿಯಂ ಮೊತ್ತವನ್ನು ಏಕಪಕ್ಷೀಯವಾಗಿ ಹೆಚ್ಚಿಸಿರುವುದನ್ನು ಖಂಡಿಸಿ ಅಖೀಲ ಭಾರತ ಸರಕು ಸಾಗಣೆ ಮಾಲೀಕರ ಸಂಘಗಳ ಒಕ್ಕೂಟ ಏ. 7ರಿಂದ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ. 

Advertisement

ಇದಕ್ಕೆ ಕರ್ನಾಟಕ ಸರಕು ಸಾಗಣೆ ವಾಹನಗಳ ಮಾಲೀಕರ ಸಂಘ ಕೂಡ ಬೆಂಬಲ ವ್ಯಕ್ತಪಡಿಸಿದ್ದು,7ರಂದು ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ಸರಕು ಸಾಗಣೆ ವಾಹನಗಳ ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ. ಚೆನ್ನಾರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇಶದಲ್ಲಿ ಸುಮಾರು 1 ಕೋಟಿ ಸರಕು ಸಾಗಣೆ ವಾಹನಗಳಿದ್ದು, ರಾಜ್ಯದಲ್ಲಿ ಸುಮಾರು ಆರು ಲಕ್ಷ ಈ ಮಾದರಿಯ ವಾಹನಗಳಿವೆ. ಮುಷ್ಕರದಿಂದ ಈ ಎಲ್ಲ ವಾಹನಗಳ ಸಂಚಾರ ಸ್ತಬ್ದಗೊಳ್ಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next