ಕಲಬುರಗಿ: ನಗರದ ಹೈಕೋರ್ಟ್ ಪಕ್ಕದಲ್ಲಿರುವ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಅಫಜಲಪುರ ಶಾಸಕ ಎಂ.ವೈ. ಪಾಟೀಲ್ ಫೌಂಡೇಷನ್ ಅಡಿಯಲ್ಲಿ ಕಳೆದ ಆರಂಭವಾಗಿರುವ ಶಾಂತಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬರಗಾಲ ಹಿನ್ನೆಲೆಯಲ್ಲಿ ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯ ಬಡ ಜನತೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಆಸ್ಪತ್ರೆಯ ಚೇರ್ಮನ್ ಆ್ಯಂಡ್ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಸಂಜೀವ ಪಾಟೀಲ ಪ್ರಕಟಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಆರು ತಿಂಗಳಿಂದ ಅಫಜಲಪುರ ತಾಲೂಕಿನ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಸಾಧಕ- ಬಾಧಕಗಳನ್ನು ನೋಡಿಕೊಂಡು ಎರಡೂ ಜಿಲ್ಲೆಯ ಜನರಿಗೂ ಅದರಲ್ಲೂ ಬಡವರು, ರೈತರು ಹಾಗೂ ನಿರ್ಗತಿಕತಿಗೆ ಹೆಚ್ಚು ಕಾಳಜಿ ಪೂರ್ವಕವಾಗಿ ಉಚಿತವಾಗಿ ಚಿಕಿತ್ಸೆ ನೀಡಲು ಮುಂದಾಗಿದ್ದೇವೆ. ಸರ್ಜರಿ, ನೇತ್ರ, ಸ್ತ್ರೀರೋಗ- ಪ್ರಸೂತಿ, ಪ್ಲಾಸ್ಟಿಕ್ ಸರ್ಜರಿ, ಗ್ಲಾಸೊ ಎಂಟಿಯೋರಾಲಜಿ, ಯೂರಾಲಜಿ, ಕಾರ್ಡಿಯೋಲಾಜಿ, ನೆಪ್ರೊಲಾಜಿ, ಡರ್ಮಟಾಲಜಿ, ಎಂಡೋಕ್ರೈನಾಲಜಿ, ಮಕ್ಕಳ ವಿಭಾಗ, ಇಎನ್‌ಟಿ, ದಂತವೈದ್ಯಕೀಯ, ರುಮ್ಮಾಟಾಲಜಿ ಹೀಗೆ ಸುಸಜ್ಜಿತ ಹಾಗೂ ಗುಣಮಟ್ಟದ ಚಿಕಿತ್ಸೆಯನ್ನು ವೈದ್ಯಕೀಯ ರಂಗದ ಹಲವು ಸುಸಜ್ಜಿತ, ಆಧುನಿಕ ವಿಭಾಗಗಳೊಂದಿಗೆ ಶಾಂತಾ ಆಸ್ಪತ್ರೆ ಜನತೆಗೆ ಸೇವೆ ನೀಡುತ್ತಿದೆ. ಹಲವು ಹಂತಗಳಲ್ಲಿ, ವಿವಿಧ ವಿಭಾಗಗಳಲ್ಲಿ ತಜ್ಞ ಹಾಗೂ ಜನಪರ ಯೋಜನೆಗಳನ್ನು ಘೋಷಿಸಲಾಗತ್ತಿದೆ. ಇಂತಹ ವೇಳೆ ನಾವೀಗ ತೀವು ಬರಗಾಲದಲ್ಲಿದ್ದೇವೆ. ಬಡವರು, ಮಧ್ಯಮ ವರ್ಗದವರು ಸಂಕಷ್ಟದಿಂದ ತತ್ತರಿಸಿದ್ದಾರೆ. ಹೊಲದಲ್ಲಿ ಬೆಳೆ ಇಲ್ಲ, ಮಳೆ ಇಲ್ಲ, ಕುಡಿಯುವ ನೀರಿಲ್ಲದೆ ತತ್ತರಿಸಿದ್ದಾರೆ. ಈ ಹಂತದಲ್ಲಿ ಅವರ ಮನೆಗಳಲ್ಲಿ ಆರೋಗ್ಯ ತೊಂದರೆ ಕಾಡಿದರೆ ಅಲ್ಲಿನ ಪರಿಸ್ಥಿತಿ ದೇವರೇ ಬಲ್ಲ. ನಡೆಸುವುದೇ ಕಷ್ಟಕರವಾಗಿದೆ ಎಂದು ಪಾಟೀಲ ಮರುಗಿದರು.
