Advertisement

ವಿ.ಪಿ.ಎಂ.ಕನ್ನಡ ಶಾಲೆಯಲ್ಲಿ ಉಚಿತ ಸಮವಸ್ತ್ರ ವಿತರಣೆ

04:00 PM Sep 05, 2017 | Team Udayavani |

ಥಾಣೆ: ಸಮಾಜದಲ್ಲಿ  ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಜನರು ಬೇರೆ ಜನರ ಸಮಸ್ಯೆಗಳಿಗೆ ಹಾಗೂ ಆಶೋತ್ತರಗಳಿಗೆ ಸ್ಪಂದಿಸಬೇಕು. ಜೀವನಕ್ಕೆ ಬಡತನವಿರಬಹುದು ಮನಸ್ಸಿಗಲ್ಲ. ಕಲಿಯುವ ಆಸೆ-ಹೆಬ್ಬಯಕೆಯ ಪ್ರತಿಭೆಯಿದ್ದು, ಆರ್ಥಿಕ ಅಡಚಣೆಯಿಂದ ದುರ್ಬಲಗೊಂಡ, ಬಡತನ ರೇಖೆಗಿಂತ ಕೆಳಗಿರುವ ಮಕ್ಕಳಿಗೆ ಪ್ರತಿ ವರ್ಷ ವಿದ್ಯಾ ಪ್ರಸಾರಕ ಮಂಡಳವು ಉಚಿತ ಸಮವಸ್ತ್ರ ವಿತರಣಾ ಕಾರ್ಯವನ್ನು ಹಮ್ಮಿಕೊಂಡು ಬರುತ್ತಿರುವುದು ಸಂತೋಷದ ವಿಷಯವಾಗಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸವಾಗಲು ವ್ಯಕ್ತಿತ್ವ ವಿಕಾಸವನ್ನು ಮಾಡಿಕೊಳ್ಳಲೇ ಬೇಕು. ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯದ ನಿರ್ಮಾಪಕರಾಗಿದ್ದಾರೆ. ವಿದ್ಯಾರ್ಜನೆಯೇ ಜೀವನದ ಮೂಲ ಬೇರು.

Advertisement

ಶಿಕ್ಷಣವು ಮನುಷ್ಯನಿಗೆ ಮನುಷ್ಯತ್ವ ವನ್ನು, ಮಾನವೀಯತೆಯ ಗುಣ-ಮೌಲ್ಯ ಗಳನ್ನು ಧಾರೆ ಎರೆಯುತ್ತದೆ. ಅಜ್ಞಾನದಿಂದ -ಸುಜ್ಞಾನದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಶಿಕ್ಷಣದ ದಿವ್ಯವಾದ ಹೊಂಬೆಳಕಿನಿಂದ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ, ರಾಷ್ಟ್ರದ ಸತøಜೆಗಳಾಗಿ ಗುರುತಿಸಿ ಕೊಂಡರೆ, ಸರ್ವೋದಯದ, ಸರ್ವತೋ ಮುಖದ ವ್ಯಕ್ತಿತ್ವದ ವೈಶಾಲ್ಯತೆಯನ್ನು  ಪ್ರಬುದ್ಧ ಗೊಳಿಸಬಹುದು ಎಂದು ವಿದ್ಯಾ ಪ್ರಸಾರಕ ಮಂಡಳದ ಅಧ್ಯಕ್ಷ  ಆರ್‌. ಎಸ್‌. ಪೈ ಅವರು  ನುಡಿದರು.

ಅವರು ಇತ್ತೀಚೆಗೆ ಇಲ್ಲಿನ ವಿಪಿಎಂ ಕನ್ನಡ ಶಾಲೆಯಲ್ಲಿ  ಜರಗಿದ ಉಚಿತ ಸಮವಸ್ತ್ರ ವಿತರಣ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡುತ್ತಿದ್ದರು.

ಉಚಿತ ಸಮವಸ್ತ್ರ  ವಿತರಿಸುತ್ತಿರುವ  ವಿದ್ಯಾ ಪ್ರಸಾರಕ ಮಂಡಳದ ಶೈಕ್ಷಣಿಕ ಕಾರ್ಯವನ್ನು ಶ್ಲಾಘಿಸಿದ ಅವರು, ನಮ್ಮ ಸಮಾಜದಲ್ಲಿ ನೊಂದು-ಬೆಂದು ಸೋತು- ಸವೆದು ಹೋದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು,  ಅವರನ್ನು ಶಿಕ್ಷಣವಂತರನ್ನಾಗಿ, ಹೊಸ ಸಮಾಜದ ನಿರ್ಮಾಣಕ್ಕಾಗಿ, ಭಾರತ  ದೇಶದ ಉತ್ತಮ ಸತøಜೆಯನ್ನಾಗಿ ಮಾಡುವ ಮಹದಾಸೆಯಿಂದ ಹುಟ್ಟಿಕೊಂಡಿರುವ ಈ ಸಂಸ್ಥೆಯ ಕಾರ್ಯ ಅತ್ಯದ್ಭುತ ಎಂದರು.

