Advertisement

ಕಲಬುರಗಿಯಲ್ಲಿ ಉಚಿತ ವೈಫೈ ಸೇವೆ

09:54 AM Feb 15, 2018 | Team Udayavani |

ಕಲಬುರಗಿ: ಡಿಜಿಟಲ್‌ ಕರ್ನಾಟಕದತ್ತ ಹೆಜ್ಜೆಯಿಟ್ಟಿರುವ ರಾಜ್ಯ ಸರ್ಕಾರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಉಚಿತ ವೈಫೈ ಸೇವೆ ಒದಗಿಸುವ ಯೋಜನೆ ರೂಪಿಸಿದ್ದು, ಅದರಂತೆ ಬುಧವಾರ ಪಾಲಿಕೆ ಆವರಣದಲ್ಲಿ ಸ್ಥಾಪಿಸಲಾದ ವೈಫೈ ಸ್ಮಾರ್ಟ್‌ ಪೋಲ್‌ಗೆ ಸಂಸದ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಪ್ರವಾಸೋದ್ಯಮ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ, ಕಲಬುರಗಿಯಲ್ಲಿ ಸ್ಥಾಪಿಸಲಾದ ಸ್ಮಾರ್ಟ್‌ ಪೋಲ್‌ ರಾಜ್ಯದಲ್ಲಿಯೇ ಮೊದಲ ಹಾಗೂ ದೇಶದ 12ನೇ ಸ್ಮಾರ್ಟ್‌ ಪೋಲ್‌. 

ಒಂದು ಎಂಬಿಪಿಎಸ್‌ ವೇಗದೊಂದಿಗೆ ಪ್ರತಿದಿನ ಅನಿಯಮಿತ ಬ್ರೋಸಿಂಗ್‌ ಹಾಗೂ 100 ಎಂಬಿ ಸೀಮಿತ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಬರುವ 2-3 ತಿಂಗಳಲ್ಲಿ ನಗರದ ಇತರ 18 ಸ್ಥಳಗಳಲ್ಲಿ ಹಾಗೂ ಬೆಂಗಳೂರಿನ 30 ಪ್ರದೇಶಗಳಲ್ಲಿ ಸ್ಮಾರ್ಟ್‌ ಪೋಲ್‌ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

ಕಲಬುರಗಿ, ಮಂಗಳೂರು, ಮೈಸೂರು, ಬೆಳಗಾವಿ ಸೇರಿದಂತೆ 11 ಮಹಾನಗರ ಪಾಲಿಕೆಗಳಲ್ಲಿ ವೈಫೈ ಸೇವೆ ಆರಂಭಿಸಲಾಗುತ್ತಿದೆ. ಅಲ್ಲದೇ 2500 ಗ್ರಾಪಂಗಳಲ್ಲಿ ಸಾರ್ವಜನಿಕ ವೈಫೈ ಹಾಟ್‌ಸ್ಪಾಟ್‌ ನಿಯೋಜನೆ ಕಾರ್ಯ ಸಹ ಪ್ರಗತಿಯಲ್ಲಿದ್ದು, ಮಾರ್ಚ್‌ ಅಂತ್ಯದೊಳಗೆ ಮುಗಿಯಲಿದೆ ಎಂದು ಹೇಳಿದರು.

ಇಂಡಸ್‌ ಟವರ್‌ ಕರ್ನಾಟಕ ವಲಯದ ಮುಖ್ಯ ಕಾರ್ಯನಿರ್ವಾಹಕ ಸುಬ್ಬು ಅಯ್ಯರ್‌ ಮಾತನಾಡಿ, ರಾಜ್ಯದಲ್ಲಿ ಸದೃಢ ಡಿಜಿಟಲ್‌ ಮೂಲ ಸೌಕರ್ಯ ಒದಗಿಸಲು ರಾಜ್ಯ ಸರ್ಕಾರದ ಸಹಭಾಗಿತ್ವದೊಂದಿಗೆ ಸುಮಾರು 4ರಿಂದ 5 ಲಕ್ಷ ರೂ .ವೆಚ್ಚದಲ್ಲಿ ಸ್ಮಾರ್ಟ್‌ ಪೋಲ್‌ ನಿರ್ಮಿಸಲಾಗಿದೆ. ಸ್ಮಾರ್ಟ್‌ ಪೋಲ್‌ ಕೇಂದ್ರಿಕೃತ 300 ಮೀಟರ್‌ ವ್ಯಾಪ್ತಿಯಲ್ಲಿ ಉಚಿತ ವೈಫೈ ಸೇವೆ ಸಿಗಲಿದೆ ಎಂದು ಹೇಳಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ, ಪಾಲಿಕೆ ಆಯುಕ್ತ ರಘುನಂದನ ಮೂರ್ತಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಪಾಲಿಕೆ ಸದಸ್ಯರು, ಇಂಡಸ್‌ ಟವರ್‌ ಸಂಸ್ಥೆ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next