ಈ ನಿಟ್ಟಿನಲ್ಲಿ ಅತ್ಯುತ್ತಮ ಆರೋಗ್ಯ ಸೇವೆಗಳನ್ನೆಲ್ಲ ಶಾಂತಾ ಆಸ್ಪತ್ರೆಯಿಂದ ಸಂಪೂರ್ಣ ಉಚಿತವಾಗಿ ನೀಡುವುದಾಗಿ ಘೋಷಿಸುತ್ತಿದ್ದೇವೆ. ಔಷಧಿ ಹಾಗೂ ಪ್ರಯೋಗಾಲಯ ಪರೀಕ್ಷೆಗಳ ಶುಲ್ಕ, ಹೊರತುಪಡಿಸಿ ನಮ್ಮಲ್ಲಿ ಯಾವುದೇ ವೈದ್ಯಕೀಯ ಸೇವೆ, ಕೋಣೆ ಬಾಡಿಗೆ, ಸರ್ಜರಿ ಇತ್ಯಾದಿ ಸೇವೆಗಳಿಗೂ ಪ್ರತ್ಯೇಕ ಶುಲ್ಕ, ಆಸತ್ರೆಗೆ ನೀಡಬೇಕಾಗಿಲ್ಲ. ಸಂಪೂರ್ಣ ಉಚಿತವಾಗಿ ವೈದ್ಯಕೀಯ ಸೇವೆ ನೀಡಲಾಗುವುದು ಎಂದರು.
ಖಾಸಗಿ ರಂಗದಲ್ಲಿ ಅತ್ಯುತ್ತಮ ಸವಲತ್ತುಗಳಿರುವ ಶಾಂತಾ ಆಸ್ಪತ್ರೆ ಪರಿಣಿತ ತಜ್ಞ ವೈದ್ಯರೊಂದಿಗೆ ಕೆಲಸ ಮಾಡುತ್ತಿದೆ. ಕಳೆದ 6 ತಿಂಗಳಲ್ಲೇ ಸ್ತ್ರೀರೋಗ – ಪ್ರಸೂತಿ ಸಂಬಂಧಿ 10ಕ್ಕೂ ಹೆಚ್ಚು, ಜನರಲ್ ಸರ್ಜರಿ- 35, ಎಲುಬು ಮೂಳೆ ಸರ್ಜರಿ- 2, ನ್ಯೂರಾಲಜಿ ಸರ್ಜರಿ 10, ಯೂರಾಲಜಿ-10, ಲೇಸರ್ ಮೂಲಕ ಚಿಕಿತ್ಸೆ. 20, ಪ್ರಿಸ್ಟಿಕ್ ಸರ್ಜರಿ- 10, ದಂತ-5, ಇಎನ್‌ಟಿ- 5, ಕಣ್ಣು, ಚಿಕಿತ್ಸೆ 25 ಹೀಗೆ ಹಲವು ವಿಭಾಗಗಳಲ್ಲಿ ಸಂಕೀರ್ಣ ಶಸ್ತ್ರ ಚಿಕಿತ್ಸೆ ಸೇವೆ ನೀಡಿದೆ ಎಂದರು.
ಕಳೆದಾರು ತಿಂಗಳಲ್ಲಿ 1,500 ಕ್ಕೂ ಹೆಚ್ಚು ಹೊರ ರೋಗಿ ವಿಭಾಗದ ರೋಗಿಗಳು ಇಲ್ಲಿ ಸಲಹೆ-ಚಿಕಿತ್ಸೆ ಪಡೆದು ಗುಣಮುಖಾಗಿದ್ದಾರೆ. ಒಳ ರೋಗಿಗಳಾಗಿ 500 ಕ್ಕೂ ಹೆಚ್ಚು ಜನ ಇಲ್ಲಿ ದಾಖಲೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪತ್ನಿ ಹಾಗೂ ಆಸ್ಪತ್ರೆಯ ನಿರ್ದೇಶಕರಾದ ಡಾ.ಅಂಬಿಕಾ ಪಾಟೀಲ, ಡಾ.ತ್ರಿವೇಣಿ,ಡಾ.ಗ್ರೇಸ್, ಡಾ.ಜುಬೇದಾ ಇತರರು ಇದ್ದರು