Advertisement
ಪ್ರತಿ ವರ್ಷ ಮಳೆಗಾಲ ಬಂದರೆ ನಗರದ ತಗ್ಗು ಪ್ರದೇಶಗಳೂ ಸಹಿತ ನಗರದ ವಿವಿಧೆಡೆ ಒಳಚರಂಡಿ ಮ್ಯಾನ್‌ಹೋಲ್‌ಗಳು ಉಕ್ಕಿ ಹರಿ ಯುತ್ತವೆ. ಪಾಲಿಕೆ ವತಿಯಿಂದ ಮುಂಗಾರಿಗೆ ಸಿದ್ಧಗೊಳ್ಳು ನಡೆಸುವ ರಾಜಕಾಲುವೆ, ತೋಡುಗಳ ಹೂಳು ತೆರವು ಕಾರ್ಯಾಚರಣೆಯಂತೆಯೇ ಒಳಚರಂಡಿಗೆ ಸಂಬಂಧಿಸಿದ ಕೆಲಸಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ.
Related Articles
ಸಮಸ್ಯೆ ವ್ಯಾಪಕ
ನಗರದ ಶಿವಬಾಗ್, ಬೆಂದೂರು, ಮರೋಳಿ, ಕಂಕನಾಡಿ, ದೇರೆಬೈಲು ದಕ್ಷಿಣ, ದೇರೆಬೈಲು ಪೂರ್ವ, ಕಾವೂರು, ಕದ್ರಿ ಉತ್ತರ, ಬಿಜೈ, ಕೊಡಿಯಾಲಬೈಲು, ಪದವು ಸೆಂಟ್ರಲ್, ಜಪ್ಪಿನಮೊಗರು, ಬಜಾಲ್, ಅತ್ತಾವರ ಸೇರಿದಂತೆ
ಪಾಲಿಕೆಯ ಬಹುತೇಕ ವಾರ್ಡ್ ಗಳಲ್ಲಿ ಒಳ ಚರಂಡಿ ಸಮಸ್ಯೆ ವ್ಯಾಪಕವಾಗಿ ಕಂಡು ಬರುತ್ತಿದೆ. ಗುಜ್ಜರಕೆರೆ ಬಳಿಯ ಅರೆಕರೆಬೈಲು ಪ್ರದೇಶದಲ್ಲಿ ಪ್ರತಿ ಮಳೆಗಾಲದಲ್ಲಿ ಕಾರಂಜಿಯಂತೆ ಡ್ರೈನೇಜ್ ನೀರು ಹೊರಕ್ಕೆ ಚಿಮ್ಮುತ್ತದೆ ಎಂದು ಸ್ಥಳೀಯರು ಪ್ರತೀ ಬಾರಿಯೂ ಆರೋಪ ಮಾಡುತ್ತಾರೆ.
Advertisement
ಒಳಚರಂಡಿ ಜಾಲಕ್ಕೆ ಮಳೆ ನೀರಿನ ಸಂಪರ್ಕ
ಕೆಲವು ಬಹುಮಹಡಿ ಕಟ್ಟಡಗಳ ಮಳೆ ನೀರು ಹರಿಯುವ ಕೊಳ ವೆ ಯ ಸಂಪರ್ಕವನ್ನೂ ಒಳಚರಂಡಿ ಜಾಲಕ್ಕೆ ನೀಡುವುದು ಮಳೆಗಾಲದಲ್ಲಿ ಒಳಚರಂಡಿಗಳ ತ್ಯಾಜ್ಯ ನೀರು ಉಕ್ಕಿಹರಿಯಲು ಪ್ರಮುಖ ಕಾರಣ. ಪಾಲಿಕೆ ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸಿ, ಇದನ್ನು ತಡೆದರೆ ಸ್ವಲ್ಪ ಮಟ್ಟಿಗೆ ಈ ಸಮಸ್ಯೆ ಉಂಟಾಗದಂತೆ ತಡೆಯಬಹುದು ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ಶೀಘ್ರ ಬ್ಲಾಕ್ ತೆರವು
ಒಳಚರಂಡಿ ಮ್ಯಾನ್‌ಹೋಲ್‌ಗಳಿಂದ ಕೆಲವೆಡೆ ಕೊಳಚೆ ನೀರು ಹೊರ ಬರುತ್ತಿರುವುದು ತಿಳಿದಿದೆ. ಸಮರ್ಪಕ ಕಾಮಗಾರಿ ನಡೆಸುವ ಮೂಲಕ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಳೆಗಾಲಕ್ಕೆ ಮುನ್ನ ಕೊಳವೆ ಮಾರ್ಗದಲ್ಲಿ ಬ್ಲಾಕ್‌ಗಳಿದ್ದಲ್ಲಿ, ಮಳೆ ನೀರಿನ ಅಕ್ರಮ ಸಂಪರ್ಕ ನೀಡಿದ್ದರೆ ಅದನ್ನೂ ತೆರವುಗೊಳಿಸುವಂತೆಯೂ ಸೂಚನೆ ನೀಡಲಾಗುವುದು. – ಚನ್ನಬಸಪ್ಪ ಕೆ., ಪಾಲಿಕೆ ಆಯುಕ್ತ -ಭರತ್ ಶೆಟ್ಟಿಗಾರ್