Advertisement

ಸೇನೆ ಸೇರುವ ಯುವಕ ಯುವತಿಯರಿಗೆ ಉಚಿತ ತರಬೇತಿ ನೀಡುವ ಮಾಜಿ ಸೈನಿಕರು

06:59 PM Jul 24, 2022 | Team Udayavani |

ಪಿರಿಯಾಪಟ್ಟಣ: ಭಾರತೀಯ ಸೇನೆ ಹಾಗೂ ಪೊಲೀಸ್ ಇಲಾಖೆಗೆ ಸೇರ ಬಯಸುವ ನಿರುದ್ಯೋಗಿ ಯುವಕರಿಗೆ ಉಚಿತವಾಗಿ ತರಬೇತಿ ನೀಡುವ ಕಾರ್ಯದಲ್ಲಿ ಭುತನಹಳ್ಳಿ ಗ್ರಾಮದ ಮಾಜಿ ಸೈನಿಕ ಬಿ.ಸಿ.ತಮ್ಮಣೇಗೌಡ ಹಾಗೂ ರಾವಂದೂರು ಶಿವು ತಾಲ್ಲೂಕಿಗೆ ಮಾದರಿಯಾಗಿದ್ದಾರೆ.

Advertisement

ಬಿ.ಸಿ.ತಮ್ಮಣೇಗೌಡ ಹಾಗೂ ರಾವಂದೂರು ಶಿವು ಮಾಜಿ ಸೈನಿಕರಾಗಿದ್ದು, ಇವರು ಸುಮಾರು 17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ತಮ್ಮ ಖಾಸಗಿ ಬದುಕಿನ ಒತ್ತಡದ ನಡುವೆಯೂ ತಮ್ಮ ವಿಶಿಷ್ಠ ರೀತಿಯಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಆ ಮೂಲಕ ಭಾರತೀಯ ಸೇನೆ ಹಾಗೂ ಪೋಲಿಸ್ ಇಲಾಖೆಗೆ ಸೇರಬಯಸುವ ತಾಲ್ಲೂಕಿನ ಯುವಕರಿಗೆ ತರಬೇತಿ ನೀಡುವ ಮೂಲಕ ಯುವಕರ ಪಾಲಿಗೆ ಆದರ್ಶಪ್ರಾಯವಾಗಿದ್ದಾರೆ.

ಪಿರಿಯಾಪಟ್ಟಣ ತಾಲ್ಲೂಕಿನ ನೂರಾರು ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ಪಿರಿಯಾಪಟ್ಟಣ ಹರವೆ ಮಲ್ಲರಾಜಪಟ್ಟಣದಲ್ಲಿರುವ ತಾಲ್ಲೂಕು ಕ್ರೀಡಾಂಗಣ, ರಾವಂದೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ, ಬೆಟ್ಟದಪುರದ ಶಾಲಾ-ಕಾಲೇಜು ಆವರಣಗಳಲ್ಲಿ ಯುವಕರಿಗೆ ಉಚಿತವಾಗಿ ಸೇನೆ ಮತ್ತು ಪೊಲೀಸ್ ಇಲಾಖೆಗೆ ಸೇರ ಬಯಸುವ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿ ಶಿಬಿರವನ್ನು ನಡೆಸುತ್ತಿದ್ದಾರೆ. ರಾವಂದೂರಿನಲ್ಲಿ ಈಗಾಗಲೇ ಆರು ತಿಂಗಳಿನಿಂದ ಸುಮಾರು 60 ರಿಂದ 70 ಯುವಕ ಹಾಗೂ ಯುವತಿಯರು ಈ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜೊತೆಗೆ ಇವರು ಪಿರಿಯಾಪಟ್ಟಣ ಹಾಗೂ ಬೆಟ್ಟದಪುರ ಎರಡು ಕೇಂದ್ರಗಳಲ್ಲಿ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದಾರೆ.

ಪಿರಿಯಾಪಟ್ಟಣದ ತಾಲ್ಲೂಕು ಆಡಳಿತ, ಜನಪ್ರತಿನಿಧಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ತಾಲ್ಲೂಕಿನಲ್ಲಿರುವ ನಿರುದ್ಯೋಗಿ ಸಮಸ್ಯೆಯನ್ನು ಹೋಗಲಾಡಿಸಲು ನಮ್ಮೊಡನೆ ಸಹಕರಿಸಿದರೆ ತಾಲ್ಲೂಕಿನ ನಿರುದ್ಯೋಗಿ ಯುವಕ, ಯುವತಿಯರಿಗೆ ಸೇನೆ ಸೇನೆ ಹಾಗೂ ಪೊಲೀಸ್ ಇಲಾಖೆ ಸೇರಲು ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ ನೀಡಲು ಸದಾ ಸಿದ್ದರಿಂದ್ದೇವೆ.
-ಬಿ.ಸಿ.ತಮ್ಮಣ್ಣೇಗೌಡ ಮಾಜಿ ಸೈನಿಕ ಭೂತನಹಳ್ಳಿ ಗ್ರಾಮ.

Advertisement

ಭಾರತೀಯ ಸೇನೆಯಲ್ಲಿ ಸುಮಾರು 17 ವರ್ಷಗಳ ಕಾಲ ದೇಶ ಸೇವೆಯನ್ನು ಮಾಡಿ ನಿವೃತ್ತಿಯನ್ನು ಹೊಂದಿದ್ದೇನೆ ಈಗಲೂ ಸಹ ನಮ್ಮ ದೇಶ ಸೇವೆಯನ್ನು ನಾನು ನಿಲ್ಲಿಸುವುದಿಲ್ಲ ಸೇನೆಗೆ ಸೇರ ಬಯಸುವ ಆಸಕ್ತ ಯುವಕರಿಗೆ ತರಬೇತಿ ನೀಡುತ್ತಿದ್ದೇನೆ. ನಮಗೆ ಸಾರ್ವಜನಿಕರು ಬೆನ್ನೆಲುಬಾಗಿ ನಿಂತರೆ ನಮ್ಮ ತಾಲೂಕಿನ ಯುವಕ ಯುವತಿಯರು ಎಷ್ಟೇ ಪ್ರಮಾಣದಲ್ಲಿ ತರಬೇತಿಗೆ ಬಂದರೂ ಅವರಿಗೆ ತರಬೇತಿಯನ್ನು ನೀಡುವ ಮೂಲಕ ಅಬರನ್ನು ದೇಶ ಸೇವೆಗೆ ಅವರನ್ನು ಪ್ರೇರೇಪಿಸುತ್ತೇವೆ.
-ರಾವಂದೂರು ಶಿವು ಮಾಜಿ ಸೈನಿಕ.

– ಪಿ.ಎನ್.ದೇವೇಗೌಡ ಪಿರಿಯಾಪಟ್ಟಣ.

Advertisement

Udayavani is now on Telegram. Click here to join our channel and stay updated with the latest news.

Next