Advertisement

ಜಯದೇವದಿಂದ 200 ಬಡರೋಗಿಗಳಿಗೆ ಉಚಿತ ಚಿಕಿತ್ಸೆ

01:13 PM Oct 19, 2018 | Team Udayavani |

ಬೆಂಗಳೂರು: ನಗರದ ಖ್ಯಾತ ಜಯದೇವ ಹೃದ್ರೋಗ ವಿಜಾnನ ಮತ್ತು ಸಂಶೋಧನಾ ಸಂಸ್ಥೆ (ಎಸ್‌ಜೆಐಸಿಆರ್‌) ಆಯೋಜಿಸಿದ್ದ ಆಂಜಿಯೋಪ್ಲಾಸ್ಟಿ ಕಾರ್ಯಾಗಾರದಲ್ಲಿ ಸುಮಾರು 200 ಬಡರೋಗಿಗಳಿಗೆ ಯಶಸ್ವಿಯಾಗಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನಡೆಸಿ ಉಚಿತವಾಗಿ ಸ್ಟಂಟ್‌ ಅಳವಡಿಸಲಾಗಿದೆ.

Advertisement

ಸೋಮವಾರ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್‌. ಮಂಜುನಾಥ್‌ ಮಾತನಾಡಿ, 200 ಆಂಜಿಯೋಪ್ಲಾಸ್ಟಿ ಚಿಕಿತ್ಸೆಗಳನ್ನು ಕೇವಲ 4 ದಿವಸಗಳಲ್ಲಿ ಮಾಡುವುದು ಒಂದು ಬೃಹತ್‌ ಸಾಧನೆ. ಈ ಅಸಾಧಾರಣ ಕಾರ್ಯಾಗಾರವನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ನಮ್ಮಲ್ಲಿರುವ ಏಳು ಕ್ಯಾತ್‌ಲ್ಯಾಬ್‌ಗಳು, 75 ನುರಿತ ವೈದ್ಯರು, ತಂತ್ರಜ್ಞರು, ಶುಶ್ರೂಷಕರು ಹಾಗೂ ನೌಕರರರು ಕಾರಣ.

ಅವರ ಕುಶಲತೆ, ಕಾರ್ಯದಕ್ಷತೆ ಮತ್ತು ಸಮರ್ಪಣಾ ಭಾವದ ಸೇವೆಯ ಜತೆ ಗುಣಮಟ್ಟದ ಮೂಲಭೂತ ಸೌಕರ್ಯಗಳ ಪೂರೈಕೆಯಿಂದ ಇದು ಸಾಧ್ಯವಾಗಿದೆ. ಚಿಕಿತ್ಸೆ ಪಡೆದವರೆಲ್ಲರೂ ಬಡರೈತರು, ದಿನಗೂಲಿ ನೌಕರರು, ಆಟೋರಿûಾ ಚಾಲಕರು, ಬೀದಿಬದಿ ಕಾರ್ಮಿಕರು ಹಾಗೂ ನಿಸ್ಸಹಾಯಕ ಹಿರಿಯ ನಾಗರಿಕರರಾಗಿದ್ದಾರೆ. ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳ, ಆಂಧ್ರ ಮತ್ತು ತೆಲಂಗಾಣದ ಹೃದ್ರೋಗಿಗಳಿಗೂ ಚಿಕಿತ್ಸೆ ನೀಡಲಾಗಿದೆ ಎಂದರು.

ಡಾ. ಗೋವಿಂದರಾಜು ಸುಬ್ರಮಣಿ ಹಾರ್ಟ್‌ ಫೌಂಡೇಷನ್‌, ಇಲಿನಾಯಿಸ್‌, ಅಮೆರಿಕ ಮತ್ತು ಮೆಡಾóನಿಕ್‌ ವ್ಯಾಸ್ಕಾಲರ್‌ ಡಿವಿಷನ್‌ ಕಾರ್ಯಾಗಾರಕ್ಕೆ ಸ್ಟಂಟ್‌ಗಳನ್ನು ಉದಾರವಾಗಿ ನೀಡಿರುವುದು ಶ್ಲಾಘನೀಯ. ಡಾ. ಜಿ. ಸುಬ್ರಮಣಿರವರ ದೇಶಾಭಿಮಾನ, ಸಾಮಾಜಿಕ ಕಳಕಳಿ, ಉದಾರ ಕೊಡುಗೆ ಹಾಗೂ ಕಳೆದ ಒಂಬತ್ತು ವರ್ಷಗಳಿಂದ ಬಡರೋಗಿಗಳ ಚಿಕಿತ್ಸೆಯಲ್ಲಿ ಭಾಗವಹಿಸುತ್ತಿರುವುದು,

ಇತರೆ ಅನಿವಾಸಿ ಭಾರತೀಯ ವೈದ್ಯರುಗಳಿಗೆ ಮಾದರಿಯಾಗಿದೆ. ಮೆಡಾóನಿಕ್‌ ಕಂಪನಿ ಸತತವಾಗಿ 11 ವರ್ಷಗಳಿಂದ ಸಹಾಯಹಸ್ತವನ್ನು ಮುಂದುವರಿಸಿರುವುದು ಹಾಗೂ ನಮ್ಮ ಜನರಿಗೆ ಸಹಾಯ ಮಾಡುವ ಅವಕಾಶ ನನಗೆ ದೊರೆತದ್ದು ನನ್ನ ಅದೃಷ್ಟ ಎಂದು ಡಾ. ಮಂಜುನಾಥ್‌ ತಿಳಿಸಿದರು.

Advertisement

ಶೇ. 35 ರಷ್ಟು ಮಹಿಳಾ ರೋಗಿಗಳು: ಕಾರ್ಯಾಗಾರದಲ್ಲಿ ಶೇ. 25 ರೋಗಿಗಳು 50ವರ್ಷಕ್ಕೂ ಕಡಿಮೆ ವಯಸ್ಕರಾಗಿದ್ದು, 28 ವರ್ಷದ ಕಿರಿಯ ಹಾಗೂ 81 ವರ್ಷದ ಹಿರಿಯ ನಾಗರಿಕರಿಗೆ ಚಿಕಿತ್ಸೆ ಮಾಡಲಾಯಿತು. ಹೆಚ್ಚಿನ ರೋಗಿಗಳಲ್ಲಿ ಧೂಮಪಾನ, ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಮಿತಿಮೀರಿದ ಕೊಬ್ಬಿನಾಂಶ ಕಂಡುಬಂದಿದೆ. ಚಿಕಿತ್ಸೆ ಪಡೆದ 200 ರೋಗಿಗಳಲ್ಲಿ ಶೇ. 35 ರಷ್ಟು ಮಹಿಳಾ ರೋಗಿಗಳಾಗಿದ್ದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next