ಬೆಂಗಳೂರು: ಸಾಂಕ್ರಾಮಿಕ ರೋಗಗಳ ಅಲೆ ಸಾಮಾನ್ಯ. ಈಗತಾನೇ ಕೋವಿಡ್ ಎರಡನೇ ಅಲೆ ಇಳಿಮುಖವಾಗುತ್ತಿದೆ. ಮತ್ತೆಮೂರನೇ ಅಲೆ ಬರುವ ಮುನ್ಸೂಚನೆ ಇದೆ.
ಹೀಗಾಗಿ, ಇನ್ನೂಒಂದರಿಂದ ಒಂದೂವರೆ ವರ್ಷ ಜನರಿಗೆ ಮಾಸ್Rನಿಂದ ವಿಮುಕ್ತಿ ಇಲ್ಲ ಎಂದು ಐಸಿಎಂಆರ್‌ನಸಲಹೆಗಾರ ಹಾಗೂ ಕೋವಿಡ್-19 ತಾಂತ್ರಿಕಸಲಹಾ ಸಮಿತಿ ಸದಸ್ಯ ಡಾ.ವಿ.ರವಿ ಜನತೆಗೆಎಚ್ಚರಿಕೆ ನೀಡಿದರು.ಕರ್ನಾಟಕ ಪತ್ರಕರ್ತೆಯರ ಸಂಘದಿಂದಶನಿವಾರ ಹಮ್ಮಿಕೊಂಡಿದ್ದ ಕೋವಿಡ್ ಮೂರನೇಅಲೆ, ಲಸಿಕೆ ಹಾಗೂ ರಕ್ಷಣೆ ಕುರಿತ ವೆಬಿನಾರ್‌ನಲ್ಲಿಮಾತನಾಡಿದ ಅವರು, ಕೋವಿಡ್ ಎರಡನೇ ಡೋಸ್‌ಪಡೆದವರು ಮಾಸ್ಕ್ ಧರಿಸುವುದು ಬೇಡ ಎಂದು ಅಮೆರಿಕಾ ಹೇಳಿದೆ.
ನಮ್ಮ ದೇಶದಲ್ಲಿ ಯಾವಾಗ ಮಾಸ್ಕ್ ತೆಗೆಯೋದುಎಂದು ಹಲವರು ಕೇಳುತ್ತಿದ್ದಾರೆ. ನಾವು ಸುರಕ್ಷಿತವಾಗಿಇರಬೇಕಾದರೆ, ನಮ್ಮ ಜೀವ ಉಳಿಯಬೇಕಾದರೆ ಮಾಸ್ಕ್ಧರಿಸುವುದು ಅಗತ್ಯ. ಅಮೆರಿಕಾ ನೀಡಿರುವ ಹೇಳಿಕೆ ತಪ್ಪು.ಆ ತಪ್ಪನ್ನು ನಾವು ಮಾಡುವುದು ಬೇಡ. ಲಸಿಕೆಗಿಂತ ಉತ್ತಮಮಾಸ್ಕ್ ಧರಿಸುವುದು ಎಂದು ಸಲಹೆ ನೀಡಿದರು.
ಚಿಕ್ಕಮಕ್ಕಳಿಗೂ ಕೊರೊನಾ ಸೋಂಕು ಹರಡುತ್ತಿದೆ.ದೇಶದಲ್ಲಿರುವ ಸುಮಾರು 30 ಕೋಟಿ ಮಕ್ಕಳಲ್ಲಿಕೇವಲ ಶೇ.1 ರಷ್ಟು ಮಕ್ಕಳಿಗೆ ಸೋಂಕು ಬಂದರೆನಿಭಾಯಿಸಲು ಸೂಕ್ತ ವ್ಯವಸ್ಥೆ ಇಲ್ಲ. ಅವರಿಗೆ ಚಿಕಿತ್ಸೆನೀಡಲು ವೈದ್ಯಕೀಯ ಸೌಲಭ್ಯ ಕೊರತೆಉಂಟಾಗಬಹುದು. ಸೋಂಕು ದೃಢವಾದಮಕ್ಕಳಲ್ಲಿ ಆಕ್ಟಿವಿಟಿ ಕಡಿಮೆಯಾಗುತ್ತದೆ. ಕೆಲವರಲ್ಲಿಜ್ವರ ಕಾಣಿಸುತ್ತದೆ. ಸ್ವಲ್ಪ ದೊಡ್ಡ ಮಕ್ಕಳಿಗೆ ಹೊಟ್ಟೆನೋವು ಉಂಟಾಗಬಹದು. ತಕ್ಷಣ ಚಿಕಿತ್ಸೆ ಕೊಡಿಸಬೇಕುಎಂದರು.
ಸಾಂಕ್ರಾಮಿಕ ರೋಗಗಳ ಅಲೆ ಸಾಮಾನ್ಯ.ಅಮೆರಿಕಾದಲ್ಲಿ ಈಗಾಗಲೇ 4ನೇ ಅಲೆ ಪ್ರಾರಂಭವಾಗಿದೆ.ಯಾರಿಂದಲೂ ಅಲೆ ತಡೆಯಲು ಸಾಧ್ಯವಿಲ್ಲ. ಮುಂದೆಯಾವ ಸೋಂಕಿನ ತಳಿ ಬರುತ್ತದೆ ಗೊತ್ತಿಲ್ಲ. ನಮ್ಮ ಸಿ
ದ್ಧತೆನಾವು ಮಾಡಿಕೊಳ್ಳಬೇಕು ಎಂದು ಹೇಳಿದರು. ಸಂಘದಅಧ್ಯಕ್ಷೆ ಶಾಂತಲಾ ಧರ್ಮರಾಜ್ ಸಂವಾದ ನಡೆಸಿಕೊಟ್ಟರು.