Advertisement
ಮೆಟಗುಡ್ಡ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಧರ್ಮಸ್ಥಳ ಸಂಸ್ಥೆ ಮುಂದಾಗಿದ್ದು, ಸಂಸ್ಥೆ ಕಾರ್ಯದಿಂದ ಸ್ಥಳೀಯ ನಾಯಕರಿಗೆ ಹೆಚ್ಚಿನ ಅನುಕೂಲವಾಗಿದೆ. ಕೆರೆಯ ಹೂಳನ್ನು ರೈತರು ತಮ್ಮ ಹೊಲಗಳಿಗೆ ಉಚಿತವಾಗಿ ಸಾಗಿಸಿಕೊಳ್ಳುತ್ತಿರುವುದರಿಂದ ರೈತರ ಹೊಲಗಳಲ್ಲಿ ಫಲವತ್ತತೆ ಹೆಚ್ಚುತ್ತಿದೆ. ಅಂದಾಜು 60ಕ್ಕೂ ಹೆಚ್ಚು ವಿಸ್ತಾರದಲ್ಲಿ ಹರಡಿಕೊಂಡಿರುವ ಮೆಟಗುಡ್ಡ ಕೆರೆ ತನ್ನದೇಯಾದ ಇತಿಹಾಸವನ್ನು ಹೊಂದಿದೆ.
Related Articles
Advertisement
ಲಕ್ಷಾಂತರೂ ರೂ. ವ್ಯಯ:
ಹಲವಾರು ದಶಕದಿಂದ ಕೆರೆಯಲ್ಲಿ ಹೂಳು ತುಂಬಿಕೊಂಡಿದೆ. ಸಾಕಷ್ಟು ವಿಸ್ತಾರ ಹೊಂದಿರುವ ಕೆರಯಲ್ಲಿನ ಹೂಳೆತ್ತುವ ಕಾರ್ಯಕ್ಕೆ ಧರ್ಮಸ್ಥಳ ಸಂಸ್ಥೆ 11,60,000 ರೂ. ವ್ಯಯಿಸುತ್ತಿದೆ. ಒಮ್ಮೆ ಕೆರೆಯಲ್ಲಿನ ಹೂಳೆತ್ತಿದರೆ ಮುಂದಿನ ಅನೇಕ ವರ್ಷಗಳ ಕಾಲ ಸುತ್ತಲಿನ ಜಮೀನುಗಳಿಗೆ ನೀರಾವರಿ ಹಾಗೂ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರು ಒದಗಿಸಿದಂತಾಗುತ್ತದೆ.
ಅಂತರ್ಜಲ ವೃದ್ಧಿಗೆ ಸಹಕಾರಿ:
ಕೆರಯಲ್ಲಿನ ಹೂಳೆತ್ತುವುದರಿಂದ ಭೂಮಿಯಲ್ಲಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗುತ್ತದೆ. ಅಂತರ್ಜಲ ವೃದ್ಧಿಯಿಂದ ಭೂಮಿಯ ತೇವಾಂಶ ಹೆಚ್ಚುತ್ತದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ. ಗ್ರಾಮದ ರೈತರಿಗೆ ಆದ್ಯತೆ: ಸದ್ಯ ಕೆರೆಯಲ್ಲಿ ಒಂದು ಹಿಟಾಚಿ ಮೂಲಕ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಆದರೆ ಸದ್ಯ ಹೂಳನ್ನು ಗ್ರಾಮಸ್ಥರ ಜಮೀನುಗಳಿಗೆ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮದ ರೈತರ ಬೇಡಿಕೆ ಕಡಿಮೆಯಾದರೆ ಬೇರೆ ಗ್ರಾಮದ ರೈತರಿಗೆ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತದೆ. ನೂರಾರು ಟ್ರಾÂಕ್ಟರ್‌ಗಳ ಲೋಡ್: ಕೆರೆಯಲ್ಲಿನ ಹೂಳನ್ನು ತಮ್ಮ ಜಮೀನುಗಳಿಗೆ ಹಾಕಿಸಲು ರೈತರು ತಾ ಮುಂದು ನಾ ಮುಂದು ಎಂದು ಮುಗಿಬೀಳುತ್ತಿದ್ದಾರೆ. ಇದರಿಂದಾಗಿ ನಿತ್ಯ 200ರಿಂದ 250 ಟ್ರ್ಯಾಕ್ಟರ್ ಲೋಡ್ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಒಂದು ಕಾರ್ಯದಿಂದ ಹಲವಾರು ಸಮಾಜಮುಖೀ ಕಾರ್ಯಕ್ಕೆ ಮುಂದಾಗಿರುವ ಧರ್ಮಸ್ಥಳ ಸಂಸ್ಥೆ ಕಾರ್ಯಕ್ಕೆ ತಾಲೂಕಿನಾದ್ಯಂತ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ.
ಗೋವಿಂದಪ್ಪ ತಳವಾರ