Advertisement

100 ದೇಗುಲಗಳಲ್ಲಿ ಉಚಿತ ಸಾಮೂಹಿಕ ವಿವಾಹ: ಕೋಟ

10:45 PM Oct 20, 2019 | Team Udayavani |

ಬೆಳಗಾವಿ: ರಾಜ್ಯದ ಸುಮಾರು 100 ದೇವಸ್ಥಾನ ಗಳಲ್ಲಿ ಒಂದು ಸಾವಿರ ಬಡವರ ಉಚಿತ ಸಾಮೂ ಹಿಕ ವಿವಾಹ ನಡೆಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಆಯಾ ಜಿಲ್ಲೆಯ ಬಡವರ ಮದುವೆಗೆ ತಗ ಲುವ ವೆಚ್ಚವನ್ನು ಮುಜರಾಯಿ ಇಲಾಖೆ ಭರಿಸ ಲಿದೆ. ವಧು, ವರನಿಗೆ ಉಚಿತ ಬಟ್ಟೆ, ಕರಿಮಣಿ ಯನ್ನು ಉಡುಗೊರೆಯಾಗಿ ನೀಡಲಾಗುವುದು. ನಂತರದಲ್ಲಿ ವಿವಾಹ ನೋಂದಣಿ ಮಾಡಿ ಕೊಡ ಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕುಕ್ಕೆ ಸುಬ್ರ ಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ ಸೇರಿ ರಾಜ್ಯದ ಅನೇಕ ದೇವಸ್ಥಾನಗಳಲ್ಲಿ ಪ್ರಾಧಿಕಾರ ರಚನೆ ಮಾಡ ಬೇಕು ಎಂಬ ಬೇಡಿಕೆ ಕೇಳಿ ಬರುತ್ತಿದೆ. ಧಾರ್ಮಿಕ ಪರಿಷತ್ತು ಹಾಗೂ ನಮ್ಮ ಇಲಾಖೆಯಿಂದ ಚರ್ಚಿಸಿ, ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗು ವುದು. ಸ್ವಾಭಾವಿಕವಾಗಿ ಸವದತ್ತಿ ಯಲ್ಲಮ್ಮ ದೇವ ಸ್ಥಾನದಲ್ಲಿಯೂ ಅಭಿವೃದ್ಧಿ ದೃಷ್ಟಿಯಿಂದ ಕೆಲ ವೊಂದು ಲೋಪದೋಷಗಳನ್ನು ಸರಿ ಮಾಡ ಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಲಾಖೆ ಕ್ರಮ ಕೈಗೊಳ್ಳ ಲಿದೆ ಎಂದರು.

ಯಾವುದೇ ದೇವಸ್ಥಾನಗಳ ಜಾಗ ವನ್ನು ಅತಿಕ್ರಮಣ ಮಾಡುತ್ತಿರುವ ಬಗ್ಗೆ ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು. ಅಂಗಡಿ ಮುಂಗಟ್ಟು ಗಳು ಇದ್ದರೆ ಅಂತವು ಗಳನ್ನು ತೆರವುಗೊಳಿಸಿ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಲಾಗುವುದು. ದೇವಸ್ಥಾನದ ಆವರಣದಲ್ಲಿ ಕುಂಕುಮ, ಶ್ರೀಗಂಧದದಲ್ಲಿ ಕಲ ಬೆರಕೆ ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಲಾ ಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next