ಸಮಾರಂಭದ ಅಧ್ಯಕ್ಷ, ವಿದ್ಯಾ ಪ್ರಸಾರಕ ಮಂಡಳದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಪಿ.ಎಂ. ಕಾಮತ್‌ ಅವರು ಮಾತನಾಡುತ್ತ, ಸಮೃದ್ಧ, ಸಮರ್ಥ, ಸರ್ವೋದಯದ  ರಾಷ್ಟ್ರವನ್ನು ನಿರ್ಮಿಸಲು ವಿದ್ಯಾರ್ಥಿಗಳಲ್ಲಿ ಏಕತೆ, ಭಾವೈಕ್ಯತೆ, ರಾಷ್ಟ್ರೀಯ ಐಕ್ಯತೆಯ ಗುಣ ಮೌಲ್ಯಗಳನ್ನು ಬೆಳೆಸ
ಬೇಕು. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯೇ ಸಂಸ್ಥೆಯ ಗುರಿ. ಪ್ರತಿವರ್ಷ ಅಂಗನವಾಡಿಯಿಂದ 10ನೇ ತರಗತಿಯವರೆಗೆ ಉಚಿತ ಪ್ರವೇಶ, ಪಠ್ಯಪುಸ್ತಕ, ನೋಟ್‌ಬುಕ್‌,ಸಮವಸ್ತ್ರ, ಸಂಗಣಕ, ಸ್ಮಾರ್ಟ್‌ಕ್ಲಾಸ್‌ ಬೋರ್ಡ್‌,ಶಾಲಾ ಬಸ್ಸಿನಲ್ಲಿ ರಿಯಾಯಿತಿ, ಗ್ರಂಥಾಲಯ, ಪ್ರಯೋಗಾಲಯಗಳನ್ನು ಒದಗಿಸಿಕೊಡ ಲಾಗುತ್ತಿದೆ. ವಿದ್ಯಾರ್ಥಿಗಳು ವಿದ್ಯೆಯನ್ನು ಪಡೆದು, ಶಾಲೆಯ ಕೀರ್ತಿಯನ್ನು ಹೆಚ್ಚಿಸಿ, ಉನ್ನತ ವ್ಯಕ್ತಿಗಳಾಗಿರೆಂದು ಶುಭ ಹಾರೈಸಿದರು.

Advertisement

ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ  ಕಾರ್ಯ ಕ್ರಮವು ಪ್ರಾರಂಭವಾಯಿತು. ವೇದಿಕೆಯಲ್ಲಿ ಗೌರವ ಕಾರ್ಯದರ್ಶಿ ಬಿ. ಎಚ್‌, ಕಟ್ಟಿ, ಮುಖ್ಯೋಪಾಧ್ಯಾಯಿನಿ ನೆಲ್ಸನ್‌, ಉಪ ಪ್ರಾಂಶುಪಾಲ ಸಾಯಿನಾಥ್‌ ಶೆಣೈ,  ಸುವಿನಾ ಶೆಟ್ಟಿ, ಅರುಣಾ ಭಟ್‌ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಕರು, ಶಿಕ್ಷಕೇತರ ಸಿಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆ, ಸ್ವಾಗತ ಭಾಷಣವನ್ನು ಶಿಕ್ಷಕಿ ಸುನಿತಾ ಮs… ಮತ್ತು ಲಕ್ಷ್ಮೀ ಕೆಂಗನಾಳ ನಿರ್ವಹಿಸಿದರೆ, ಅತಿಥಿ-ಗಣ್ಯರ ಪರಿಚಯವನ್ನು  ಸುಂದರಿ ಬಾಯಿ ಮಂಜುನಾಥ ಕಾಮತ್‌ ಕನ್ನಡ ಶಾಲೆಯ ಪರಿವೀಕ್ಷಕಿ ಗೌರಿ ದೇಶಪಾಂಡೆ ಮಾಡಿದರು. ಶಿಕ್ಷಕಿ ರೇಖಾ ರಾವ್‌ ಮತ್ತು ಶಿಕ್ಷಕ ಅಂಬಾಜೆಪ್ಪಾ ಕಾಟ್‌ಗಾಂವ್‌ ಅವರು ವಿದ್ಯಾರ್ಥಿಗಳ ಯಾದಿಯನ್ನು  ಓದಿದರು.  ಶಿಕ್ಷಕಿ ಪಿಂಟೂ ಅವರು ಧನ್ಯವಾದ ಗೈದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next