Advertisement

ಶಾಲಾ ವಿದ್ಯಾರ್ಥಿಗಳಿಗೆ ಉಚಿತ ರಾಜ್ಯ ಪ್ರವಾಸ ಭಾಗ್ಯ

05:27 PM Jan 29, 2018 | Team Udayavani |

ಯಾದಗಿರಿ: ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳಿಗೆ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಲಾದ ನಾಲ್ಕು ದಿನಗಳ ಉಚಿತ ರಾಜ್ಯ ಪ್ರವಾಸಕ್ಕೆ ಶಾಸಕ ಡಾ| ಎ.ಬಿ. ಮಾಲರಕೆಡ್ಡಿ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.

Advertisement

ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಎದುರಿಗೆ ಜರುಗಿದ ಸಮಾರಂಭದಲ್ಲಿ ಶಾಸಕರು ಪ್ರವಾಸಕ್ಕೆ ಹೊರಟು ನಿಂತ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜ ಗೌನಳ್ಳಿ, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ, ಜಿಲ್ಲಾ ಆಯುಕ್ತ ಪ್ರೊ| ಸಿ.ಎಂ. ಪಟ್ಟೇದಾರ, ಗೈಡ್ಸ್‌ ಆಯುಕ್ತೆ ನಾಗತ್ನಾ ಅನಪೂರ, ಸಂಘಟನಾ ಆಯುಕ್ತ ಮಸಲಿಂಗಪ್ಪ ನಾಯಕ, ಜಿಲ್ಲಾ ಸಂಘಟನಾ ಆಯುಕ್ತೆ ನಾಗರತ್ನಾ ಪಾಟೀಲ್‌ ಇನ್ನಿತರರು ಇದ್ದರು. ಒಟ್ಟು ಮೂರು ಬಸ್‌ಗಳಲ್ಲಿ 162 ವಿದ್ಯಾರ್ಥಿಗಳು, 12 ಜನ ಶಿಕ್ಷಕರು ಪ್ರವಾಸಕ್ಕೆ ತೆರಳಿದರು.

ಬೌದ್ಧಿಕಮಟ್ಟ ಹೆಚ್ಚಿಸಲು ಶೈಕ್ಷಣಿಕ ಪ್ರವಾಸ ಸಹಕಾರಿ
ಣಸಗಿ:
ನಾಡಿನ ಸಂಸ್ಕೃತಿ ತಿಳಿದುಕೊಳ್ಳಲು ಶೈಕ್ಷಣಿಕ ಪ್ರವಾಸ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ ಎಂದು ಬಸವೇಶ್ವರ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ನಾನಾಗೌಡ ಪಾಟೀಲ ಹೇಳಿದರು. 

ಪಟ್ಟಣದ ಸ್ವಾಮಿ ವಿವೇಕಾನಂದ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಹಸಿರು ನೀಶಾನೆ ತೋರಿ ಚಾಲನೆ ನೀಡಿ ಅವರು ಮಾತನಾಡಿದರು. ಶೈಕ್ಷಣಿಕ ಪ್ರವಾಸದಲ್ಲಿ ವಿದ್ಯಾರ್ಥಿಗಳು ಕರ್ನಾಟಕ, ಕೇರಳ, ತಮಿಳನಾಡು ರಾಜ್ಯಗಳಲ್ಲಿ ಸಂಚರಿಸಿ ಅಲ್ಲಿನ ಸಂಸ್ಕೃತಿ, ಕಲೆ, ಸಾಹಿತ್ಯ ತಿಳಿದುಕೊಳ್ಳಲಿದ್ದಾರೆ. ದೇಶದಲ್ಲಿ ಪ್ರಸಿದ್ಧ ಪ್ರವಾಸಿ ತಾಣಗಳಿವೆ. ಅವುಗಳಿಗೆ ಭೇಟಿ ನೀಡಿ ಅಲ್ಲಿನ ಗತಕಾಲದಲ್ಲಿನ ಮಾಹಿತಿ ಪಡೆದುಕೊಂಡು ಜ್ಞಾನ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ದೈಹಿಕ ಶಿಕ್ಷಕ ನಾಗನಗೌಡ ಪಾಟೀಲ, ಭೀಮಸೇನರಾವ್‌ ಕುಲಕರ್ಣಿ, ಬಸಣ್ಣ ಬಾಲಗೌಡ್ರ, ಸಂತೋಷ ಭಂಟನೂರ,
ಎಸ್‌.ಎಂ. ಕಿರಣಗಿ, ಸೋಮಶೇಖರ ಪಂಚಗಲ್‌, ಶಿವಕುಮಾರ ವಿವೇಕಿ ಇದ್ದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next