ಕೋಲಾರ: ದೇಶ ಪ್ರೇಮ ಇರುವವರು ಮಾತ್ರವೇ ದೇಶಸೇವೆ ಮಾಡಲು ಮುಂದಾಗುತ್ತಾರೆ ಎಂದು ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ್ ಬಾಬು ಅಭಿಪ್ರಾಯಪಟ್ಟರು.
ನಗರದ ಸರಕಾರಿ ನೌಕರರ ಭವನದಲ್ಲಿ ಭಾನುವಾರ ಕೋಲಾರ ಕ್ರೀಡಾ ಸಂಘ ಆಯೋಜಿಸಿರುವ ಯೋಧರ ನೇಮಕಾತಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕೋಲಾರ ಕ್ರೀಡಾ ಸಂಘವು ಯೋಧರ ನೇಮಕಾತಿ ಶಿಬಿರದಲ್ಲಿ ಭಾಗವಹಿ ಸುವ ಯುವಕರಿಗೆ ಉಚಿತವಾಗಿ ತರಬೇತಿ ನೀಡು ತ್ತಿರುವುದು ಶ್ಲಾಘನೀಯ, ಈ ತರಬೇತಿಯನ್ನು ಸದುಪಯೋಗಿಸಿಕೊಂಡು ಶಿಬಿರದ ಪ್ರತಿ ಯೊಬ್ಬರು ಸೇನೆಗೆ ಆಯ್ಕೆಯಾಗಬೇಕು. ಜಿಲ್ಲಾ ಸರಕಾರಿ ನೌಕರರ ಸಂಘದಿಂದ ಅಗತ್ಯ ನೆರವು ನೀಡುವುದಾಗಿ ಘೋಷಿಸಿದರು.
ತರಬೇತಿ ಶಿಬಿರಕ್ಕೆ ನೆರವು: ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಕೋಲಾರ ಜಿಲ್ಲೆಯ ಯುವಕರು ಕಠಿಣ ಪರಿಶ್ರಮ ಹಾಗೂ ಸಾಧನೆಗೆ ಹೆಸರಾಗಿದ್ದು, ಯೋಧರ ನೇಮಕಾತಿ ತರಬೇತಿ ಶಿಬಿರಕ್ಕೆ ಅಗತ್ಯ ನೆರವು ನೀಡುವುದಾಗಿಘೋಷಿಸಿದರು. ಪೊಲೀಸ್ ಅಧಿಕಾರಿ ರಾಷ್ಟ್ರಪತಿ ವಿಜೇತ ಬೆರಳಚ್ಚು ತಜ್ಞ ವಂದೇಮಾತರಂ ಸೋಮ ಶಂಕರ್ ಮಾತನಾಡಿ, ದೇಶಸೇವೆ ಮಾಡುವ ಅಪೂರ್ವ ಸೌಭಾಗ್ಯ ಕೆಲವರಿಗೆ ಮಾತ್ರವೇ ಸಿಗುತ್ತದೆ. ತರಬೇತಿ ಶಿಬಿರಕ್ಕೆ ಬಂದಿರುವ ಪ್ರತಿಯೊಬ್ಬರೂ ಸೇನೆಗೆ ನೇಮಕಾತಿಯಾಗಿ ದೇಶ ಸೇವೆ ಮಾಡಬೇಕು ಎಂದರು.
ಕೋಲಾರ ಕ್ರೀಡಾ ಸಂಘದ ಹಿರಿಯ ಕ್ರೀಡಾ ಪಟು ಪುರುಷೋತ್ತಮ್, ಮಾಜಿ ಯೋಧರಾದ ಕೃಷ್ಣಮೂರ್ತಿ ಹಾಗೂ ಸಿಬಿಐ ಸುರೇಶ್, ಮಲ್ಲಿಕಾರ್ಜುನ್ ಮಾತನಾಡಿ, ಕೋಲಾರ ಜಿಲ್ಲೆಯ ಯುವಕರು ಸೇನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಪರಮವೀರ ಚಕ್ರ ಪ್ರಶಸ್ತಿಗೆ ಭಾಜನರಾಗ ಬೇಕೆಂಬ ಸದುದ್ದೇಶದಿಂದ ಈ ಶಿಬಿರವನ್ನು ಸ್ವಯಂ ಪ್ರೇರಿತವಾಗಿ ದೈಹಿಕ ಹಾಗೂ ಲಿಖೀತ ಪರೀಕ್ಷೆ ತರ ಬೇತಿ ನೀಡುವ ಮೂಲಕ ನಡೆಸುತ್ತಿರುವುದಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಕೆ.ಎಸ್.ಗಣೇಶ್,ಕೋಲಾರ ಕ್ರೀಡಾ ಸಂಘದ ಅಧ್ಯಕ್ಷ ಸಾಮಾ ಅನಿಲ್, ಖಜಾಂಚಿ ಕೃಷ್ಣನ್, ಜಯಪ್ರಕಾಶ್, ಮಂಜುನಾಥ್, ಹರೀಶ್ ಹಾಜರಿದ್ದರು.