Advertisement
ನಗರದ ಜಿಲ್ಲಾಡಳಿತ ಭವಣದಲ್ಲಿರುವ ಜಿಲ್ಲಾ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ ವತಿಯಿಂದ ಸ್ಥಳೀಯ ಸಂಸ್ಥೆಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸುವ ಕುರಿತು ರೂಪಿಸಿರುವ ಚಿಲುಮೆ ಯೋಜನೆ ಅನುಷ್ಠಾನಗೊಳಿಸುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬರಪೀಡಿತ ಜಿಲ್ಲೆಯಲ್ಲಿ ಮಳೆ ನೀರು ಸದ್ಬಳಕೆ ಬಹಳ ಮುಖ್ಯ ಎಂದರು.
Related Articles
Advertisement
ಜಿಲ್ಲಾಧಿಕಾರಿ ಎಚ್ಚರಿಕೆ: ಗೌರಿಬಿದನೂರು ತಾಲೂಕಿನ ಪಿನಾಕಿನಿ ನದಿ, ಚಿಂತಾಮಣಿಯ ರಾಮಕುಂಟೆ, ಶಿಡ್ಲಘಟ್ಟದ ಗೌಡನ ಕೆರೆ, ಚಿಕ್ಕಬಳ್ಳಾಪುರದ ಅಮಾನಿ ಗೋಪಾಲಕೃಷ್ಣ ಕೆರೆ ಬಹುದೊಡ್ಡ ಕೆರೆಗಳಾಗಿದ್ದು ಹೂಳು ತುಂಬಿಕೊಂಡಿದೆ. ಜಿಲ್ಲೆಯಲ್ಲಿ ಮಳೆಯಾದರೂ ಮಳೆ ನೀರು ಸಂಗ್ರಹ ಮಾಡಲಿಕ್ಕೆ ಸರಿಯಾದ ವೈಜ್ಞಾನಿಕ ಯೋಜನೆ ಅಳವಡಿಕೆ ಮಾಡಿಕೊಳ್ಳಲು ಜನರು ಮುಂದೆ ಬರುತ್ತಿಲ್ಲ.
ಇದರಿಂದ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯು ಆತಂಕಕಾರಿ ಮಟ್ಟಕ್ಕೆ ತಲುಪುತ್ತದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಎಚ್ಚರಿಸಿದರು. ಕಾರ್ಯಾಗಾರದಲ್ಲಿ ಜಿಪಂ ಸಿಇಒ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾಧಿಕಾರಿ ರೇಣುಕಾ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಮಳೆ ನೀರು ಕೊಯ್ಲು ಯೋಜನೆಗೆ 10ರಿಂದ 15 ಸಾವಿರ ರೂ. ವೆಚ್ಚ: ಕಾರ್ಯಾಗಾರದಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆಗೆ ಬಗ್ಗೆ ವಿಶೇಷ ತರಬೇತಿ ನೀಡಿದ ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಹಿರಿಯ ವಿಜ್ಞಾನಿ ಎ.ಆರ್.ಶಿವಕುಮಾರ್ ಮಾತನಾಡಿ, ಸುಮಾರು 24 ವರ್ಷಗಳಿಂದ ಮಳೆ ನೀರು ಶುದ್ಧೀಕರಿಸಿಕೊಂಡು ನಮ್ಮ ಇಡೀ ಕುಟುಂಬ ಮಳೆ ನೀರನ್ನೇ ಉಪಯೋಗಿಸುತ್ತಿದ್ದೇವೆ. ಮನೆಯ ನಿರ್ಮಾಣ ಹಂತದಲ್ಲಿ ಮಳೆ ನೀರಿನ ಕೊಯ್ಲು ಯೋಜನೆಯನ್ನು ಸುಲಭವಾಗಿ ಅಳವಡಿಕೆ ಮಾಡಿಕೊಳ್ಳಬಹುದು.
ಇದಕ್ಕೆ ಕನಿಷ್ಠ 10,000 ದಿಂದ ಗರಿಷ್ಠ 15,000 ರೂ.ವರೆಗೂ ವೆಚ್ಚ ತಗಲುತ್ತದೆ. ಈಗಾಗಲೇ ಬೆಂಗಳೂರಿನಲ್ಲಿ 1.25 ಲಕ್ಷ ಜನರು ಮಳೆ ನೀರು ಕೊಯ್ಲು ಅಳವಡಿಕೆ ಮಾಡಿಕೊಂಡಿದ್ದಾರೆ. 100 ಚದರ ಅಡಿಗೆ ಮಳೆ ನೀರು ಕೊಯ್ಲು ಅಳವಡಿಸಿದರೆ ವಾರ್ಷಿಕವಾಗಿ 715 ಲೀ. ನೀರು ಸಂಗ್ರಹ ಆಗುತ್ತದೆ ಎಂದರು.
ನಗರ ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳು, ಸ್ವಯಂಸೇವಕರು ಪ್ರತಿ ಮನೆಗೂ ಭೇಟಿ ನೀಡಿ ಮಳೆ ನೀರು ಕೊಯ್ಲು ಯೋಜನೆಯ ಬಗ್ಗೆ ಮಾಹಿತಿ ನೀಡಿ ಹಾಗೂ ಯೋಜನೆಯ ಉಪಯೋಗಗಳನ್ನು ಮನವರಿಕೆ ಮಾಡಬೇಕು. ಸೆ.15 ರೊಳಗಾಗಿ ಚಿಲುಮೆ ಯೋಜನೆ ಅಳವಡಿಸಿಕೊಳ್ಳುವ ಮನೆಯ ಮಾಲೀಕರಿಗೆ ಜಿಲ್ಲಾಡಳಿತದಿಂದ ಐದು ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ.-ಅನಿರುದ್ಧ್ ಶ್ರವಣ್, ಜಿಲ್ಲಾಧಿಕಾರಿ