Advertisement

ಕಾಂಗ್ರೆಸ್‌ ನಿಂದ ಭಾರತಕ್ಕೆ ಸ್ವಾತಂತ್ರ್ಯ

11:32 AM Dec 30, 2017 | Team Udayavani |

ವಾಡಿ: ಭಾರತ ಸ್ವಾತಂತ್ರ್ಯ ಚಳವಳಿಗೆ ಮುನ್ನುಡಿ ಬರೆದ ಕಾಂಗ್ರೆಸ್‌ ಪಕ್ಷ, ಸ್ವಾತಂತ್ರ್ಯ ನಂತರ ದೇಶದ ಪ್ರಗತಿಗೆ ಶ್ರಮಿಸಿದ ಜನಪರ ರಾಷ್ಟ್ರೀಯ ಪಕ್ಷವಾಗಿದೆ ಎಂದು ವಾಡಿ-ಶಹಾಬಾದ ನಗರ ಯೋಜನೆ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ ಚಂದ್ರಸೇನ ಮೇನಗಾರ ಹೇಳಿದರು.

Advertisement

ಪಟ್ಟಣದ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಭಾರತೀಯ ಕಾಂಗ್ರೆಸ್‌ ಪಕ್ಷದ 133ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

1885 ರಲ್ಲಿ ಭಾರತೀಯ ಕಾಂಗ್ರೆಸ್‌ ಸ್ಥಾಪನೆಯಾಗಿ ದೇಶದ ಆಡಳಿತ ಚುಕ್ಕಾಣಿ ಹಿಡಿಯುವ ಮೂಲಕ ಬಡವರ, ಶೋಷಿತರ, ಅಲ್ಪಸಂಖ್ಯಾತರ ಹಾಗೂ ದೀನ ದಲಿತರ ಏಳಿಗೆಗಾಗಿ ಯೋಜನೆಗಳನ್ನು ರೂಪಿಸಿ ದೇಶದ ಪ್ರಗತಿಗೆ ಶ್ರಮಿಸಿದೆ.

ಬ್ರಿಟೀಷರ ಆಡಳಿತದಲ್ಲಿ ಸಂಘಟನಾ ಸಾಮರ್ಥ್ಯದ ಮೂಲಕ ಜನಜಾಗೃತಿಗೆ ಮುಂದಾಗಿ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಯಿತು. ಅದರ ಪರಿಣಾಮವಾಗಿ ನಾವಿಂದು ಸ್ವಾತಂತ್ರ್ಯ ಪಡೆದು ಬದುಕಲು ಸಾಧ್ಯವಾಗಿದೆ ಎಂದು ಹೇಳಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೈಯ್ಯದ್‌ ಮಹೆಮೂದ್‌ ಸಾಹೇಬ ಮಾತನಾಡಿ, ಭಾರತದಲ್ಲಿ
ಪ್ರಜಾಪ್ರಭುತ್ವವ ಸಿದ್ಧಾಂತದಡಿ ಆಡಳಿತ ನೀಡುವ ಮೂಲಕ ಎಲ್ಲ ವರ್ಗದ ಜನರನ್ನು ಒಟ್ಟಾಗಿ ಕರೆದೊಯ್ಯುವ ಶಕ್ತಿ ಕಾಂಗ್ರೆಸ್‌ ಪಕ್ಷಕ್ಕಿದೆ. ಜನಪರ ಆಡಳಿತ ಮತ್ತು ತಳ ಸಮುದಾಯಗಳ ಪ್ರಗತಿ ಪಕ್ಷದ ಮೂಲ ಸಿದ್ಧಾಂತವಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ ಹಿರಿಯ ಮುಖಂಡರಾದ ಬಾಬುಮಿಯ್ನಾ ಹಾಗೂ ಟೋಪಣ್ಣ ಕೋಮಟೆ ಅವರು ಪಕ್ಷದ ಸಂಸ್ಥಾಪಕ ಅಧ್ಯಕ್ಷ
ಅಲ್ಲೇನ್‌ ಓಕ್ಟಾವಿನ್‌ ಹ್ಯೂಮ್‌ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿದರು. ಪುರಸಭೆ ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಯುವ ಕಾಂಗ್ರೆಸ್‌ ತಾಲೂಕು ಕಾರ್ಯದರ್ಶಿಗಳಾದ ಚಂದ್ರಶೇಖರ ಧನ್ನೇಕರ ಹಾಗೂ ಮಲ್ಲಿಕಾರ್ಜುನ ವಸ್ತಾರಿ, ಮುಖಂಡರಾದ ಶಂಕ್ರಯ್ಯಸ್ವಾಮಿ ಮದರಿ, ಗೋಪಾಲ ರಾಠೊಡ, ಸಾಲೋಮನ್‌ ರಾಜಣ್ಣ, ಸುನಿತಾ ಸಾಲೋಮನ್‌, ನಾಗೇಂದ್ರ ಜೈಗಂಗಾ, ತುಕಾರಾಮ ರಾಠೊಡ, ವಿಜಯಕುಮಾರ ಸಿಂಗೆ, ಬಸವರಾಜ ಕೇಶ್ವಾರ, ನಾಸೀರ ಹುಸೇನ, ಫತೇಖಾನ ಫತ್ರುಮಿಯ್ಯ, ಪ್ರದೀಪ ಸಿಂಗೆ, ಸುರೇಶ ಹೇರೂರ, ಶೇಖ ಮಹೆಬೂಬ, ಸಿದ್ದು ಪೂಜಾರಿ, ಯಶ್ವಂತ ಧನ್ನೇಕರ, ಮಹಮದ್‌ ಕರೀಮ, ಪ್ರೇಮ ಸಿರೂರಕರ, ದಾವೂದ್‌ ಪಟೇಲ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next